ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಾಗ್ರಿ ವಿತರಣೆ

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಾಗ್ರಿ ವಿತರಣೆ Distribution of free study material to government school students

ಹೊಸಪೆಟೆ 10:ಶ್ರೀ ಭುವನೇಶ್ವರಿ ಸ್ಪಂದನ ಮಹಿಳಾ ಟ್ರಸ್ಟ್‌ ಹೊಸಪೇಟೆ ವತಿಯಿಂದ ಸರ್ಕಾರಿಕಿರಿಯ ಪ್ರಾಥಮಿಕ ಶಾಲೆ 88-ಮುದ್ಲಾಪುರ ಶಾಲೆಯಎಲ್ಲಾ ಮಕ್ಕಳಿಗೆ  ಉಚಿತ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಾಗ್ರಿಯನ್ನು ವಿದ್ಯಾರ್ಥಿಗಳಿಗೆ ನೀಡುವಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

ಈ ಕಾರ್ಯಕ್ರಮದಲ್ಲಿ ಶ್ರೀ ಭುವನೇಶ್ವರಿ ಮಹಿಳಾ ಸ್ಪಂದನಟ್ರಸ್ಟ್‌ನಅಧ್ಯಕ್ಷರಾದ ಶ್ರೀಮತಿ ಅಂಜಲಿ ರವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳ ಉತ್ತಮ ಭವಿಷ್ಯ ರೂಪುಗೊಳ್ಳುವುದು ಶಾಲಾ ಹಂತದಲ್ಲಿಯೇಆಗಿದೆ.ಸರ್ಕಾರಿ ಶಾಲೆಯಲ್ಲಿಓದುತ್ತಿರುವ ಮಕ್ಕಳು ಪ್ರತಿಭಾವಂತರು ಸೃಜನಶೀಲ ವಿದ್ಯಾರ್ಥಿಗಳೂ ಇರುತ್ತಾರೆ.ಇವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ನಮ್ಮಟ್ರಸ್ಟ್‌ನ ವತಿಯಿಂದ ಪ್ರತಿ ವರ್ಷ ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಾಗ್ರಿಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳೂ ಇವುಗಳನ್ನು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಶಾಲೆಗೆ, ಊರಿಗೆಕೀರ್ತಿತರಬೇಕುಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಬಸವರಾಜ.ಕೆರವರು ಮಾತನಾಡಿ ನಮ್ಮ ಶಾಲೆಯ ಮಕ್ಕಳು ಅತ್ಯಂತ ಪ್ರತಿಭಾವಂತರಿದ್ದು, ಮನೆಯಲ್ಲಿಅಷ್ಟೊಂದು ಸೌಲಭ್ಯಗಳೂ ಇರುವುದಿಲ್ಲ. ಇಂತಹ ಸರ್ಕಾರಿ ಶಾಲಾ ಮಕ್ಕಳಿಗೆ ಶ್ರೀ ಭುವನೇಶ್ವರಿ ಸ್ಪಂದನ ಮಹಿಳಾ ಟ್ರಸ್ಟ್‌ನ ವತಿಯಿಂದ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಾಗ್ರಿ ನೀಡುತ್ತಿರುವುದುಅತ್ಯಂತ ಶ್ಲಾಘನೀಯಕಾರ್ಯವಾಗಿದೆ. ಅಧ್ಯಕ್ಷರಾದ ಶ್ರೀಮತಿ ಅಂಜಲಿ ಮೇಡಂಅವರುಅಂತರ್‌ರಾಷ್ಟ್ರೀಯ ಮಟ್ಟದಕಲಾವಿದರಾಗಿದ್ದು, ಇವರಕಲಾಕೇಂದ್ರದಿಂದ ಮಕ್ಕಳು ಹಂಪಿ ಉತ್ಸವ, ದಸರಾಉತ್ಸವ, ಹೀಗೆ ನಾಡಿನ ವಿವಿಧ ಕಾರ್ಯಕ್ರಮಗಳಲ್ಲಿ ಉತ್ತಮ ಭರತನಾಟ್ಯ ಪ್ರದರ್ಶನ ನೀಡಿ ಹೊಸಪೇಟೆಗೆಕೀರ್ತಿತಂದಿರುವುದು ಶ್ಲಾಘನೀಯವಾಗಿದೆ.ಟ್ರಸ್ಟ್‌ನಿಂದಇಂತಹ ಸಾಮಾಜಿಕ ಕಾರ್ಯಗಳು ಹೆಚ್ಚುವಂತಾಗಲಿ ಎಂದು ಶುಭಹಾರೈಸಿ ಮಕ್ಕಳೂ ದಿನನಿತ್ಯ  ಶಾಲೆಗೆ ಹಾಜರಾಗಿಉತ್ತಮ ವಿದ್ಯಾಭ್ಯಾಸ ಮಾಡುವುದರ ಮೂಲಕ ಉತ್ತಮ ನಾಗರೀಕರಾಗಿ ರೂಪುಗೊಳ್ಳಬೇಕೆಂದು ತಿಳಿಸಿದರು. ಟ್ರಸ್ಟ್‌ನಅಧ್ಯಕ್ಷರಾದ ಶ್ರೀಮತಿ ಅಂಜಲಿ ಮೇಡಂಅವರನ್ನು ಶಾಲಾ ಪರವಾಗಿಅಭಿನಂದಿಸಲಾಯಿತು.ನಂತರಟ್ರಸ್ಟ್‌ನ ವತಿಯಿಂದ ಮುಖ್ಯಗುರುಗಳಾದ ಬಸವರಾಜ.ಕೆ, ಮತ್ತು ಎಸ್‌.ಡಿ.ಎಂ.ಸಿ.ಅಧ್ಯಕ್ಷರಾದ ಪರಶುರಾಮಅವರನ್ನುಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಎಸ್‌.ಡಿ.ಎಂ.ಸಿ.ಅಧ್ಯಕ್ಷರಾದ ಪರಶುರಾಮ, ಶಿಕ್ಷಕರಾದ ರಮೇಶ್, ರಾಧ, ಪಾರ್ವತಿ, ಟ್ರಸ್ಟ್‌ನ ಸದಸ್ಯರುಗಳಾದ ರೇಣುಕಾ, ಸುಮಾ, ಅರ್ಚನ, ರೇಷ್ಮಾ, ಗೌರಿ, ಶಿವಗಂಗ, ಚಂದ್ರಕಲಾ, ಲಕ್ಷ್ಮೀಮುಂತಾದವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನುರಮೇಶ್ ಶಿಕ್ಷಕರು ನಿರೂಪಿಸಿದರು, ಬಸವರಾಜ್ ಮುಖ್ಯ ಶಿಕ್ಷಕರು ಸ್ವಾಗತಿಸಿದರು.