ಜಿಲ್ಲಾ ಮಟ್ಟದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ: ಮಹಾರಾಷ್ಟ್ರದ ಅಪ್ಜಲ್ ಖಾನ್ ಮುಜಾವರ್ ಪ್ರಥಮ
District Level Sangrani Stone Lifting Competition: Apjal Khan Mujawar of Maharashtra stands first
ಗುಳೇದಕೊಪ್ಪ 18: ಧಾರವಾಡ ಜಿಲ್ಲೆಯ ಸುಕ್ಷೇತ್ರ ಗುಳೇದಕೊಪ್ಪ ಗ್ರಾಮದಲ್ಲಿ ಫೆಬ್ರವರಿ 12ರಿಂದ 16ರವರೆಗೆ ನಡೆದ ಅದ್ಧೂರಿ ಜಾತ್ರೆ ಹಾಗೂ ಶಿವ ರಥೋತ್ಸವ ನಿಮಿತ್ಯ ಜಿಲ್ಲಾ ಮಟ್ಟದ ಸಂಗ್ರಾಣಿ ಕಲ್ಲು ಎತ್ತುವ ಸ್ಫರ್ಧೆ ನಡೆಯಿತು. ಭಾರಿ ಜಿದ್ದಾಜಿದ್ದಿನ ಸ್ಫರ್ದೆಯಲ್ಲಿ 96 ಕೆ.ಜಿ ಸಂಗ್ರಾಣಿ ಕಲ್ಲು ಎತ್ತುವ ಮೂಲಕ ಮಹಾರಾಷ್ಟ್ರ ಮೂಲದ ಅಪ್ಜಲ್ ಖಾನ್ ಮುಜಾವರ್ ಪ್ರಥಮ ಸ್ಥಾನ ಪಡೆದರು. 94 ಕೆ.ಜಿ ಕಲ್ಲು ಎತ್ತಿ ಶಬ್ಬೀರ್ ಮುನವಳ್ಳಿ 2ನೇ ಸ್ಥಾನ ಪಡೆದರು. ಮೂರನೇ ಸ್ಥಾನ ಮೂವರು ಸ್ಫರ್ದಿಗಳ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಕೊನೆಯದಾಗಿ 85 ಕೆಜಿ ಎತ್ತುವ ಮೂಲಕ ಈರಣ್ಣ ಮೊರಬದ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಕ್ರೀಡಾಪಟುಗಳು ಸಂಗ್ರಾಣಿ ಕಲ್ಲು ಎತ್ತುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿಸಿದರು. ಎಲ್ಲಾ ಸ್ಫರ್ಧಾಳುಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು. ದೇವಸ್ಥಾನ ಆವರಣದ ಪಕ್ಕದ ಆವರಣದಲ್ಲಿ ಸಂಗ್ರಾಣಿ ಕಲ್ಲು ಎತ್ತಲು ಮೈದಾನವನ್ನು ಸಿದ್ಧತೆ ಮಾಡಲಾಗಿತ್ತು. ಮಧ್ಯಾಹ್ನ 1 ಗಂಟೆಗೆ ಸ್ಪರ್ಧೆ ಆರಂಭಗೊಂಡು, ರೋಚಕ ಕ್ಷಣಕ್ಕೆ ಸಾಕ್ಷಿ ಆಯಿತು.ಯುವ ಸಮುದಾಯ ಕೆಕೆ, ಸಿಳ್ಳೆ ಹೊಡೆಯುವ ಮೂಲಕ ಸ್ಪರ್ಧಿಗಳಲ್ಲಿ ಉತ್ಸಾಹ ಮೂಡಿಸಿತು. ಹೆಚ್ಚು ತೂಕದ ಕಲ್ಲು ಎತ್ತಿದಾಗ ಸ್ಪರ್ಧಿಗಳಿಗೆ ಪ್ರೋತ್ಸಾಹ ರೂಪದಲ್ಲಿ ವೀಕ್ಷಕರು ಹಣ ನೀಡಿ ಸ್ಪರ್ಧೆಗೆ ಹುರುದುಂಬಿಸಿದರು.ಸ್ಪರ್ಧೆಗಳು ಮುಗಿದ ನಂತರ ಈಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಜೇತರಿಗೆ ಬಹುಮಾನ ಮತ್ತು ನಗದು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತೆ ಕುಮಾರಿ ಮಲಪ್ರಭಾ ಜಾಧವ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಗ್ರಾಮಸ್ಥರಾದ ಶಿವಾಜಿ ಜಾಧವ, ವಿಠ್ಠಲ ಪಿರಗಾರ, ಮಾರುತಿ ಕದಂ, ಪತ್ರಕರ್ತರಾದ ಸಹದೇವ ಮಾನೆ, ಕುಮಾರ ಚವ್ಹಾಣ ಇದ್ದರು. ನಿರ್ಣಾಯಕರಾಗಿ ಶಿವಾಜಿ ಹೊಸಮನಿ, ರಾಮು ಪಿರಗಾರ, ಮುಗಪ್ಪ ಗಾಣಿಗೇರ ಅಂತಿಮ ನಿರ್ಣಯ ನಿಡಿದರು. ಈ ವೇಳೆ ಕಮಿಟಿಯ ಪುಂಡಲೀಕ ಭೋಸಲೆ, ಮಂಜುನಾಥ ಎದುನವರ, ಮಡಿವಾಳಿ ಖಂಡಪ್ಪನವರ, ಈಶ್ವರ ಹಳ್ಳಿಗೇರಿ ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 