ಜೋಶಿ ಹುಟ್ಟು ಹಬ್ಬ ನಿಮಿತ್ಯ ಹಣ್ಣು ಹಾಲು ವಿತರಣೆ
ಶಿಗ್ಗಾವಿ 27 : ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಹುಟ್ಟು ಹಬ್ಬದ ಪ್ರಯುಕ್ತ ಶಿಗ್ಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಾಗೂ ಹಾಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಸುಭಾಸ ಚವ್ಹಾಣ, ನರಹರಿ ಕಟ್ಟಿ, ರೇಣಕನಗೌಡ ಪಾಟೀಲ, ಸೋಮಶೇಖರಯ್ಯ ಗೌರಿಮಠ ಬಸನಗೌಡ ರಾಮನಗೌಡ, ಗುರುರಾಜ ಹೊನ್ನಣ್ಣವರ, ಪ್ರತೀಕ ಕೊಳೆಕರ, ಶಿವು ಬುದ್ದಪ್ಪನವರ, ರವಿ ಕಡೆಮನಿ, ಚೇತನ ಕಲಾಲ ಸೇರಿದಂತೆ ಜೋಶಿ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.