ಶಿಕ್ಷಕರು ಮಕ್ಕಳಿಗೆ ಕಾಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ

Distribution of school supplies to children and teachers

ಬೆಳಗಾವಿ 09: ದಿ.  09 ರಂದು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹೊಸವಂಟುಮೂರಿ ತಾಲೂಕ ಜಿಲ್ಲಾ ಬೆಳಗಾವಿಯಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎ ಸ್‌ಬಿಐ ಫೌಂಡೇಶನ್ ಇವರ ಸಹಯೋಗದಲ್ಲಿ ವೈಯಕ್ತಿಕ ಶಿಕ್ಷಣ ತರಬೇತಿ ಕಾರ್ಯಕ್ರಮ ಶಿಕ್ಷಕರು ಮತ್ತು ಮಕ್ಕಳಿಗೆ ಮತ್ತು ಕಾಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಏರಿ​‍್ಡಸಲಾಯಿತು.  

ಅಧ್ಯಕ್ಷತೆಯನ್ನು ಶಾಲಾ ಮುಖ್ಯಪಾದ್ಯರಾದಂತಹ ಶ್ರೀ ಎಂ ಎ ಮಾವುತ ಹಾಗೂ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದಂತಹ ಶ್ರೀ ಎಸ್ ಪಿ ದಾಸಪ್ಪನವರ ವಹಿಸಿಕೊಂಡಿದ್ದರು. ಶ್ರೀ ಅರುಣ್ ಕುಮಾರ್ ಎಂ ಜಿ ಶಾಖ ಮುಖ್ಯಸ್ಥರು ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ ಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ  ಕಾರ್ಯಕ್ರಮದ ಗುರಿ ಉದ್ದೇಶ ಹಾಗೂ ಸಮನ್ವಯ ಶಿಕ್ಷಣ ಎಂದರೇನು, ವೈಯಕ್ತಿಕ ಶಿಕ್ಷಣ ಎಂದರೇನು? ಅದರ ಮಹತ್ವ, ಶಿಕ್ಷಕರ ಮತ್ತು ಅಂಗವಿಕಲ ಮಕ್ಕಳ ತಂದೆ ತಾಯಿ ಪಾತ್ರವೇನು ಎಂದು ಈ ಒಂದು ಕಾರ್ಯಕ್ರಮದಲ್ಲಿ ಸವಿಸ್ತಾರವಾಗಿ ಕಾರ್ಯಕ್ರಮದಲ್ಲಿ ನೆರದಿದ್ದ ಪೋಷಕರಿಗೆ ಹಾಗೂ ಶಿಕ್ಷಕರಿಗೆ ತಿಳಿಸುತ್ತಾ ಸಂಸ್ಥೆಯು ನಡೆದ ಬಂದ ಹಾದಿಯನ್ನು ತಿಳಿಸಿದರು.   ಶ್ರೀ ಶಬೀರ್ ಕುದ್ದನವರ್ ಬಿ.ಐ.ಇ.ಆರ್ ಟಿ ಬೆಳಗಾವಿ ಗ್ರಾಮೀಣ ಅವರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಶಿಸುತ್ತಾ ಸಂಸ್ಥೆಯ ಕೆಲಸ ಕಾರ್ಯಕ್ರಮಗಳ ಬಗ್ಗೆ ಹೇಳಿ ಹೆಮ್ಮೆಪಟ್ಟರು ಹೀಗೆ ತಮ್ಮ ತಾಲೂಕಿನ ವಿಶೇಷ ಚೇತನ ಮಕ್ಕಳಿಗೆ ಯೋಜನೆಗಳು ಬರಲಿ ಎಂದು ತಿಳಿಸಿದರು.  

ಶ್ರೀ ಶಿವಕುಮಾರ ಹಲ್ಯಾಳಿ ಯೋಜನಾ ಸಂಯೋಜಕರು ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ ಯವರು ವೈಯಕ್ತಿಕ ಶಿಕ್ಷಣ ಕಲಿಕಾ ಸಾಮಗ್ರಿಗಳ ಬಳಕೆ, ಮಹತ್ವ ಮತ್ತು ಬಳಕೆಯ ವಿಧಾನಗಳು ತಿಳಿಸುತ್ತಾ ಮಕ್ಕಳಲ್ಲಿ ಶಿಸ್ತು ಬದ್ಧತೆ ಮತ್ತು ಮಕ್ಕಳ ನಡುವಳಿಕೆ ಮಗುವಿನ ಬೆಳವಣಿಗೆಗೆ ಕಾರಣವಾಗುತ್ತದೆ ಹಾಗೆ ಮರ್ಥನಂ ಸಂಸ್ಥೆ ಮತ್ತು ಎಸ್‌ಬಿಐಎಫ್ ಸಂಸ್ಥೆ ಇಲ್ಲಿಯವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಆಯ್ದ ಶಾಲೆಗಳಲ್ಲಿ ಮಾಡಿರುವ  ಕಾರ್ಯ ಚಟುವಟಿಕೆಗಳು ತಿಳಿಸಿದರು ಅಂದರೆ ಅಂಗವಿಕಲರ ಸ್ನೇಹಮಯಿ ಶೌಚಾಲಯ, ಕೊಠಡಿಗಳ ದುರಸ್ತಿ, ವಿಶೇಷ ಚೇತನರಿಗಾಗಿ  ರಾಂಪ್ ಅಳವಡಿಕೆ, ಕಲಿಕಾ ಸಾಮಗ್ರಿಗಳು ಮತ್ತು ಸ್ಮಾರ್ಟ್‌ ಬೋರ್ಡ್‌. ವಿಶೇಷ ಚೇತನ ಮಕ್ಕಳಿಗೆ ಕೃತಕ ಕಾಲು, ಗಾಳಿ ಕುರ್ಚಿ, ಖರ್ಚಸ್, ವಾಟರ್ ಬೆಡ್ ಮತ್ತು ಏರ್ ಬೆಡ್ ಕಾರ್ಯಕ್ರಮಗಳಲ್ಲಿ ವಿತ್ತರಿಸಿರುವ ಬಗ್ಗೆ ತಿಳಿಸಿದರು.  

ಬಿ ಎಂ ಬಡಿಗೇರ್ ಇಸಿಓ, ಪಿಎಂ ರಾಜಗೋಳಕರ್, ಕುದ್ದನ್ನವರ್ ಬಿ ಇ ಆರ್ ಟಿ, ಎಂ ಎ ಕೋರೀಶೆಟ್ಟಿ ಗ್ರಾಮೀಣ ವಸತಿ ಶಾಲೆ ಹೊಸವಟಮೂರಿ ಮುಖ್ಯಪಾದ್ಯರು, ಶಾಲಾ ಶಿಕ್ಷಕರು,ಶಾಲೆ ಅಭಿವೃದ್ಧಿ ಮಂಡಳಿ ಹಾಗೂ ಪೋಷಕರು ಹಾಗೂ ವಿಶೇಷ ಚೇತನ ಮಕ್ಕಳು ಸೇರಿ 45ಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದರು.