ವ್ಲಾಡಿವೋಸ್ಟಾಕ್, ಆಗಸ್ಟ್ 12 ದ್ವಿಪಕ್ಷೀಯ ವ್ಯಾಪಾರ ಸಹಕಾರವನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ರಷ್ಯಾ ಮತ್ತು ನವದೆಹಲಿ ನಡುವೆ ನೇರ ವಿಮಾನಯಾನ ಪ್ರಾರಂಭಿಸಲು ಭಾರತ ಆಶಿಸುತ್ತಿದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೋಮವಾರ ತಿಳಿಸಿದ್ದಾರೆ.
ನಾನು ಇಂದು ರಷ್ಯಾದ ನಾಯಕತ್ವದೊಂದಿಗೆ ಚರ್ಚಿಸಲು ಬಯಸುವ ಕ್ಷೇತ್ರಗಳಲ್ಲಿ ವಿಮಾನಯಾನ ಕೂಡ ಒಂದಾಗಿದೆ. ಏಕೆಂದರೆ, ವಿಶೇಷವಾಗಿ ದೂರದ ಪೂರ್ವ ಪ್ರದೇಶದ ನಡುವೆ ಹೆಚ್ಚಿನ ವ್ಯವಹಾರ ನಡೆಸಲು ಇದು ಮೊದಲ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ವ್ಲಾಡಿವೋಸ್ಟಾಕ್ ಮತ್ತು ದೆಹಲಿಯೊಂದಿಗೆ ನೇರ ವಿಮಾನಯಾನ ಎರಡೂ ಕಡೆ ವ್ಯವಹಾರಕ್ಕೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎಂದು ಗೋಯಲ್ ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ಗೆ ತಿಳಿಸಿದರು.
ರಷ್ಯಾದ ಪೆಸಿಫಿಕ್ ನಗರ ವ್ಲಾಡಿವೋಸ್ಟಾಕ್ಗೆ ಭೇಟಿ ನೀಡುವ ಪ್ರಸ್ತುತ ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿರುವ ಸಚಿವರು, ರಷ್ಯಾದ ದೂರದ ಪೂರ್ವ ಮತ್ತು ಭಾರತದ ನಡುವೆ ನೇರ ವಿಮಾನಯಾನಗಳನ್ನು ಪ್ರಾರಂಭಿಸಲು ಯಾವುದೇ ನಿರ್ಧಿಷ್ಟ ಸಮಯವನ್ನು ಹೊಂದಿಲ್ಲ. ಇದು ಕಳೆದ ರಾತ್ರಿ ಬಂದ ಒಂದು ಆಲೋಚನೆಯಾಗಿದೆ. ಆದ್ದರಿಂದ ಅದಕ್ಕೆ ಸಮಯದ ಚೌಕಟ್ಟನ್ನು ಹಾಕುವುದು ತೀರಾ ಮುಂಚಿತವಾಗುತ್ತದೆ. ಆದರೆ ನಾವು ಇಂದು ಚರ್ಚೆಗಳನ್ನು ಪ್ರಾರಂಭಿಸುತ್ತೇವೆ ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.
ದೂರದ ಪೂರ್ವದಲ್ಲಿನ ಬಂದರು ಮೂಲಸೌಕರ್ಯವನ್ನು ನವೀಕರಿಸುವ ಅಗತ್ಯವಿರುವುದರಿಂದ ಹೆಚ್ಚಿನ ದೊಡ್ಡ ಹಡಗುಗಳ ಸೇವೆಯನ್ನು ಪ್ರಾರಂಭಿಸಬಹುದು. ರಷ್ಯಾದ ಉಪ ಪ್ರಧಾನ ಮಂತ್ರಿ ಯೂರಿ ಟ್ರುಟ್ನೆವ್ ಅವರೊಂದಿಗಿನ ಮಾತುಕತೆಯ ಕಾರ್ಯಸೂಚಿಯಲ್ಲಿ ಎರಡೂ ದೇಶಗಳಲ್ಲಿ ವೀಸಾ ಕಾರ್ಯವಿಧಾನಗಳ ಸೌಲಭ್ಯದ ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದರು.