ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ: ಡಿಸಿ ಕೃಷ್ಣ ಬಾಜಪೇಯಿ

ಹಾವೇರಿ11:  17ನೆಯ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಮಾಚರ್್ 10 ರಿಂದಲೇ ನೀತಿ ಸಂಹಿತೆ  ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಮಾಚರ್್ 28 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಿದೆ. ಎಪ್ರಿಲ್ 23 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನವಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದ ಚುನಾವಣಾ ಸಿದ್ಧತೆ ಕುರಿತಂತೆ ಮಾಹಿತಿ ನೀಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ ಕನರ್ಾಟಕ ರಾಜ್ಯದಲ್ಲಿ ಎರಡು ಮತ್ತು ಮೂರನೆಯ ಹಂತದಲ್ಲಿ ನಡೆಯಲಿದೆ. ಹಾವೇರಿ ಲೋಕಸಭಾ ( ಹಾವೇರಿ ಜಿಲ್ಲೆಯ ಐದು ತಾಲೂಕು ಹಾಗೂ ಗದಗ ಜಿಲ್ಲೆಯ ಮೂರು ತಾಲೂಕು) ಚುನಾವಣೆ ಮೂರನೆಯ ಹಂತದಲ್ಲಿ ನಡೆಯಲಿದೆ.  ಮಾ.28 ರಂದು ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

           ವೇಳಾಪಟ್ಟಿ: ಚುನಾವಣಾ ವೇಳಾಪಟ್ಟಿಯನ್ನು ವಿವರಿಸಿದ ಕೃಷ್ಣ ಬಾಜಪೇಯಿ ಅವರು ಮಾ.28 ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಏ.04ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಏ.05 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. 08 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಏ.23 ರಂದು ಮತದಾನ ನಡೆಯಲಿದೆ. ಮೇ 23ರಂದು  ಮತ ಎಣಿಕೆ ಕಾರ್ಯ ನಡೆಯಲಿದೆ.  ಮೇ. 27 ರೊಳಗಾಗಿ ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

   ಕ್ಷೇತ್ರ ವ್ಯಾಪ್ತಿ: ಹಾವೇರಿ ಲೋಕಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹಾವೇರಿ ಜಿಲ್ಲೆಯ  ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್ ಹಾಗೂ ಗದಗ ಜಿಲ್ಲೆಯ ಶಿರಹಟ್ಟಿ, ಗದಗ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದೆ.  ಹಾವೇರಿ ಜಿಲ್ಲಾಧಿಕಾರಿಗಳು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿದ್ದು, ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ನಾಮಪತ್ರ ಸಲ್ಲಿಸಬೇಕು ಎಂದು ತಿಳಿಸಿದರು.

ಮತದಾರರ ವಿವರ:  ಹಾವೇರಿ  ಮತ್ತು ಗದಗ  ಜಿಲ್ಲೆಯ  ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8,61,548 ಪುರುಷರು ಹಾಗೂ 8,23,302 ಮಹಿಳೆಯರು ಸೇರಿದಂತೆ 16,84,850 ಮತದಾರರು ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ(16-1-2019ರಂತೆ). ( ಹಾವೇರಿ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ   4,95,921 ಮಹಿಳೆಯರು  ಹಾಗೂ 530131 ಪುರುಷರು ಸೇರಿ 10,21,052 ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದ 3,27,381 ಮಹಿಳೆಯರು ಹಾಗೂ 3,31,417ಪುರುಷ ಮತದಾರರು ಒಳಗೊಂಡಂತೆ 658798 )  ನೊಂದಣಿ ಕಾರ್ಯ ಮುಂದುವರೆದಿದೆ. ಯುವ ಮತದಾರರ ನೋಂದಣಿ ಕಾರ್ಯಕ್ಕೆ ಇನ್ನೂ 10 ದಿವಸ ಕಾಲಾವಕಾಶವಿದ್ದು ಈವರೆಗೆ ಮತದಾನ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳದರು ನೋಂದಾಯಿಸಿಕೊಳ್ಳಬಹುದು. ಶೇ.100 ರಷ್ಟು ಮತದಾರರಿಗೆ ಭಾವಚಿತ್ರ ಸಹಿತ ಎಪಿಕ್ ಕಾಡರ್್ ವಿತರಿಸಲಾಗಿದೆ ಎಂದು ತಿಳಿಸಿದರು.  ವೋಟರ್ ಸ್ಲೀಪ್: ಭಾವಚಿತ್ರವಿರುವ ವೋಟರ್ ಸ್ಲೀಪ್ಗಳನ್ನು ಮತದಾನದ ಏಳು ದಿವಸ ಮುಂಚಿತವಾಗಿ ಎಲ್ಲ ಮತದಾರರಿಗೆ ತಲುಪಿಸಲಾಗುವುದು. ಈಗಾಗಲೇ ಸಹಾಯಕ ಚುನಾವಣಾಧಿಕಾರಿಗಳು ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಮುದ್ರಿಸುವ ಕಾರ್ಯಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

ಮತದಾನ ಮಾಡಲು ಪಾಸ್ ಪೋಟರ್್, ಡ್ರೈವಿಂಗ್ ಲೈಸನ್ಸ್ಮ ಸೇವಾ ಭದ್ರತಾ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಭಾವಚಿತ್ರ ಒಳಗೊಂಡ ಪಾಸ್ಬುಕ್, ಪಾನ್ಕಾಡರ್್, ಉದ್ಯೋಗ ಖಾತ್ರಿ ಜಾಬ್ ಕಾಡರ್್, ಎನ್.ಪಿ. ಸ್ಮಾಟರ್್ ಕಾಡರ್್, ಕಾಮರ್ಿಕ ಇಲಾಖೆಯ ಆರೋಗ್ಯ ವಿಮಾ ಸ್ಮಾಟರ್್ ಕಾಡರ್್, ಭಾವಚಿತ್ರವಿರುವ ಪೆನ್ಶೆನ್ ದಾಖಲೆ, ಆಧಾರ್ ಕಾಡರ್್, ಶಾಸಕರು ಹಾಗೂ ಸಂಸದರಿಗೆ ವಿತರಿಸಿದ ಅಧಿಕೃತ ಐಡಿಂಟಿ ಕಾಡರ್್ ಬಳಸಿ ಮತದಾನ ಮಾಡಬಹುದು ಎಂದು ತಿಳಿಸಿದರು.

    ಮತಗಟ್ಟೆ ವಿವರ: ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ( ಹಾವೇರಿ-ಗದಗ ಜಿಲ್ಲೆ) 1972 ಮತಗಟ್ಟೆಗಳನ್ನು ತೆರೆಯಲಾಗುವುದು.  ಗದಗ ಮೂರು ವಿಧಾನಸಭಾ ವ್ಯಾಪ್ತಿಯಲ್ಲಿ 740 ಹಾಗೂ  ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1232 ಮತಗಟ್ಟೆಗಳನ್ನು  ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಲೈಟಿಂಗ್, ಶೌಚಾಲಯ, ಪಿಠೋಪಕರಣ, ರ್ಯಾಂಪ್, ಶೆಲ್ಟರ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. 

           ದೂರು ನಿರ್ವಹಣೆ: ಚುನಾವಣಾ ಅಕ್ರವುಗಳು ಕಂಡು ಬಂದರೆ ಸಾರ್ವಜನಿಕರು ದೂರು ನೀಡಲು ನೆರವಾಗುವಂತೆ ಟೋಲ್ ಫ್ರೀ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. 1950 ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ದೂರು ನೀಡಬಹುದು. ವಿಡಿಯೋ ಇತ್ಯಾದಿ ಮಾಹಿತಿ ನೀಡಲು 94484 84413 ವಾಟ್ಸಪ್ ಸಂಖ್ಯೆಗೆ ದೂರು ನೀಡಬಹುದಾಗಿದೆ. ಇದಲ್ಲದೆ ನೂತನವಾಗಿ ಈ ಚುನಾವಣೆಯಿಂದ ಭಾರತೀಯ ಚುನಾವಣಾ ಆಯೋಗ ಗೂಗಲ್ ಆಪ್ "ಸಿ ವ್ಹಿಜಿಲ್  ಎಂಬ ಆಪ್ನ್ನು ರೂಪಿಸಿದೆ. ಸಾರ್ವಜನಿಕರು ಇದನ್ನು ಡೌನ್ಲೋಡ್ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳ ಕುರಿತಂತೆ ಫೋಟೋ ಅಥವಾ ವಿಡಿಯೋ ಮೂಲಕವೂ ದೂರು ಸಲ್ಲಿಸಬಹುದು. ಈ ದೂರು ನಿರ್ವಹಣೆಗಾಗಿ ಪ್ರತ್ಯೇಕ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ರಾಜಕೀಯ ಪಕ್ಷಗಳ ಸಭೆ-ಸಮಾರಂಭಗಳ ಅನುಮತಿಗಾಗಿ ಅಜರ್ಿ ಸಲ್ಲಿಸಿದ 24 ತಾಸಿನಲ್ಲಿ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಅನುಮತಿ ಪಡೆಯಲು ಸುವಿಧಾ ಅಪ್ಲಿಕೇಷನ್ಲ್ಲೂ ಅಜರ್ಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

    ಸೂಕ್ಷ್ಮ- ಅತೀ ಸೂಕ್ಷ್ಮ: ಜಿಲ್ಲೆಯ 295 ಮತಗಟ್ಟೆಗಳನ್ನು ಸೂಕ್ಷ್ಮ ಮತೆಗಳೆಂದು ಗುರುತಿಸಲಾಗಿದೆ. 31 ದುರ್ಬಲ ವರ್ಗದವರು ವಾಸಿಸುವ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ 214 ಜನರನ್ನು ಪ್ರಭಾವ ಶಾಲಿಗಳೆಂದು ಗುರುತಿಸಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.

    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಉಪಸ್ಥಿತರಿದ್ದರು