ಸಿಬ್ಬಂದಿ ವೇತನ ಕಡಿತಕ್ಕೆ ಮುಂದಾದ ಡಿಸ್ನಿ

ವಾಷಿಂಗ್ಟನ್, ಏ 20, ಕೊರೊನಾ ಸೋಂಕಿನ ಕಾರಣ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು ವಾಲ್ಟ್ ಡಿಸ್ನಿ ಈ ವಾರದಿಂದ ತನ್ನ ಉದ್ಯೋಗಿಗಳಿಗೆ ವೇತನ ನೀಡುವುದಿಲ್ಲ ಎಂದು ಸೋಮವಾರ ಘೋಷಿಸಿದೆ.ಅತಿ ದೊಡ್ಡ ಮನೋರಂಜನಾ ಸಮೂಹ ಅಮೆರಿಕ, ಯೂರೋಪ್ ಮತ್ತು ಏಷ್ಯಾಗಳಲ್ಲಿ ಹೋಟೆಲ್ ಮತ್ತು ಥೀಮ್ ಪಾರ್ಕ್ ಗಳನ್ನು ನಡೆಸುತ್ತಿದ್ದು ಸುಮಾರು ಒಂದು ಲಕ್ಷ ಉದ್ಯೋಗಿಗಳಿಗೆ ವೇತನ ನೀಡಲಾಗುವುದಿಲ್ಲ ಎಂದು ಹೇಳಿದೆ.ಡಿಸ್ನಿ ತನ್ನ ಪಾರ್ಕ್, ವಿನೂತನ ಅನುಭವಗಳ ಮೂಲಕ 2019 ರ ಕೊನೆಯ ತ್ರೈ ಮಾಸಿಕದಲ್ಲಿ 1.4 ಶತಕೋಟಿ ಡಾಲರ್ ಕಾರ್ಯಚಾರಣೆ ಆದಾಯ ಗಳಿಸಿತ್ತು. ವೇತನ ರಹಿತ ರಜೆಯಲ್ಲಿರುವ ಸಿಬ್ಬಂದಿಯ ಸಂಪೂರ್ಣ ಆರೋಗ್ಯ ರಕ್ಷಣೆ ಸೌಲಭ್ಯ ನೀಡುವುದಾಗಿ ತಿಳಿಸಿರುವ ಕಂಪೆನಿ ಸರ್ಕಾರ ನೀಡುವ ಸೌಲಬ್ಯಗಳಿಗೂ ಅರ್ಜಿ ಸಲ್ಲಿಸುವಂತೆ ತನ್ನ ಅಮೆರಿಕದ ಉದ್ಯೋಗಿಗಳಿಗೆ ತಿಳಿಸಿದೆ.