ಜಿಲ್ಲಾ ಸರ್ಜನ್ ಡಾ.ಗಿರಿಧರ ಕುಕನೂರ ಸಿಂಗಪೂರಗೆ ಪ್ರಯಾಣ

ಧಾರವಾಡ 24: ಧಾರವಾಡ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಗಿರಿಧರ ಕುಕನೂರ ಅವರು "ಫ್ರಿ-ಹಾಸ್ಪಿಟಲ್ ಎಮರ್ಜನ್ಸಿ ಕೇರ್ ಕುರಿತು ಕಾಯರ್ಾಗಾರದಲ್ಲಿ ಭಾಗವಹಿಸಲು ಮೇ.26 ರಂದು ಸಿಂಗಪೂರಕ್ಕೆ ತೆರಳಿಲಿದ್ದಾರೆ.

ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸುವ ಪೂರ್ವದಲ್ಲಿ ಸ್ಥಾನಿಕವಾಗಿ ನೀಡುವ ಪ್ರಾಥಮಿಕ ಚಿಕಿತ್ಸೆಗೆ ಸಂಬಂಧಿಸಿದಂತೆ ಅನೇಕ ವಿನೂತನ ಪ್ರಯೋಗಗಳೊಂದಿಗೆ ನೂತನ ನೀತಿಗಳನ್ನು ಅಳವಡಿಸಿಕೊಂಡು "ಸಿಂಗ್ ಹೆಲ್ತ್" ಹೆಸರಿನಲ್ಲಿ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿರುವ ಸಿಂಗಪುರದಲ್ಲಿ ಈ ಕಾಯರ್ಾಗಾರ ನಡೆಯಲಿದೆ.

ರಾಜ್ಯದ ವಿವಿಧ 40 ಜನ ವೈದ್ಯರ ತಂಡದೊಂದಿಗೆ ಡಾ.ಗಿರಿಧರ ಕುಕನೂರ ಭಾಗವಹಿಸಲಿದ್ದು, ಕಾಯರ್ಾಗಾರದ ನಂತರ ಅವರು ಮಾಸ್ಟರ್ ಟ್ರೇನರ್ ಆಗಿ ವಿವಿಧ ಜಿಲ್ಲಾಸ್ಪತ್ರೆ ವೈದ್ಯರಿಗೆ ತರಬೇತಿ ಹಾಗೂ ಮಾಹಿತಿ ನೀಡಲಿದ್ದಾರೆ. 

ಕಾಯರ್ಾಗಾರವು ಸಿಂಗಪುರದಲ್ಲಿ ಮೇ 26 ರಿಂದ ಜೂನ್ 1 ರ ವರೆಗೆ ನಡೆಯಲಿದೆ.