ದಿಶಾ ನಿರ್ದೇಶಕ ವಿರೂಪಾಕ್ಷಿ ಹನಶಿಗೆ ಸನ್ಮಾನ
Disha director Virupakshi Hanashi honored
ಲೋಕದರ್ಶನ ವರದಿ
ದಿಶಾ ನಿರ್ದೇಶಕ ವಿರೂಪಾಕ್ಷಿ ಹನಶಿಗೆ ಸನ್ಮಾನ
ಉಗರಗೋಳ 15: ಉಗರಗೋಳ ಗ್ರಾಮದ ಹೂಲಿ ಅಜ್ಜನವರ ಮಠದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ (ದಿಶಾ) ಸಮಿತಿ ಬೆಳಗಾವಿ ನಿರ್ದೇಶಕರಾಗಿ ಆಯ್ಕೆಯಾದ ಸಾಮಾಜಿಕ ಕಾರ್ಯಕರ್ತ ವಿರೂಪಾಕ್ಷಿ ಹನಶಿ ಅವರನ್ನು ಮಾತಂಗಿ ಸದ್ಭಕ್ತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ವಿರೂಪಾಕ್ಷಿ ಹನಶಿ ಮಾತನಾಡಿ, 35 ವರ್ಷಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ವಿವಿಧ ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಅದನ್ನು ಗಮನಿಸಿ ನಿರ್ದೇಶಕನಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ದಿಶಾ ಸಮಿತಿ ಸಭೆಯಲ್ಲಿ ಧ್ವನಿ ಎತ್ತಿ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಉಗರಗೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಕಾಳಪ್ಪನವರ, ಬಿಜೆಪಿ ಎಸ್‌ಸಿ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ವೈ.ವೈ.ಕಾಳಪ್ಪನವರ, ಅಜ್ಜಪ್ಪ ಕೊಪ್ಪದ, ಹನುಮಂತಪ್ಪ ಮ್ಯಾಗೇರಿ, ಅಪ್ಪು ಕಾಳಪ್ಪನವರ, ವಿರುಪಾಕ್ಷಿ ಚಪ್ಪರಮನಿ, ಪರಶು ಬಸಲಿಂಗನವರ, ಕಲ್ಲಪ್ಪ ಮಿಯಪ್ಪನವರ, ರಮೇಶ್ ಕುರಿ, ರಾಮು ಕಾಳಪ್ಪನವರ, ಯಲ್ಲಪ್ಪ ಮ್ಯಾಗೇರಿ, ಅನಿಲಕುಮಾರ ಕಾಳಪ್ಪನವರ ಇದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 