ಕೂಲಿಕಾರರಿಗೆ ಕಾರ್ಮಿಕರ ಕಾರ್ಡ್ ವಿತರಣೆ: ಮೀನಾ

ಬ್ಯಾಡಗಿ : ನರೇಗಾ ಯೋಜನೆಯಡಿ 90 ದಿನಗಳ ಕಾಲ ಕೆಲಸ ಮಾಡಿದ ಕೂಲಿಕಾರರಿಗೆ ಕಾಮರ್ಿಕರ ಕಾರ್ಡನ್ನು ನೀಡಲಾಗುವುದು ಎಂದು ಕಾಮರ್ಿಕ ಇಲಾಖೆಯ ಸಹಾಯಕ ಆಯುಕ್ತರಾದ ಮೀನಾ ಪಾಟೀಲ ಹೇಳಿದರು. 

ಶನಿವಾರ ಸ್ಥಳೀಯ ತಾಲೂಕ ಪಂಚಾಯತ ಸಭಾಭವನದಲ್ಲಿ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಾಣೇಬೆನ್ನೂರ ಹಾಗೂ ಮಹಾತ್ಮ ಗಾಂಧೀಜಿ ಕಟ್ಟಡ ಮತ್ತು ಇತರೆ ಕೂಲಿಕಾಮರ್ಿಕರ ಜಿಲ್ಲಾ ಸಂಘ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಲೇಬರ್ ಬ್ಯಾಂಕ್ ಕಾಮರ್ಿಕರ ಅನುಭವ ಹಂಚಿಕೆ ಹಾಗೂ ಸಾಮಾಜಿಕ ಭದ್ರತೆ ಮಾಹಿತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಕೂಲಿಕಾಮರ್ಿಕನು ಅಗತ್ಯ ದಾಖಲೆಗಳನ್ನು ನೀಡಿ ಕಾಮರ್ಿಕರ ಕಾರ್ಡನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಕಾಮರ್ಿಕ ಇಲಾಖೆಯ ಕಾಮರ್ಿಕ ಬಂಧು ಹಾಗೂ ಇಲಾಖೆಯ ಸಿಬ್ಬಂದಿಯನ್ನು ಸಂಪಕರ್ಿಸಿ ಸಂಬಂಧಿಸಿದ ಮಾಹಿತಿಯನ್ನು ಪಡೆದು ಕಾಮರ್ಿಕ ಇಲಾಖೆಯ ಯೋಜನೆಗಳ ಸದುಪಯೋಗವನ್ನು ಹೊಂದಬೇಕೆಂದು ತಿಳಿಸಿದರು.

  ಅಧ್ಯಕ್ಷತೆಯನ್ನು ವಹಿಸಿದ ತಾ.ಪಂ ಅಧ್ಯೆಕ್ಷೆ ಸವಿತಾ ಸುತ್ತುಕೋಟೆ ಮಾತನಾಡಿ ಅ ಸಂಘಟಿತ ವಲಯದ ಕೂಲಿಕಾಮರ್ಿಕರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕಾಗಿದೆ ಈ ನಿಟ್ಟಿನಲ್ಲಿ ವನಸಿರಿ ಸಂಸ್ಥೆಯವರು ಕೂಲಿಕಾಮರ್ಿಕರಿಗಾಗಿ ಉತ್ತಮ ಸಂಘಟಿತ ಕಾರ್ಯವನ್ನು ನಿರ್ವಹಿಸುತ್ತಿದ್ದು ಪ್ರತಿಯೊಬ್ಬ ಕೂಲಿಕಾರರು ಸಹ ಸಂಘದ ಸದಸ್ಯರಾಗುವ ಮೂಲಕ ಸಕರ್ಾರದ ಸೌಲಭ್ಯಗಳ ಉಪಯೋಗವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು.

    ವನಸಿರಿ ಸಂಸ್ಥೆಯ ಮುಖ್ಯಸ್ಥರಾದ ಎಸ್ ಡಿ ಬಳಿಗಾರ ಮಾತನಾಡಿ ಕೂಲಿಕಾಮರ್ಿಕರಿಗಾಗಿ ಲೇಬರ್ ಬ್ಯಾಂಕ್ ಶಾಖೆಯನ್ನು ಸ್ಥಾಪಿಸಲಾಗಿದ್ದು ಈ ಬ್ಯಾಂಕ್ನಲ್ಲಿ ಕೂಲಿಕಾಮರ್ಿಕರೇ ಮುಖ್ಯಸ್ಥರಾಗಿರುತ್ತಾರೆ. ನರೇಗಾ ಯೋಜನೆಯಡಿ 100 ದಿನ ಕೆಲಸ ಮಾಡಿದ ಕೂಲಿಕಾಮರ್ಿಕರಿಗೆ ಹೆಚ್ಚುವರಿ ಕೆಲಸಕ್ಕಾಗಿ ಲೇಬರ್ ಬ್ಯಾಂಕ್ ಮೂಲಕ ಅವಕಾಶ ಕಲ್ಪಿಸಿಕೊಡಲಾಗುವುದು.          ಕೂಲಿಕಾಮರ್ಿಕರ ಮಕ್ಕಳಿಗೆ ಕೌಶಲ್ಯ ಚಟುವಟಿಕೆ ತರಬೇತಿ, ಬಾಡಿಗೆ ಯಂತ್ರ ಖರೀದಿ ಹಾಗೂ ನಿರ್ವಹಣೆ ಮತ್ತು ಕೂಲಿಕಾರರಿಗೆ ಸಂಘದಿಂದ ರೇಷನ್ ಒದಗಿಸುವ ಪ್ರಮುಖ ಉದ್ದೇಶಗಳನ್ನು ಲೇಬರ್ ಬ್ಯಾಂಕ್ನಲ್ಲಿ ಹೊಂದಲಾಗಿದ್ದು ಮುಂಬರುವ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು. 

          ಕಾರ್ಯಕ್ರಮದಲ್ಲಿ ಕೂಲಿಕಾಮರ್ಿಕರಾದ ಶೇಖಪ್ಪ ಡಮ್ಮಳ್ಳಿ ಮತ್ತು ಹನುಮಂತಪ್ಪ ಬ್ಯಾಡಗಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಂಘದ ಅಭಿವೃದ್ಧಿಗಾಗಿ ತಾವೆಲ್ಲರೂ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಂಘಟಿತರಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು. 

          ಜಿ ಪಿ ನದಾಫ್ ಸ್ವಾಗತಿಸಿದರು. ದಾದಾಪೀರ್ ತಿಳವಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಹೊನ್ನಪ್ಪ ಮಾಳಪ್ಪನವರು ವಂದಿಸಿದರು.