ಮಾಜಿ ಶಾಸಕರ ಜನ್ಮದಿನ ನಿಮಿತ್ತ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ

ಮಾಜಿ ಶಾಸಕರ ಜನ್ಮದಿನ ನಿಮಿತ್ತ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ  Distribution of fruits and vegetables to children on the occasion of the birthday of former MLA

ಮಾಜಿ ಶಾಸಕರ ಜನ್ಮದಿನ ನಿಮಿತ್ತ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ  

ದೇವರಹಿಪ್ಪರಗಿ  01 : ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರ ಹುಟ್ಟು ಹಬ್ಬದ ನಿಮಿತ್ತ ಮುಳಸಾವಳಗಿ ಜಿ.ಪಂ ವ್ಯಾಪ್ತಿಯ ಬಿಜೆಪಿ ಮುಖಂಡರಿಂದ ವಸತಿ ಶಾಲಾ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ತಾಲ್ಲೂಕಿನ ಮುಳಸಾವಳಗಿ ಸರ್ಕಾರಿ ವಸತಿ ಶಾಲೆಯಲ್ಲಿ ಶುಕ್ರವಾರ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಬಿಜೆಪಿ ಎಸ್‌.ಟಿ ಮೋರ್ಚಾ ಅಧ್ಯಕ್ಷರಾದ ಶರಣು ದಳವಾಯಿ ಅವರು, ಮತಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದು ನೀರಾವರಿ, ರಸ್ತೆ, ಸಿ.ಸಿ.ರಸ್ತೆ, ಕೆರೆ ತುಂಬುವ ಯೋಜನೆ, ಶಾಲೆ, ಕಾಲೇಜು ಸೇರಿದಂತೆ ಕ್ಷೇತ್ರದ ಪ್ರತಿ ಗ್ರಾಮಗಳ ಅಭಿವೃದ್ಧಿ ಕೆಲಸಗಳಿಗೂ ಹೆಚ್ಚು ಅನುದಾನ ನೀಡಿದ್ದಾರೆ. 

ಎಲ್ಲಾ ಸಮಾಜದ ಜನರಿಗೆ ಸಹಾಯ ಮಾಡಿದ್ದಾರೆ.ದಿನ ದಲಿತರ, ಬಡವರ ಸೇವೆ ಮಾಡಲು ಮತ್ತಷ್ಟು ಅವಕಾಶ ಅವರಿಗೆ ಸಿಗಲಿ.ದೇವರು ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಶುಭಕೋರಿದರು.ಬಿಜೆಪಿ ಎಸ್‌.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಯಾನಂದ ರಾಠೋಡ ಅವರು ಮಾತನಾಡಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರು ಶಾಸಕರಾಗಿದ್ದ ವೇಳೆ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು, ಅನೇಕ ಜನಪರ ಯೋಜನೆಗಳನ್ನು ಜನ ಮರೆತಿಲ್ಲ ಅಧಿಕಾರ ಇಲ್ಲದಿದ್ದರೂ ಅವರ ಕುಟುಂಬದಿಂದ ಕ್ಷೇತ್ರದ ಜನಸೇವೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಎಲ್ಲರ ಆಶೀರ್ವಾದ ಸದಾ ಹೀಗೆ ಇರಲಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ಪ್ರಕೋಷ್ಠ  ಸಂಚಾಲಕರಾದ ಸಂಜೀವ ಹಾರವಳ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ರಾಠೋಡ, ಮುಖಂಡರುಗಳಾದ  ಸೋಮಣ್ಣ ಹುಗ್ಗೆನವರ, ಸುನಿಲ ತಳವಾರ, ಸಾಹೇಬಗೌಡ ಕೋಕಟನೂರ, ಬಿಜೆಪಿ ಮುಖಂಡರು ,ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.