ರೂ.5 ಲಕ್ಷ ಪರಿಹಾರ ಆದೇಶ ಪತ್ರ ವಿತರಣೆ- ವೈಯಕ್ತಿಕ ಧನ ಸಹಾಯ ಮೃತ ಸ್ವಾತಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

Distribution of Rs. 5 lakh compensation order - Personal financial assistance District In-charge Min

ಲೋಕದರ್ಶನ ವರದಿ 

ರೂ.5 ಲಕ್ಷ ಪರಿಹಾರ ಆದೇಶ ಪತ್ರ ವಿತರಣೆ- ವೈಯಕ್ತಿಕ ಧನ ಸಹಾಯ  ಮೃತ ಸ್ವಾತಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ 

ಹಾವೇರಿ 21:  ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಮಾಸೂರ ಗ್ರಾಮದ ಮೃತ ಸ್ವಾತಿ  ಮನೆಗೆ ಶುಕ್ರವಾರ  ಭೇಟಿ ನೀಡಿದ  ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರಿಕಟ್ಟೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು  ಕುಟುಂಬಸ್ಥರಿಗೆ ಸಾಂತ್ವಾನ  ಹೇಳಿದರು. 

ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು,  

ಬಂಧಿತ ಆರೋಪಿಗಳಿಗೆ ಫೋನ್ ಹಾಗೂ ಮಾದಕ ವಸ್ತುಗಳನ್ನು ಪೂರೈಸಲಾಗುತ್ತಿದೆ. ಇದರಿಂದ ಸ್ವಾತಿ ಸಾವಿಗೆ ನ್ಯಾಯ ಸಿಗುವ ಭರವಸೆ ಇಲ್ಲದಂತಾಗಿದೆ.  ಕೃತ್ಯ ಎಸಗಿದ ಆರೋಪಿಗಳಿಗೆ  ಶಿಕ್ಷೆಯಾಗಬೇಕು, ಮೃತ ಸ್ವಾತಿ ಸಾವಿಗೆ ನ್ಯಾಯ ಕೊಡಿಸಬೇಕು.  ಮೃತ ಸ್ವಾತಿಗೆ ತಂದೆ ಇರುವುದಿಲ್ಲ, ಮೃತ ಸ್ವಾತಿ ಹೊರತುಪಡಿಸಿ ಇಬ್ಬರು ಸಹೋದರಿಯರಿದ್ದಾರೆ, ಅವರಿಗೆ ಸರ್ಕಾರಿ ಕೆಲಸ ನೀಡಬೇಕು  ಎಂದು ಕುಟುಂಬಸ್ಥರು ಸಚಿವರಿಗೆ ಮನವಿ ಮಾಡಿಕೊಂಡರು.   

ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಸಚಿವರು, ನಾವು ಮತ್ತು ಸ್ಥಳೀಯ ಶಾಸಕರು ಸೇರಿ ಈ ಪ್ರಕರಣದಲ್ಲಿ  ನ್ಯಾಯ ಒದಗಿಸುವ  ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು ಹಾಗೂ ಸರ್ಕಾರ ಕೆಲಸದ ಕುರಿತು ಪರೀಶೀಲಿಸುವುದಾಗಿ ತಿಳಿಸಿದರು. 

ಈ ಪ್ರಕಣದ ಪಾರದರ್ಶಕ ತನಿಖೆ ನಡೆಸಿ, ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು. 

ಆದೇಶ ಪತ್ರ ವಿತರಣೆ:  ಇದೇ ಸಂದರ್ಭದಲ್ಲಿ ಸರ್ಕಾರದಿಂದ ಐದು ಲಕ್ಷ ಪರಿಹಾರದ ಆದೇಶ ಪತ್ರ ವಿತರಣೆ  ಮಾಡಲಾಯಿತು ಹಾಗೂ ವೈಯಕ್ತಿಕವಾಗಿ ಸಚಿವರು ಪರಿಹಾರ ಧನ ವಿತರಣೆ ಮಾಡಿದರು.  

ಈ ಸಂದರ್ಭದಲ್ಲಿ  ಶಾಸಕರಾದ ಯು.ಬಿ.ಬಣಕಾರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ   ರುಚಿ ಬಿಂದಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ತಹಶೀಲ್ದಾರ ಇತರರು ಉಪಸ್ಥಿತರಿದ್ದರು.