ಎಸ್.ಎಮ್. ನೆರಬೆಂಚಿಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪ್ರದಾನ
District Rajyotsava Award presented to S.M. Nerabenchi
ವಿಜಯಪುರ 04; ಇತ್ತೀಚೆಗೆ ಜಿಲ್ಲಾ ಸಾಹಿತ್ಯ ಪರಿಷತ್ತು ವತಿಯಿಂದ 70ನೇ ಕನ್ನಡ ರಾಜೋತ್ಸವದ ಅಂಗವಾಗಿ ಸಂಕೀರ್ಣ (ಶಿಕ್ಷಣ, ಸಾಹಿತ್ಯ ಸಂಘಟನೆ) ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ಜಿಲ್ಲಾ ರಾಜೋತ್ಸವ ಪ್ರಶಸ್ತಿಯನ್ನು ವಿಜಯಪುರದ ಗಾಂಧೀಭವನದಲ್ಲಿ ನಡೆದ ಸಮಾರಂಭದಲ್ಲಿ ಎಸ್.ಎಂ.ನೆರಬೆಂಚಿ ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇವರು 3 ವರ್ಷಗಳ ಕಾಲ ಎಲೇಕ್ಟಿಕಲ್ ಇಂಜನೀಯರಾಗಿ ಪುಣೆ, ಬೆಂಗಳೂರನಲ್ಲಿ ಮೊದಲು ಕೆಲಸ ಮಾಡಿದರು. ತದ ನಂತರ ಸಿವಿಲ್ ಗುತ್ತಿಗೆದಾರನಾಗಿ 3ವರ್ಷ ಸೇವೆ ಸಲ್ಲಿಸಿದ್ದಾರೆ. 23 ವರ್ಷದ ಹಿಂದೆ ತಾಲೂಕಿನ ಬಳಬಟ್ಟಿಯ ಗ್ರಾಮದಲ್ಲಿ ಇವರು ನಿರ್ಮಿಸಿದ ಸರ್ಕಾರಿ ಪ್ರೌಢಶಾಲೆ ಇಂದಿಗೂ ಗಟ್ಟಿಮುಟ್ಟಾಗಿದೆ. ಇದು ಇವರ ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ. ಪಟ್ಟಣದ ವಿದ್ಯಾರ್ಥಿಗಳು ದೂರದ ಪರಸ್ಥಳಗಳಿಗೆ ಹೋಗಿ ಐಟಿಐ ಕಲಿಯುವ ಪರಿಸ್ಥಿತಿ ಇತ್ತು. ಇವರು 2002ರಲ್ಲಿ ಬಿಬಿಆರ್ ಐಟಿಐ ಸಂಸ್ಥೆ ಸ್ಥಾಪಿಸಿ ಸ್ಥಳೀಯ ವಿದ್ಯಾರ್ಥಿಗಳ ಅಲೆದಾಟವನ್ನು ತಪ್ಪಿಸಿದರು.ಇವರು ಜನರಲ್ಲಿ ಜಾಗೃತಿ ಮೂಡಿಸುವಂಥ ಕೆಲವು ಕಥೆ, ಕವನ, ಲೇಖನಗಳನ್ನೂ ಬರೆದಿದ್ದಾರೆ. ಧಾರವಾಡ ಆಕಾಶವಾಣಿ ಕೇಂದ್ರವು ಅವುಗಳನ್ನು ಪ್ರಸಾರ ಮಾಡಿದೆ. ರಾಜ್ಯ ಐಟಿಐ ಕಾಲೇಜುಗಳ ಸಂಘದ ಅಧ್ಯಕ್ಷರಾಗಿಯೂ 2016ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ಐಟಿಐ ನೌಕರರು ಹಾಗೂ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ರಾಜ್ಯ ಮಟ್ಟದ ಕೆಲವು ಹೋರಾಟಗಳನ್ನು ಸಂಘಟಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 