ಜಿಲಾ ್ಲಕಾನೂನು ಅರಿವು ಕಾರ್ಯಕ್ರಮ
District Legal Awareness Program
ಜಿಲಾ ್ಲಕಾನೂನು ಅರಿವು ಕಾರ್ಯಕ್ರಮ
ಕಾರವಾರ 25: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರವಾರ, ಜಿಲ್ಲಾ ಪೋಲಿಸ್ ಇಲಾಖೆ, ಕಾರವಾರ, ಪ್ರೀಮಿಯರ್ ಸೈನ್ಸ್ ಎಂಡ್ ಕಾಮರ್ಸ್ ಪಿ ಯು ಕಾಲೇಜ್, ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ವಸ್ತು ಜಾಗೃತಿ ಮತ್ತು ಮಾದಕವಸ್ತು ಮುಕ್ತ ಭಾರತಕ್ಕಾಗಿ ಸ್ವಾಸ್ಥ್ಯ ಸಂಚರಣೆ ಯೋಜನೆ, 2025 (ಓಂಐಖಂ-ಆಂಘಓ’ ಖಛಿಜಟಜ-2025) ಅಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮವು ಪ್ರೀಮಿಯರ್ ಸೈನ್ಸ್ ಎಂಡ್ ಕಾಮರ್ಸ್ ಪಿ.ಯು. ಕಾಲೇಜ್, ಕಾರವಾರದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಕವಿತಾ ಶಿವರಾಯ ಉಂಡೋಡಿ ಉದ್ಘಾಟಿಸಿದರು. ಪ್ರೀಮಿಯರ್ ಸೈನ್ಸ್ ಎಂಡ್ ಕಾಮರ್ಸ್ ಪಿ. ಯು. ಕಾಲೇಜ್ ನ ಪ್ರಾಂಶುಪಾಲ ಆರ್. ಗೋವಿಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಪೊಲೀಸ್ ಉಪಾಧೀಕ್ಷಕ ಎಸ್.ವಿ.ಗೀರೀಶ್ ಉಪಸ್ಥಿತರಿದ್ದರು. ಶಿರವಾಡದ ಮಾರಿಯಾ ಮಾಗೋ ಫ್ಲೋರಾ ಆಸ್ಪತ್ರೆಯ ವೈದ್ಯೆ ಡಾ. ನಮಿತಾ ವರ್ಗೀಸ್ ಉಪನ್ಯಾಸ ನೀಡಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 