ಬೆಂಗಳೂರು, ಆ 31: ಪರಿಸರ ವಿರೋಧಿ ಪಿಓಪಿ ಗಣಪತಿ ಮೂರ್ತಿಗಳ ವಿರುದ್ಧ ಸಮರ ಸಾರಿರುವ ಬಾಂಧವ ಸಂಸ್ಥೆ, ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಬಳಿ 5001 ಮಣ್ಣಿನ ಗಣಪತಿ ಮೂರ್ತಿಗಳನ್ನು ಉಚಿತವಾಗಿ ವಿತರಿಸಿತು.
ಮೇಯರ್ ಗಂಗಾಂಬಿಕೆ ಮಲ್ಲಿಕಾಜರ್ುನ್, ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ, ಬಾಂಧವ ಸಂಸ್ಥೆಯ ಮುಖ್ಯಸ್ಥ ಹಾಗೂ ಭೈರಸಂದ್ರ ವಾಡರ್್ ನ ಎನ್. ನಾಗರಾಜು ಉಚಿತವಾಗಿ ಗಣಪತಿ ಮೂತರ್ಿಗಳನ್ನು ವಿತರಣೆ ಮಾಡಿದರು.
ಜೇಡಿ ಮಣ್ಣಿನಲ್ಲಿ ತಯಾರಾದ ಗಣಪತಿ ಮೂತರ್ಿಗಳಲ್ಲಿ ಹೂವಿನ ಬೀಜಗಳನ್ನು ಸಹ ಹಾಕಲಾಗಿದೆ. ಕೆರೆ, ಕುಂಟೆ, ಕಲ್ಯಾಣಿಗಳಲ್ಲಿ ಗಣಪತಿ ಮೂತರ್ಿ ವಿಸರ್ಜನೆ ಮಾಡಿದರೆ ಹೂವಿನ ಗಿಡಗಳು ಬೆಳೆಯಬೇಕು ಎಂಬ ಸದ್ದುದ್ದೇಶದಿಂದ ವಿಶೇಷ ಮುತುವಜರ್ಿ ವಹಿಸಿ ಗಣಪತಿ ಮೂರ್ತಿಗಳನ್ನು ತಯಾರು ಮಾಡಲಾಗಿದೆ.
ಬಾಂಧವ ಸಂಸ್ಥೆಯ ಮುಖ್ಯಸ್ಥ ಎನ್. ನಾಗರಾಜು ಮಾತನಾಡಿ, ಸತತ ಐದು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಜಯಗರ ವಿಧಾನಸಭಾ ಕ್ಷೇತ್ರವಲ್ಲದೇ ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶದ ಜನರು ಸಹ ಗಣಪತಿ ಮೂತರ್ಿ ತೆಗೆದುಕೊಂಡು ಹೋಗಿದ್ದಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವಂತೆ ಗಣಪತಿ ಮೂರ್ತಿಗಳನ್ನು ಸಾಮೂಹಿಕವಾಗಿ ವಿತರಣೆ ಮಾಡಲಾಗಿದೆ ಎಂದರು.
ಪಿಓಪಿ ಗಣಪತಿ ಮೂರ್ತಿ ವಿರುದ್ಧ ಜಯನಗರ ಮತ್ತು ಬಿಟಿಎಂ ಲೇ ಔಟ್ ವಿಧಾನಸಭಾ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಾವು ಹಾಗೂ ಶಾಸಕರಾದ ರಾಮಲಿಂಗಾ ರೆಡ್ಡಿ, ಸೌಮ್ಯ ರೆಡ್ಡಿ ಅವರು ಪಿಓಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದರೆ ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ನಿಧರ್ಾರ ತೆಗೆದುಕೊಂಡಿದ್ದೇವೆ. ಹೀಗಾಗಿ ನಮ್ಮ ಭಾಗದಲ್ಲಿ ಸಾರ್ವಜನಿಕ ಗಣೇಶೋತ್ಸವಗಳಲ್ಲೂ ಸಹ ಪಿಓಪಿ ಗಣಪತಿ ಕಡಿಮೆಯಾಗಿದೆ ಎಂದರು.
ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗದೆ ಗಣೇಶ ಮೂರ್ತಿ ಕೈಕಾಲು ಮುರಿದ ರೀತಿಯಲ್ಲಿ ಕಂಡುಬರುತ್ತವೆ. ಅಲ್ಲದೆ ಇದರಿಂದ ನಮ್ಮ ಜಲ ಮೂಲಗಳು ಮಲಿನಗೊಳ್ಳುತ್ತಿವೆ. ಇವುಗಳಿಗೆ ಬಳಸುವ ರಾಸಾಯನಿಕಯುಕ್ತ ಬಣ್ಣವೂ ಕೆರೆಯಲ್ಲಿ ಮಾಲೀನ್ಯ ಉಂಟು ಮಾಡುತ್ತದೆ ಎಂದರು.
ಪರಿಸರ ಸ್ನೇಹಿ ಗಣೇಶೋತ್ಸವಕ್ಕಾಗಿ ಶಾಲಾ ವಿದ್ಯಾಥರ್ಿಗಳೊಂದಿಗೆ ಸೇರಿ ಮಣ್ಣಿನ ಗಣೇಶನನ್ನು ಹಿಡಿದು ಜಾಥ ನಡೆಸಿದ್ದೇವು. ಕೆರೆಯಲ್ಲಿ ಕರಗುವಂತಹ ಶ್ರೇಷ್ಠ ಮಣ್ಣಿನ ಮೂರ್ತಿಯನ್ನಷ್ಟೇ ಬಳಸಿ ಎಂದು ಜನರಲ್ಲಿ ಅರಿವು ಮೂಡಿಸಲಾಗಿದೆ. ಗಣಪತಿ ಮೂರ್ತಿಗಳನ್ನು ತಯಾರಿಸಲು ಆರು ತಿಂಗಳ ಹಿಂದಿನಿಂದಲೇ ಸಿದ್ಧತೆ ನಡೆಸಲಾಗಿತ್ತು ಎಂದು ಹೇಳಿದರು.