ಪಡಿತರ ಚೀಟಿ ಇಲ್ಲದವರಿಗೂ ರೇಷನ್ ವಿತರಣೆ: ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಗೋಪಾಲಯ್ಯ
ಬೆಂಗಳೂರು, ಮೇ 26, ಲಾಕ್ ಡೌನ್ ಸಂದರ್ಭದಲ್ಲಿ ಯಾರೂ ಹಸಿದಿರಬಾರದು. ಕಟ್ಟ ಕಡೆಯ ವ್ಯಕ್ತಿಗೂ ಆಹಾರ ತಲುಪಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ದೇಶವಾಗಿದೆ. ಇಂದು ಈ ಉದ್ದೇಶ ಯಶಸ್ವಿಯಾಗಿ ಸಾಕಾರಗೊಳ್ಳುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.ಕೇಂದ್ರ ಸರ್ಕಾರ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ನೀಡುವಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ನಮ್ಮ ರಾಜ್ಯದಲ್ಲಿ ಇಂದಿನಿಂದ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ವಿತರಣೆ ಮಾಡುವಂತಹ ಕಾರ್ಯ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಇಂದು ಆಹಾರ ಸಚಿವರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಕೇಂದ್ರ ಆಹಾರ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆದೇಶದ ಮೇರೆಗೆ, ಪಡಿತರ ಚೀಟಿ ಇಲ್ಲದವರಿಗೆ ಎರಡು ತಿಂಗಳು 10 ಕೆಜಿ ಅಕ್ಕಿ ಕೊಡುವಂತಹ ಕಾರ್ಯ ಇಂದಿನಿಂದ ಪ್ರಾರಂಭವಾಗಿದೆ. ಹಾಗಾಗಿ ತಾವು ಇಂದು ಖುದ್ದು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ನ್ಯಾಯಬೆಲೆ ಅಂಗಡಿಗಳು ತೆರೆದಿದೆಯೇ? ರೇಷನ್ ವಿತರಣೆ ಸರಿಯಾಗಿ ನಡೆಯುತ್ತಿವೆಯೇ ಎಂದು ಪರಿಶೀಲನೆ ನಡೆಸಿದ್ದೇನೆ. ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಆಹಾರ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಮಹತ್ವದ ಗುರಿಯಾಗಿತ್ತು. ಅದು ಇಂದು ನೆರವೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಸಕ್ತ ತಿಂಗಳು ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ, ಹಾಗೇ ಮುಂದಿನ ತಿಂಗಳು 1ನೇ ತಾರೀಖಿನಿಂದ ಪ್ರತಿಯೊಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ , ಒಂದು ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳು ವಿತರಿಸಲಾಗುವುದು ಎಂದು ಹೇಳಿದರು.
ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅವರಿಗೆ ಈ ಯೋಜನೆ ಅನ್ವಯವಾಗಲಿದ್ದು, ಆಧಾರ್ ಕಾರ್ಡ್ ತೋರಿಸಿ ವಲಸಿಗರು, ಕೂಲಿ ಕಾರ್ಮಿಕರು ಕೂಡ ರೇಷನ್ ಪಡೆಯಬಹುದು ಎಂದು ಸಚಿವರು ತಿಳಿಸಿದರು.ನಾಲ್ಕು ಕೋಟಿಗಿಂತ ಹೆಚ್ಚಿನ ಜನಕ್ಕೆ ರೇಷನ್ ಕೊಡುತ್ತಿದ್ದು, ಅದರಲ್ಲಿ ಶೇಕಡಾ10ರಷ್ಟು ಕೇಂದ್ರ ಸರ್ಕಾರ ಕೊಡಬೇಕು ಎಂಬ ನಿಯಮವಿದೆ. ಈಗಾಗಲೇ ಕೇಂದ್ರ ಸರ್ಕಾರ ತಮ್ಮ ಪಾಲಿನ ಅಕ್ಕಿಯನ್ನು ಕಳುಹಿಸಿಕೊಟ್ಟಿದೆ. ಕಡಲೆಕಾಳು ನಿನ್ನೆಯಿಂದ ಬರುತ್ತಿದ್ದು ಅದನ್ನು ಮುಂದಿನ ತಿಂಗಳು 5 ಕೆಜಿ ಅಕ್ಕಿ ಜೊತೆಗೆ ವಿತರಿಸಲಾಗುತ್ತದೆ. ಬಡವರ ಹಸಿವಿಗೆ ನಮ್ಮ ಸರ್ಕಾರ ಸ್ಪಂದಿಸಿದೆ ಎಂದು ಹೇಳಿದರು.ಹೊಸ ಪಡಿತರ ಅರ್ಜಿಗಳನ್ನು ಕೊರೋನ ಲಾಕ್ ಡೌನ್ ಮುಗಿದ ನಂತರ ತೆಗೆದುಕೊಳ್ಳಲಾಗುವುದು ರೆಂದು ಪ್ರಶ್ನೆಯೊಂದಕ್ಕೆ ಸಚಿವ ಗೋಪಾಲಯ್ಯ ಉತ್ತರಿಸಿದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 