ವಿಕಲಚೇತನ ಮಕ್ಕಳ ಸೇವೆ ದೇವರ ಸೇವೆ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಅಂಡಗಿ

ಲೋಕದರ್ಶನ ವರದಿ

ಕೊಪ್ಪಳ 17: ವಿಕಲಚೇತನ ಮಕ್ಕಳ ಸೇವೆಯನ್ನು ಮಾಡಿದರೆ ಅದು ದೇವರ ಸೇವೆಗೆ ಸಮವಾಗಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣ ವಿಭಾಗದಿಂದ ಹಮ್ಮಿಕೊಂಡಿದ್ದ ವಿಕಲಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ವಿಕಲಚೇತನ ಮಕ್ಕಳ ಪಾಲಕರು ಮಕ್ಕಳ ಬಗ್ಗೆ ನಿರಾಸಕ್ತಿಯನ್ನು ಹೊಂದಬಾರದು. ವಿಕಲಚೇತನ ಮಕ್ಕಳ ಸೇವೆಯನ್ನು ಮಾಡುವುದು ದೇವರ ಸೇವೆ ಮಾಡಿದಂತೆ ಆಗುತ್ತದೆ. ಅಂಗವಿಕಲತೆ ಎಂಬುದು ಒಂದು ಶಾಪವಲ್ಲ ಅದು ಹಲವಾರು ಕಾರಣದಿಂದ ಅಮಗವಿಕಲರಾಗಿತ್ತಾರೆ. ಅಂಗವಿಕಲತೆಗೆ ಒಳಗಾದ ಮಕ್ಕಳು ಅಂಗವಿಕಲತೆಯನ್ನು ಶಾಪವೆಂದು ಪರಿಗಣಿಸಿದೇ ವರವಾಗಿ ಸ್ವೀಕರಿಸಬೇಕು.ಅಂಗವಿಕಲತೆಗೆ ಒಳಗಾಗಿ ಸಾಧನೆ ಮಾಡಿದರವರು ಅನೇಕರಿದ್ದಾರೆ. ವಿಶೇಷವಾಗಿ ಅಂಧರಾಗಿದ್ದು ಕೂಡಾ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಂ.ಪುಟ್ಟರಾಜ ಗವಾಯಿಗಳು, ಅಶ್ವನಿ ಅಂಗಡಿ ಸೇರಿದಂತೆ ಅನೇಕರಿದ್ದಾರೆ. ವಿಕಲಚೇತನ ಮಕ್ಕಳಿಗೆ ನೀಡುವ ವಿದ್ಯಾಥರ್ಿ ವೇತನವನ್ನು ಹೆಚ್ಚಳ ಮಾಡಬೇಕು. ವಿಶೇಷವಾಗಿ ಶ್ರವಣ ನ್ಯೂನತೆಯುಳ್ಳರಿಗೆ ನೀಡಲಾಗುವ ಶ್ರವಣಯಂತ್ರವು ಹೆಚ್ಚು ವೆಚ್ಚದಾಗಿದ್ದು, ಸರಕಾರವು ವಿಕಲಚೇತನರ ಸಾಧನ ಸಲಕರಣೆಯನ್ನು ಖದೀರಿಗೆ ಪ್ರೋತ್ಸಾಹ ಹಣವನ್ನು ನೀಡಬೇಕು ಎಂದು ಹೇಳಿದರು.

ವಿಕಲಚೇತನರ ಬಗ್ಗೆ ಅನುಕಂಪವನ್ನು ವ್ಯಕ್ತಪಡಿಸುವ ಬದಲಿಗೆ ಅವಕಾಶವನ್ನು ನೀಡುವ ಕೆಲಸವಾಗಬೇಕಿದೆ. ವಿಕಲಚೇತನರಿಗಾಗಿ  ವಿವಿಧ ಕ್ಷೇತ್ರದಲ್ಲಿ ಮಿಸಲಾತಿ ನೀಡಲಾಗಿದೆ. ಅಂತಹ ಮಿಸಲಾತಿಯನ್ನು ಪಡೆಯುವ ನಿಟ್ಟಿನಲ್ಲಿ ಮಕ್ಕಳು ಶಿಕ್ಷಣವನ್ನು ಪಡೆಯಬೇಕು.ವಿಕಲಚೇತನರಿಗಾಗಿ ವಿಶೇಷ ಹಕ್ಕು ಮತ್ತು ಕಾನೂನುಗಳಿದ್ದು ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ವಿಕಲಚೇತನ ನೌಕರರ ಸಂಘದ ಜಿಲ್ಲಾ ಖಜಾಂಚಿ  ಕಾಶಿನಾಥ ಸಿರಿಗೇರಿ ಹೇಳಿದರು.

ವಿಕಲಚೇತನ ಮಕ್ಕಳ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆಯಲ್ಲಿ ಅನೇಕ  ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಿಸಿಕೊಂಡು  ಸಮಾಜಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡಬೇಕು ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ.ಹೇಳಿದರು. 

ಕಾರ್ಯಕ್ರಮದ ಕುರಿತು ಸಮನ್ವಯ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಹಾಗೂ ಕಾರ್ಯಕ್ರಮದ ಮೇಲ್ವಿಚಾರಕರಾದ ಬಲರಾಮ ಪೂಜಾರ ಪ್ರಸ್ತಾವಿಕವಾಗಿ ಮಾತನಾಡಿದರು. ವಿಕಲಚೇತನ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವೀರಭದ್ರಯ್ಯಾ ಪೂಜಾರ, ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ, ಉಪಾಧ್ಯಕ್ಷರಾದ ನಾಗರತ್ನ, ಶಿಕ್ಷಕರಾದ ಶಿವಣ್ಣ ಶ್ರೀರಡ್ಡಿ, ಹಬೀಬ ರಹೆಮಾನ, ದೈಹಿಕ ಶಿಕ್ಷಕರಾದ ಅಶೋಕ ಅಲಿಪೂರ, ಸಿದ್ದರಡ್ಡಿ, ಬಾಗ್ಯಶ್ರೀ, ಕರಿಬಸವಸ್ವಾಮಿ, ಮಹಾಂತೇಶ ಮುಂತಾದವರು ಹಾಜರಿದ್ದರು. ಶಿಕ್ಷಕರಾದ ಶ್ರೀನಿವಾಸರಾವ ಕುಲಕಣರ್ಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕರಾದ ನಫೀಜಖಾನ ಪಠಾಣ ಸ್ವಾಗತಿಸಿ, ನಾಗೇಶ ಕಂಬಳಿ ವಂದಿಸಿದರು.