ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ
Distribution of equipment to specially-abled children
ಧಾರವಾಡ 26 : ವಿಶೇಷ ಚೇತನ ಮಕ್ಕಳಿಗೆ ಸರಕಾರ ನೀಡುವ ಸೌಲಭ್ಯಗಳು ಸಮರ್ಕವಾಗಿ ತಲುಪಿದರೆ ಸಾಲದು, ಆದರ ಬಳಕೆ ಬಗ್ಗೆ ವಿಶೇಷ ಶಿಕ್ಷಕರು ಮತ್ತು ಪೋಷಕರು ಮುತುವರ್ಜಿ ವಹಿಸಬೇಕೆಂದು ಎಂದು ಕ್ಷೇತ್ರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಆರ್.ಸದಲಗಿ ಕರೆನೀಡಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಗ್ರಾಮೀಣ ಶಾಲಾ ಶಿಕ್ಷಣ ಇಲಾಖೆ ಧಾರವಾಡ ಮತ್ತು ಅಲಿಮಕೋ ಕಂಪನಿ ಬೆಂಗಳೂರು ಇವರು ಸಂಯುಕ್ತ ಆಶ್ರಯದಲ್ಲಿ 2024--2025ನೇ ಸಾಲಿನ ಸಮನ್ವಯ ಶಿಕ್ಷಣ ಯೋಜನೆ ಅಡಿಯಲ್ಲಿ ವಿಶೇಷ ಚೇತನ ಮಕ್ಕಳಿಗೆ ನಡೆದ ವೈದ್ಯಕೀಯ ತಪಾಸಣಾ ಶಿಬಿರದಲಿ ಆಯ್ಕೆಯಾದ ಸಲಕರಣೆಗಳನ್ನು ಇಂದು ಧಾರವಾಡ ತಾಲೂಕ ಸಂಪನ್ಮೂಲ ಕೇಂದ್ರದಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡುತ್ತಾ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಭವಿಷ್ಯವನ್ನು ರೂಪಿಸುವುದು ಶಿಕ್ಷಕರು ಮತ್ತು ಪೊಷಕರ ಆಧ್ಯ ಕರ್ತವ್ಯವಾಗಿದೆ. ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡಿದರೆ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದಂತಾಗುತ್ತದೆ ಎಂದರು.
ಎಸ್‌ಎಮ್ ಹುಡೇದಮನಿ, ಡಿವಾಯ್ ಪಿ ಸಿ (ಆರ್.ಎಮ್.ಎಸ್.ಎ) ಮಾತನಾಡುತ್ತಾ ವಿಶೇಷ ಅಗತ್ಯತೆಯುಳ್ಳ ಮಕ್ಕಳಲ್ಲೂ ಕೂಡ ವಿಶೇಷ ಪ್ರತಿಭೆಗಳು ಇರುತ್ತವೆ. ಅವರ ಆರೋಗ್ಯದ ಕಾಳಜಿಯ ಜೊತೆಗೆ ಅವರಿಗೆ ತಿಳಿಯುವ ರೀತಿಯಲ್ಲಿ ಶಿಕ್ಷಣ ನೀಡಿದಾಗ ಅವರು ಕೂಡ ತಮ್ಮ ತಮ್ಮ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸುತ್ತಾರೆ. ಇಂತಹ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ವಿಚಾರದಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ನಾನು ವೈಯಕ್ತಿಕವಾಗಿ ಸಹಾಯ ಸಹಕಾರ ನೀಡುತ್ತೇನೆ ಎಂದು ಹೇಳಿದರು. ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು.ನಮಗೆಲ್ಲರಿಗೂ ನಿಸರ್ಗ ಸರಿಯಾದ ಅಂಗಾಂಗಗಳನ್ನು ನೀಡಿದ್ದಾರೆ.ಆದರೆ ಕೆಲವು ಮಕ್ಕಳಿಗೆ ನೂನ್ಯತೆಯನ್ನು ನೀಡಿದ್ದಾರೆ.ನೂನ್ಯತೆಯನ್ನು ಹೊಂದಿರುವ ಮಕ್ಕಳನ್ನು ಗುರುತ್ತಿಸಿ ಫಿಜಿಯೋಥೇರಪಿ ಮಾಡುವುದರಿಂದ ಸಬಲೀಕರಣ ಸಾಧ್ಯಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಕುಮಾರ್.ಕೆ.ಎಫ್ ಪ್ರಸ್ತಾವಿಕ ಮಾತನಾಡಿ ಮಾತನಾಡುತ್ತಾ ವಿಶೇಷ ಅಗತ್ಯತೆಯುಳ್ಳ ಮಕ್ಕಳಲ್ಲೂ ಕೂಡ ವಿಶೇಷ ಪ್ರತಿಭೆಗಳು ಇರುತ್ತವೆ. ಅವರ ಆರೋಗ್ಯದ ಕಾಳಜಿಯ ಜೊತೆಗೆ ಅವರಿಗೆ ತಿಳಿಯುವ ರೀತಿಯಲ್ಲಿ ಶಿಕ್ಷಣ ನೀಡಿದಾಗ ಅವರು ಕೂಡ ತಮ್ಮ ತಮ್ಮ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸುತ್ತಾರೆ. ಇಂತಹ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ವಿಚಾರದಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ನಾನು ವೈಯಕ್ತಿಕವಾಗಿ ಸಹಾಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಫೋರ್ಥ್ ವೇವ್ ಫೌಂಡೇಶನ್ ಮುಖ್ಯಸ್ಥರಾದ ಬಸವರಾಜ್ ಮ್ಯಾಗೇರಿ ಅವರು ಮಾತನಾಡಿ ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸಹಕಾರ ನೀಡಲಿದೆ ಹಾಗೂ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡ ಆವರಣದಲ್ಲಿರುವ ಶಾಲಾ ಸಿದ್ಧತಾ ಕೇಂದ್ರದಲ್ಲಿ ಎಲ್ಲ ಅಗತ್ಯ ಸಾಮಗ್ರಿ ಹಾಗೂ ಜಿಲ್ಲೆಯಲ್ಲಿಯೆ ಮಾದರಿಯಾಗಿ ಪೀಜಿಯೋಥೇರಪಿ ಚಿಕಿತ್ಸೆ ಇಲಾಖೆ ಸಹಕಾರದೊಂದಿಗೆ ನಮ್ಮ ಸಂಸ್ಥೆ ಒದಗಿಸಿದೆ ಎಂದರು.
ವೈದ್ಯಕೀಯ ಶಿಬಿರದಲ್ಲಿ ತಜ್ಞ ವೈದ್ಯರಿಂದ ವಿಶೇಷ ಚೇತನ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅಗತ್ಯವಿರುವ ಸಾಧನ ಸಲಕರಣೆಗಳ ಬೇಡಿಕೆ ಪಟ್ಟಿಯಂತೆ ಇಲಾಖೆಯಿಂದ ಮಂಜೂರಾದ ವ್ಹಿಲ್‌ಚೇರ್, ರೋಲೆಟರ್, ಸಿ.ಪಿ. ಚೇರ್, ಟ್ರೈ ಸೈಕಲ್, ಎಂ.ಡಿ.ಕಿಟ್, 29 ವಿದ್ಯಾರ್ಥಿಗಳಿಗೆ ಸಾಧನಗಳನ್ನು ವಿತರಿಸಲಾಯಿತು.
ಶಿಕ್ಷಣ ಸಂಯೋಜಕರಾದ ಶ್ರೀಕಾಂತ ಗೌಡರ್, ಫಿಜಿಯೋಥೆರಪಿ ವೈದ್ಯರಾದ ಸುಜಾತ ನಾಯಕ್, ಬಿ.ಐ.ಆರ್.ಟಿ ಶಿಕ್ಷಕರಾದ ಲಲಿತ ಹೊನ್ನವಾಡ, ಗೋಪಾಲ್ ಸೊನ್ನಹಳ್ಳಿ, ನಬೀಸಾಬ ಮುದ್ದೇಬಿಹಾಳ ಜನಮುಖಿ ಸ್ವಯಂ ಸೇವಾ ಸಂಸ್ಥೆಯ ವಿದ್ಯಾ ಮ್ಯಾಗೇರಿ, ನನಗೂ ಶಾಲೆಯ ಶಿಕ್ಷಕಿ ಸರೋಜಾ ಧಾರವಾಡ, ಅಕ್ಷತಾ ಪೂಜಾರ ಲಕ್ಷ್ಮೀ ಮಾಳಗಿಮನಿ,ವಿಶೇಷ ಚೇತನ ಮಕ್ಕಳು, ಪಾಲಕರು, ಯಶಸ್ವಿಗೊಳಿಸಿದರು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಬಿ.ಐ.ಆರ್.ಟಿ ಶಿಕ್ಷಕರಾದ ಲಲಿತ ಹೊನ್ನವಾಡ ಕಾರ್ಯಕ್ರಮ ನಿರೂಪಣೆ ಮಾಡಿದರೆ, ಗೋಪಾಲ್ ಸೊನ್ನಹಳ್ಳಿ ಸ್ವಾಗತಿಸಿದರು ಕೊನೆಯಲಿ, ನಬೀಸಾಬ ಮುದ್ದೇಬಿಹಾಳ ವಂದಿಸಿದರು.
ವೈದ್ಯಕೀಯ ಶಿಬಿರದಲ್ಲಿ ತಜ್ಞ ವೈದ್ಯರಿಂದ ವಿಶೇಷ ಚೇತನ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅಗತ್ಯವಿರುವ ಸಾಧನ ಸಲಕರಣೆಗಳ ಬೇಡಿಕೆ ಪಟ್ಟಿಯಂತೆ ಇಲಾಖೆಯಿಂದ ಮಂಜೂರಾದ ವ್ಹಿಲ್‌ಚೇರ್, ರೋಲೆಟರ್, ಸಿ.ಪಿ. ಚೇರ್, ಟ್ರೈ ಸೈಕಲ್, ಎಂ.ಡಿ.ಕಿಟ್, 29 ವಿದ್ಯಾರ್ಥಿಗಳಿಗೆ ಸಾಧನಗಳನ್ನು ವಿತರಿಸಲಾಯಿತು.
ವಿಶೇಷ ಚೇತನ ಮಕ್ಕಳಿಗೆ ಸರಕಾರ ನೀಡುವ ಸೌಲಭ್ಯಗಳು ಸಮರ್ಕವಾಗಿ ತಲುಪಿದರೆ ಸಾಲದು, ಆದರ ಬಳಕೆ ಬಗ್ಗೆ ವಿಶೇಷ ಶಿಕ್ಷಕರು ಮತ್ತು ಪೋಷಕರು ಮುತುವರ್ಜಿ ವಹಿಸಬೇಕೆಂದು ಎಂದು ಕ್ಷೇತ್ರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಆರ್.ಸದಲಗಿ ಕರೆನೀಡಿದರು.
ಎಸ್‌ಎಮ್ ಹುಡೇದಮನಿ, ಡಿವಾಯ್ ಪಿ ಸಿ (ಆರ್.ಎಮ್.ಎಸ್.ಎ) ಮಾತನಾಡುತ್ತಾ ವಿಶೇಷ ಅಗತ್ಯತೆಯುಳ್ಳ ಮಕ್ಕಳಲ್ಲೂ ಕೂಡ ವಿಶೇಷ ಪ್ರತಿಭೆಗಳು ಇರುತ್ತವೆ. ಅವರ ಆರೋಗ್ಯದ ಕಾಳಜಿಯ ಜೊತೆಗೆ ಅವರಿಗೆ ತಿಳಿಯುವ ರೀತಿಯಲ್ಲಿ ಶಿಕ್ಷಣ ನೀಡಿದಾಗ ಅವರು ಕೂಡ ತಮ್ಮ ತಮ್ಮ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸುತ್ತಾರೆ ಎಂದರು.
ಫೋರ್ಥ್ ವೇವ್ ಫೌಂಡೇಶನ್ ಮುಖ್ಯಸ್ಥರಾದ ಬಸವರಾಜ್ ಮ್ಯಾಗೇರಿ ಅವರು ಮಾತನಾಡಿ ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 