ಕನ್ನಡ ಧೀಮಂತ ನಾಯಕರ ಟಿ.ಎ. ನಾರಾಯಣಗೌಡ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
Distribution of fruits and sweets to patients on the occasion of the birth anniversary of Kannada st
ಲೋಕದರ್ಶನ ವರದಿ
ವಿಜಯಪು 10 : ಕನ್ನಡ ಚಳುವಳಿಯ ಧೀಮಂತ ನಾಯಕರು, ನಾಡ ಸೇನಾನಿ, ಕನ್ನಡದ ಸ್ವಾಭಿಮಾನದ ಘರ್ಜನೆಯಾಗಿ ನಾಲ್ಕು ದಶಕಗಳಿಂದ ಹೋರಾಟದ ಕಣದಲ್ಲೇ ಬದುಕು ಕಟ್ಟಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 60ನೇ ಜನ್ಮದಿನದ ಅಂಗವಾಗಿ ವಿಜಯಪುರ ಜಿಲ್ಲೆಯ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು, ಸಿಹಿ, ಬಿಸ್ಕಿಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಫಯಾಜ ಕಲಾದಗಿ ಮಾತನಾಡಿ, 27 ವರ್ಷಗಳ ಕರವೇ ಪಯಣವನ್ನು ಕನ್ನಡಿಗರ ಹೆಮ್ಮೆಯ ಶಕ್ತಿಯಾಗಿ ರೂಪಿಸಿದ ನಾರಾಯಣಗೌಡರು ಇಂದು ಕೇವಲ ಒಬ್ಬ ನಾಯಕ ಅಲ್ಲ. ಲಕ್ಷಾಂತರ ಕನ್ನಡಿಗರ ಆತ್ಮವಿಶ್ವಾಸ. ಕನ್ನಡದ ಪ್ರಶ್ನೆ ಬಂದಾಗ ಬೀದಿಗಿಳಿಯುವ ಧೈರ್ಯ. ಅನ್ಯಾಯದ ಎದುರು ತಲೆಬಾಗದ ಹೋರಾಟದ ಸಂಕೇತ. ಕರವೇ ಎಂಬ ಹೆಸರನ್ನು ಕನ್ನಡಿಗರ ಹೃದಯದಲ್ಲಿ ಒಂದು ಬ್ರ್ಯಾಂಡ್ ಆಗಿ ಕಟ್ಟಿದ ನಾಯಕನ ಜನ್ಮದಿನವನ್ನು ಈ ಬಾರಿ ಕರವೇ ಕುಟುಂಬ ಹೋರಾಟದ ಹಬ್ಬವಾಗಿ ಗುರುತಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಶಿವಾನಂದ ಮಾಸ್ತಿಹೊಳಿ ಮಾತನಾಡಿ, ಇಂತಹ ಹುಟ್ಟುಹಬ್ಬ ಆಚರಿಸುವುದು ವಿಶೇಷವಾಗಿದೆ. ಜನ್ಮ ದಿನವೆಂದರೆ ಪಾರ್ಟಿ, ಪಬ್, ನಶೆ ಮಾಡುವಲ್ಲಿ ಈಗಿನ ಜನರು ಮಗ್ನರಾಗಿರುತ್ತಾರೆ. ಆದರೆ ಸಮಾಜಕ್ಕೆ ಏನಾದರೂ ನೀಡುವುದರ ಮೂಲಕ ಜನ್ಮ ದಿನಾಚರಣೆ ಆಚರಿಸುವುದು ಕಡಿಮೆ ವಿಜಯಪುರ ಕರವೇ ಬಳಗಕ್ಕೆ ಅಭಿನಂದನೆ ತಿಳಿಸುವೆ ಎಂದರು.
ನಗರ ಗೌರವ ಅಧ್ಯಕ್ಷರಾದ ಅಶೋಕ ಜಾಧವ ಮಾತನಾಡಿ, ನಾರಾಯಣಗೌಡರ ಹೋರಾಟದ ಬದುಕು, ಕನ್ನಡದ ಮೇಲಿನ ಅಚಲ ನಿಲುವು ಹಾಗೂ ಕರವೇ ಸಂಘಟನೆಯ ಶಕ್ತಿಯನ್ನು ಪ್ರತಿಬಿಂಬಿಸುವ ಕಾರ್ಯ ಇವರಿಗೆ ಸಲ್ಲುತ್ತದೆ. ಕನ್ನಡಾಭಿಮಾನವನ್ನು ತಮ್ಮ ರಕ್ತದಲ್ಲಿ ಅಳವಡಿಸಿಕೊಂಡು ಕನ್ನಡದ ಅಭಿವೃದ್ಧಿಗಾಗಿ ಸದಾ ಸಿದ್ಧರೆಂದು ಹಗಲಿರುವ ಸೇವೆಗೈಯುವ ನಾಯಕರಿಗೆ ಜನ್ಮ ದಿನಾಚರಣೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಹಾದೇವ ರಾವಜಿ, ದಯಾನಂದ ಸಾವಳಗಿ, ಮನೋಹರ ತಾಜೋವ, ಅನುರಾಧ ಕಲಾಲ, ಬಸವರಾಜ ಬಿ.ಕೆ, ಮಹಾದೇವ ಬನಸೋಡೆ, ಜಯಶ್ರೀ ಕಾಶೆಟ್ಟಿ, ಕಸ್ತೂರಿ ಪೂಜಾರಿ, ಪ್ರೇಮಾ ಮಂಜುಳಾ ಜಾಧವ, ಲಕ್ಷ್ಮೀಬಾಯಿ ಬಳ್ಳಾರಿ, ಮುದಕಪ್ಪ ಕಾಖಂಡಕಿ, ಫಿದಾ ಕಲಾದಗಿ, ಕಾಶೀನಾಥ ಮಜಗಿ, ಜಾವೀದ ದಳವಾಯಿ, ದಸ್ತಗೀರ ಶಾನವಾಲೆ, ಯಾಸೀನ ಮೊಕಾಶಿ, ಸೋಯಲ್, ಈರಣ್ಣಾ ಕೋಟಿ, ಮೋಶೀನ ಬಾಗವಾನ ಮುಂತಾದವರು ಇದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 