ಲೋಕದರ್ಶನವರದಿ
ವಿಜಯಪುರ23: ನಾಗಠಾಣ ಮತಕ್ಷೇತ್ರದ ಶಾಸಕ ಡಾ. ದೇವಾನಂದ ಚವ್ಹಾಣ ತಮ್ಮ ವಿಧಾನಸಭಾ ಕ್ಷೇತ್ರದ ಅಡಿಯಲ್ಲಿರುವ ಕ್ವಾರಂಟೈನ್ ಪ್ರದೇಶಗಳಿಗೆ ಭೇಟಿ ನೀಡಿ, ಎಲ್ಲ ಕಾಮರ್ಿಕರ ಆರೋಗ್ಯ ವಿಚಾರಿಸಿ ಅವರ ಉಪಹಾರಕ್ಕೆ ಬೇಕಾಗಿರುವ ಎಲ್ಲ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.
ಮತಕ್ಷೇತ್ರದ ಬರಣಾಪೂರ, ಮದಭಾವಿ, ಕವಲಗಿ ಎಲ್ಟಿ, ಕುಮಟಗಿ ತಾಂಡಾ, ಆದರ್ಶ ಮಹಾವಿದ್ಯಾಲಯ ಕಗ್ಗೋಡ, ಸರಕಾರಿ ಪ್ರೌಢ ಶಾಲೆ ಕಗ್ಗೋಡ, ಹಡಗಲಿ ತಾಂಡಾ-1, ಆಹೇರಿ, ಸಂಜಯನಗರ ತಾಂಡಾ-2, ಹೊನ್ನಳ್ಳಿ, ನಾಗಠಾಣಗಳಲ್ಲಿರುವ ಕ್ವಾರಂಟೈನ್ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಅಲ್ಲಿಯ ಕ್ವಾರಂಟೈನನಲ್ಲಿರುವವರ ಜೊತೆ ಸುಮಾರು ಕಾಲಾ ಚಚರ್ೆ ನಡೆಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಮರ್ಿಕರ ಅಳಲನ್ನು ಆಲಿಸಿದ ಶಾಸಕರು, ನೀವು ಯಾವುದೇ ರೀತಿ ತೊಂದರೆಗೆ ಒಳಗಾಗದಂತೆ ಈಗಾಗಲೇ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಎಲ್ಲರೂ ಸೇರಿ ಈ ಕೊರೋನಾದ ವಿರುದ್ಧ ಹೋರಾಡಬೇಕಾದ ಅವಶ್ಯಕತೆ ಇದೆ. ನಿಮಗೆ ಇಲ್ಲಿ ಇರುವಷ್ಟು ದಿನವೂ ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ನಿಮಗೆ ಏನೂ ತೊಂದರೆಯಾಗದಂತೆ ಈಗಾಗಲೇ ಮುಂಜಾಗ್ರತೆ ಕ್ರಮಗಳನ್ನುವಹಿಸಲಾಗಿದೆ.
ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಇದರ ಹೊರತಾಗಿಯೂ ನಿಮಗೆ ಮತ್ತೆನಾದರೂ ತೊಂದರೆ ಅನ್ನಸಿದ್ದೇ ಆದಲ್ಲಿ ತಾವು ನೇರವಾಗಿ ನನ್ನ ಸಂಪಕರ್ಿಸಬಹುದು ಆ ತೊಂದರೆಯನ್ನು ನಿವಾರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.