ನವಜಾತ ಶಿಶು ಗಳಿಗೆ ‘ಜಾನ್ಸನ್‌ಬೇಬಿ ಕಿಟ್’ ವಿತರಣೆ
Distribution of ‘Johnson Baby Kit’ to newborn babies
ಲೋಕದರ್ಶನ ವರದಿ
ನವಜಾತ ಶಿಶು ಗಳಿಗೆ ‘ಜಾನ್ಸನ್‌ಬೇಬಿ ಕಿಟ್’ ವಿತರಣೆ
ಕಾರವಾರ 04 : ಇಲ್ಲಿನ ರೋಟರಿ ಸಂಸ್ಥೆಯವರು ಕ್ರಿಮ್ಸ ಅಧೀನ ಆಸ್ಪತ್ರೆಯ ಬಾಣಂತಿ ವಾರ್ಡಿಗೆ ಭೇಟಿ ನೀಡಿ, ಅಲ್ಲಿರುವ 15 ನವಜಾತ ಶಿಶು ಗಳಿಗೆ ‘ಜಾನ್ಸನ್‌ಬೇಬಿ ಕಿಟ್’ ವಿತರಿಸಿದರು. ಅದರಲ್ಲಿ ಪೌಡರ್, ಎಣ್ಣೆ, ಸಾಬೂನು ಇನ್ನಿತರ ಸಾಮಾನುಗಳು ಇದ್ದವು. ಈ ಸಮಯದಲ್ಲಿ ರೋಟರಿ ಅಧ್ಯಕ್ಷ ಡಾಽಽ ಅರ್ಜುನ್ ಉಪಾಧ್ಯಾಯ ರವರು ಬರೆದಿರುವ ” ಪುಸ್ತಕವನ್ನು ಕ್ರಿಮ್ಸ್ ನಿರ್ದೇಶಕರಾದ ಡಾ. ಪೂರ್ಣಿಮಾ ಆರ್.ಜೆ. ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪುಸ್ತಕದಲ್ಲಿರುವ ತಾಯಿ ಮತ್ತು ಮಗುವಿನ ಆರೈಕೆಯ ಕುರಿತು ಮತ್ತು ಪ್ರಸವ ಪೂರ್ವದಲ್ಲಿ ಅಥವಾ ನಂತರದಲ್ಲಿ ಮಹಿಳೆಯರಿಗೆ ಅಗತ್ಯವಾಗಿ ಮಾಡಬೇಕಾದ ವ್ಯಾಯಾಮಗಳು ಹಾಗೂ ಆಹಾರದಲ್ಲಿ ಸೇವಿಸಬೇಕಾದ ಜೀವಸತ್ವಗಳು ಮತ್ತು ಪೋಷಕಾಂಶಗಳು’ ಇವುಗಳ ಕುರಿತು ತುಂಬಾ ಸುಂದರವಾಗಿ ವಿವರಿಸಿದರು. ಡಾ. ಅರ್ಜುನ ಉಪಾಧ್ಯಾಯ ಮತ್ತು ಡಾ. ಪೂಜಾ ನಾಯ್ಕ ಇವರು ತಾಯಿಯ ಮತ್ತು ಮಕ್ಕಳ ಅರೋಗ್ಯ ಸೇವೆಗಳು ಗರ್ಭಿಣಿಯರು, ತಾಯಂದಿರು ಮತ್ತು ಚಿಕ್ಕ ಮಕ್ಕಳಿಗೆ ಸಮಗ್ರ ಅರೋಗ್ಯ ರಕ್ಷಣೆಯ ಅರಿವು ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ವಿನೋದ ಕೊಠಾರಕರ ಸದಸ್ಯರಾದ ಶೈಲೆಶ ಹಳದಿಪೂರ, ರಾಜೇಶ ವೆರ್ಣೇಕರ, ಗುರುದತ್ತ ಬಂಟ, ಮೋಹನ ನಾಯ್ಕ, ಅಮರನಾಥ ಶೆಟ್ಟಿ, ಸಾತಪ್ಪಾ ತಾಂಡೇಲ, ಗುರು ಹೆಗಡೆ, ಅನಮೋಲ ರೇವಣಕರ, ಯೊಗೇಶ ಭಂಡಾರಕರ, ಆನಂದ ನಾಯ್ಕ, ಅರ್ಚನಾ ಶೆಟ್ಟಿ ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.....
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 