ಆ.11 ರಂದು ನಾಗಾವಿಯಲ್ಲಿ ಆಧ್ಯಾತ್ಮಿಕ ಚಿಂತಕಿ ಐಶ್ವರ್ಯ ಪತ್ತಾರ ಅವರಿಂದ ಪ್ರವಚನ

 ಆ.11 ರಂದು ನಾಗಾವಿಯಲ್ಲಿ ಆಧ್ಯಾತ್ಮಿಕ ಚಿಂತಕಿ ಐಶ್ವರ್ಯ ಪತ್ತಾರ ಅವರಿಂದ ಪ್ರವಚನ Discourse by spiritual thinker Aishwarya Pattara in Nagavi on August 11

ಗದಗ 06 : ತಾಲೂಕಿನ ನಾಗಾವಿ ಗ್ರಾಮದ ಕನ್ನೂರ ಬಸವೇಶ್ವರ ಕಲ್ಯಾಣಮಂಟಪದಲ್ಲಿ ಶರಣಬಸವೇಶ್ವರ ಪುರಾಣ ಸಮಿತಿ ವತಿಯಿಂದ ಕಳೆದ 44 ವರ್ಷಗಳಿಂದ ಸಾಗಿ ಬಂದಿರುವ ಕಲಬುರ್ಗಿ ಶರಣಬಸವೇಶ್ವರ ಪುರಾಣವು ದಿನಾಂಕ 25-7-2025 ರಿಂದ ಪ್ರಾರಂಭಗೊಂಡಿದ್ದು, ದಿನಾಂಕ 25-8-2025 ರಂದು ಮುಕ್ತಾಯಗೊಳ್ಳಲಿದೆ. 

ದಿನಾಂಕ 11-8-2025 ರಂದು ರಾತ್ರಿ 8 ಗಂಟೆಗೆ ಜರುಗುವ ಪುರಾಣ ಕಾರ್ಯಕ್ರಮದಲ್ಲಿ ವಿಜಯಪುರದ ಆಧ್ಯಾತ್ಮಿಕ ಚಿಂತಕಿ ಶ್ರೀಮತಿ ಐಶ್ವರ್ಯ ಪವನಕುಮಾರ ಪತ್ತಾರ ಅವರು ವಿಶೇಷ ಪ್ರವಚನ ನೀಡಲಿದ್ದಾರೆ. 

ವೇ.ಮೂ. ಮೃತ್ಯುಂಜಯ ಸ್ವಾಮೀಜಿ ಹಿರೇಮಠ ಪುರಾಣ ಪಠಿಸುವರು. ವೇ.ಮೂ. ಮಂಜಯ್ಯ ಶಾಸ್ತ್ರಿಗಳು ಹಿರೇಹಾಳ ಅವರು ಪ್ರವಚನ ನೀಡುವರು. ವೀರೇಶ್ವರ ಪುಣ್ಯಾಶ್ರಮ ದಾವಣಗೆರೆ ಕಲಾವಿದರಾದ ಬಸವರಾಜ ಎಸ್‌. ಹೊಂಬಳ, ರಾಜಶೇಖರ್ ಎಸ್‌. ಸಂಗಳಕರ ಹುಬ್ಬಳ್ಳಿ ಇವರು ಸಂಗೀತ ಸೇವೆ ನೀಡಲಿದ್ದಾರೆ.  

ಆ.12ಕ್ಕೆ ನಾಗಾವಿ ಗ್ರಾಮದಲ್ಲಿ ಶ್ರೀಗುಡ್ಡಾಪುರ ದಾನಮ್ಮದೇವಿ ಜೀವನದರ್ಶನ ಪ್ರವಚನ:  

ನಾಗಾವಿ ಗ್ರಾಮದ ಸಾಮಾಜಿಕ ಹೋರಾಟಗಾರ ಬಸವಣ್ಣೆಯ್ಯ ಹಿರೇಮಠ ಅವರ ಕುಟುಂಬ ಪರಿವಾರದಿಂದ ಪ್ರತಿ ವರ್ಷ ತಮ್ಮ ನಿವಾಸ ಸೋಮೇಶ ನಿಲಯದಲ್ಲಿ ಸೋಮೇಶ ಹಿರೇಮಠ ಪ್ರತಿಷ್ಠಾನ, ನಮೋ ಯೋಗ ಸಮುದಾಯ ಭವನ ಸಮಿತಿಯಿಂದ ಶ್ರಾವಣ ಮಾಸದಲ್ಲಿ ಗುಡ್ಡಾಪುರ ದಾನಮ್ಮ ದೇವಿಯ ಜೀವನ ದರ್ಶನ ಶ್ರವಣ ಮಾಡುತ್ತಾ ಬರುತ್ತಿದ್ದು, ದಿನಾಂಕ 12-8-2025 ಮಂಗಳವಾರ ಮುಂಜಾನೆ 8 ಗಂಟೆಯಿಂದ 10 ಗಂಟೆಯವರೆಗೆ ವಿಜಯಪುರದ ಆಧ್ಯಾತ್ಮಿಕ ಚಿಂತಕಿ ಶ್ರೀಮತಿ ಐಶ್ವರ್ಯ ಪವನಕುಮಾರ ಪತ್ತಾರ ಅವರು ಶ್ರೀಗುಡ್ಡಾಪುರ ದಾನಮ್ಮದೇವಿ ಜೀವನದರ್ಶನ ಪ್ರವಚನವನ್ನು ಮಾಡಲಿದ್ದಾರೆ.  

 ವೇ.ಮೂ. ಮೃತ್ಯುಂಜಯ ಸ್ವಾಮೀಜಿ ಹಿರೇಮಠ, ಬೆಳದಡಿಯ ವೇ.ಮೂ. ಶಂಭುಲಿಂಗಯ್ಯನವರು ಕಲ್ಮಠ, ವೇ.ಮೂ. ಮಂಜಯ್ಯ ಶಾಸ್ತ್ರಿಗಳು ಹಿರೇಹಾಳ ಅವರ ಸಮ್ಮುಖ ವಹಿಸುವರು. 

ತಾಪಂ ಮಾಜಿ ಅಧ್ಯಕ್ಷರಾದ ಬಿ.ಎಸ್‌. ಚಿಂಚಲಿ ಅಧ್ಯಕ್ಷತೆ ವಹಿಸುವರು. ನಾಗಾವಿಯ ಬಸನಗೌಡ್ರ ಶಾಂತಗೌಡ್ರ ಪಾಟೀಲ, ಸೊರಟೂರಿನ ರಾಮಣ್ಣ ಕಮ್ಮಾರ ಅವರು ಉಪಸ್ಥಿತರಿರುವರು. 

 ವೀರೇಶ್ವರ ಪುಣ್ಯಾಶ್ರಮ ದಾವಣಗೆರೆ ಕಲಾವಿದರಾದ ಬಸವರಾಜ ಎಸ್‌. ಹೊಂಬಳ, ರಾಜಶೇಖರ್ ಎಸ್‌. ಸಂಗಳಕರ ಹುಬ್ಬಳ್ಳಿ ಇವರು ಸಂಗೀತ ಸೇವೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಈ ಆಧ್ಯಾತ್ಮ ಚಿಂತನೆ ಕಾರ್ಯಕ್ರಮದಲ್ಲಿ ಭಕ್ತ ಜನತೆ ಭಾಗವಹಿಸಬೇಕು ಎಂದು ಸೋಮೇಶ ಹಿರೇಮಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕುಮಾರಗೌಡ ಪಾಟೀಲ ವಿನಂತಿಸಿದ್ದಾರೆ.