ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ

ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ Dipotsava program for the month of Kartika

                 ಹುಬ್ಬಳ್ಳಿ 22: ಸದ್ಗುರು ಶಿವಲಿಂಗೇಶ್ವರ ಸ್ವಾಮಿಗಳವರ ರಾಜ ವಿದ್ಯಾಶ್ರಮದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಶ್ರೋ.ಬ್ರ.ಪೂ. ಭಾರತ ಭೂಷಣ ಶ್ರೀಷಡಕ್ಷರಿ ದೇವರು ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ,  ರಾಣಿಚನ್ನಮ್ಮ ಪರಿಸರಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು. ಶ್ರೀಷಡಕ್ಷರಿ ದೇವರು, ಗಣ್ಯರಾದ ಪಾಲಿಕೆ ಸದಸ್ಯ ಅರ್ಜುನ ಪಾಟೀಲ, ಮುಖಂಡರಾದ ಪ್ರೇಮನಾಥಕೆ. ಚಿಕ್ಕತುಂಬಳ, ಬಾಳಮ್ಮ ಜಂಗಿನವರ, ಅಕ್ಷಯಮುದ್ದಿ, ಶಿವಬಸವ ಗಚ್ಚಿನವರ,   ಡಾ. ಬಸವ ಕುಮಾರ ತಲವಾಯಿ, ಅನೀಲ ದೇಶಪಾಂಡೆ, ವಂದನಾ ಕರಾಳೆ, ಸುಮಂಗಲಾ ಚಿಕ್ಕಪಟ್ಟ, ಬಸವರಾಜ ಗೋಳಪ್ಪನವರ, ಜೀವಾಪುರ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.

            ಶ್ರೋ.ಬ್ರ.ಪೂ. ಭಾರತಭೂಷಣ ಶ್ರೀಷಡಕ್ಷರಿ ದೇವರು ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ,  ರಾಣಿಚನ್ನಮ್ಮ ಪರಿಸರ ಸೇವಾಸಮಿತಿ ಹಾಗೂಬಸವ ಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಸುಜಯ ಸುರೇಶ ಹೊರಕೇರಿ, ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯ್ದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ ಅವರು ಮಾಲಾರೆ​‍್ಣಮಾಡಿ ಗೌರವಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ನಮನಗಳನ್ನು ಸಲ್ಲಿಸಿದರು. ಭಕ್ತಿಯಿಂದ ಶ್ರೀಗಳದರ್ಶನ ಆಶೀರ್ವಾದ ಪಡೆದರು.ಹೀರೆಬೆಂಡಿಗೇರಿಯ ಲಿಂಗಾನಂದ ಸ್ವಾಮಿಜಿ, ದಾವಣಗೆರೆಯ ತಿಪ್ಪೆರುದ್ರ ಸ್ವಾಮಿಜಿ, ಈಶ್ವರ ನಾಯಪ್ಪಗೋಳ, ಹೆಮಣ್ಣ ಬನಪ್ಪನವರ, ಅಮರನಾಥ, ಫಕೀರಗೌಡ ಪಾಟೀಲ, ದೀಲಿಪ ಕುಮಾರ, ರಾಘವೇಂದ್ರ, ವಿರುಪಾಕ್ಷಯ್ಯ ಜಂಗಿನಮಠ, ಭಕ್ತರು ಭಾಗವಹಿಸಿದ್ದರು.