ಬಾಲ್ಯ ವಿವಾಹ ಮುಕ್ತ ರಥಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ
District Collector flags off child marriage free chariot
ಗದಗ 23: ಜಿಲ್ಲಾಡಳಿತ ಭವನದ ಆವರಣದಲ್ಲಿ ಸ್ಪಂದನ ಅಸೋಸಿಯೇಷನ ಹಾಗೂ ವಿವಿಧ ಇಲಾಖೆಯವರ ಸಹಯೋಗದೊಂದಿಗೆ " ಬಾಲ್ಯವಿವಾಹ ಮುಕ್ತರಥಕ್ಕೆ ಚಾಲನೆಯನ್ನು ಜಿಲ್ಲಾಧಿಕಾರಿಗಳಾದ ಸಿಎನ್ಶ್ರೀಧರ ಅವರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ ಸಿಎಸ್ಶಿವನಗೌಡ್ರ ಅವರು ಹಸಿರು ಬಾವುಟವನ್ನು ತೋರಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಸ್ಪಂದನ ಅಸೋಸಿಯೇಷನ್ಸು ಶೀಲ ಅವರು ಬಾಲ್ಯವಿವಾಹ ಮುಕ್ತರಥ ಜಾಗೃತಿ ಜಾಥದ ಉದ್ದೇಶ ಮತ್ತು ಅದು ಇಂದಿನಿಂದ 5 ದಿನಗಳವರೆಗೆ ಗದಗ ಜಿಲ್ಲೆಯಲ್ಲಿ ಗದಗ, ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಸಂಚರಿಸಲ್ಲಿದ್ದು ನಮ್ಮ ಸಿಬ್ಬಂದಿ ಇದರೊಂದಿಗೆ ಸಂಚರಿಸುತ್ತಾ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಮಾತನಾಡಿ ಬಾಲ್ಯವಿವಾಹ ಮಾಡುವುದರದರಲ್ಲಿ ನಮ್ಮ ಜಿಲ್ಲೆ 6ನೇ ಸ್ಥಾನದಲ್ಲಿದೆ ಆದಷ್ಟೂ ಜನ ಜಾಗೃತಿ ಮೂಡಿಸೊಣ ಎಲ್ಲಾ ಇಲಾಖೆಯವರು ಒಟ್ಟಾಗಿ ಕೆಲಸ ಮಾಡೋಣ ಬಾಲ್ಯವಿವಾಹ ಮುಕ್ತರಾಜ್ಯವನ್ನಾಗಿ ಮಾಡೋಣ ಎಂದರು. ಆಐಖಂ ನ ಸದಸ್ಯ ಕಾರ್ಯದರ್ಶಿ ಅವರು ಮಾತನಾಡಿ ಬಾಲ್ಯವಿವಾಹ ನಿಷೇಧಕಾಯ್ದೆ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಯಾವುದೇ ಬಾಲ್ಯ ವಿವಾಹ ನಡೆದಲ್ಲಿ ಅವು ಅನುರ್ಜಿತವಾಗುತ್ತವೆ. ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲಾ ್ಲಮಕ್ಕಳ ಸಂರಕ್ಷಣಾಧಿಕಾರಿ (ಆಅಕಓ) ರಫೀಕಾ ಹಳ್ಳೂರು, ಕಾರ್ಮಿಕ ಇಲಾಖೆಯ ಅಧಿಕಾರಿ ಶೈಲ್ಸೋಮನಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾ ಅಧಿಕಾರಿ ರಾಧಾಮಣ್ಣೂರ, ಸ್ಪಂದನಾ ಅಸೋಸಿಯೇಷನ್ನವಿ. ಸುಶೀಲಾ ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ರಥ ಜಾಥಾ ಮೂಲಕ ಬಾಲ್ಯವಿವಾಹದ ದುಷ್ಪರಿಣಾಮಗಳು, ಕಾನೂನು ಕ್ರಮಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸಿ, ಸಮಾಜದಲ್ಲಿ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಂಕಲ್ಪ ವ್ಯಕ್ತಪಡಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 