ಚುನಾವಣೆ ಮುಂದೂಡಲು ಕಾರಣ ತಿಳಿಸಿ: ಆಯೋಗಕ್ಕೆ ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು,ಸೆ 27:   ನಾನು ಯಾರಿಗೂ ಚೇಲಾ ಅಲ್ಲಾ, ಯಾರಿಗೂ ಬಕೆಟ್ ಕೂಡ ಹಿಡಿದಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್  ಅವರಿಗೆ ತಿರುಗೇಟು ನೀಡಿದ್ದಾರೆ. 

    ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಯಾರ ಪರವೂ ಇಲ್ಲ. ಸಿದ್ದರಾಮಯ್ಯ ಪರನೂ ಇಲ್ಲ. ಪರಮೇಶ್ವರ್ ಪರನೂ ಇಲ್ಲ. ಡಿ.ಕೆ ಶಿವಕುಮಾರ್ ಪರನೂ ಇಲ್ಲ, ಯಾರಿಗೂ ಬಕೆಟ್ ಕೂಡ ಹಿಡಿದಿಲ್ಲ. ಯಾರ ಮನೆಯ ಬಾಗಿಲನ್ನೂ ಕಾದಿಲ್ಲ. ನಾನು ಇರುವುದು ಕಾಂಗ್ರೆಸ್ ಪಕ್ಷದ ಪರ ಎಂದು ಅವರು ಸ್ಪಷ್ಟಪಡಿಸಿದರು. 

    ಸೋಮಶೇಖರ್ ಅವರಿಗೆ ಹೇಳಲು ಏನು ಇಲ್ಲ. ಅವರು ಹತಾಶೆಯಿಂದ ಈ ರೀತಿ  ಮಾತನಾಡುತ್ತಿದ್ದಾರೆ. ನಾನು ಯಾರ ಹೆಸರನ್ನು ಕೂಡ ಉಲ್ಲೇಖಿಸಿಲ್ಲ. ಅವರು ಯಾರ ಜೊತೆ ಇದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಬಹಳ ವಿಚಲಿತರಾಗಿ, ಹತಾಶರಾಗಿದ್ದಾರೆ. ಹಾಗಾಗಿ ಅವರು ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದರು. 

    ಅನರ್ಹ ಶಾಸಕರು, ಸಚಿವ ಸ್ಥಾನದ ಕನಸು ಕಂಡಿದ್ದರು. ನಾವು ಅಧಿಕಾರಕ್ಕೆ ಬರುತ್ತೇವೆ ಎಂದುಕೊಂಡಿದ್ದರು. ಆದರೆ ಅವರ ಆಸೆಯಲ್ಲಾ ನುಚ್ಚುನೂರಾಗಿದೆ. ಅವರು ಈಗ ಕಾಂಗ್ರೆಸ್ನಲ್ಲೂ ಇಲ್ಲ, ಬಿಜೆಪಿಯಲ್ಲೂ ಇಲ್ಲ,  ನಮ್ಮ ಪಕ್ಷದಲ್ಲಿದ್ದಾಗ ರಾಜರ ಥರ ಇದ್ದರು. ಈಗ ಎಲ್ಲೂ ಸಲ್ಲದವರಾಗಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು. 

    ಎಲ್ಲಾ ಪಕ್ಷಗಳಲ್ಲಿ ಬಣಗಳು ಇರುವುದು ಸಹಜ. ದೊಡ್ಡ ಬಣ, ಸಣ್ಣ ಬಣ, ಒನ್ ಮೆನ್ ಆಮರ್ಿನೂ ಇರುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಬಣಗಳಿವೆ ಎಂದು ಒಪ್ಪಿಕೊಂಡರು. 

    ಈ ಬಣಗಳು ಇಲ್ಲದೆ ಇದ್ದರೆ ಪಕ್ಷದಲ್ಲಿ ಆಂತರಿಕ ವರ್ಚಸ್ಸು, ಆಂತರಿಕ ಪ್ರಜಾಪ್ರಭುತ್ವ ಇರುವುದಿಲ್ಲ. ಬಣಗಳು ಇದ್ದರೆ ಒಂದು ಶಕ್ತಿ ಇದ್ದ ಹಾಗೆ. ಈ ಬಣಗಳು ನಕಾರಾತ್ಮಕವಾಗಿ ಇರಬಾರದು. ಸಕಾರಾತ್ಮಕವಾಗಿ ಮಾತ್ರ ಇರಬೇಕು ಎಂದು ಅವರು ವಿವರಿಸಿದರು. 

    ಐಎಂಎ ಪ್ರಕರಣ ಇರಬಹುದು , ಫೋನ್ ಟ್ಯಾಪಿಂಗ್ ಇರಬಹುದು ಎಲ್ಲವೂ ಶೇಕಡಾ ನೂರು ನಿಷ್ಪಕ್ಷಪಾತವಾಗಿ ತನಿಖೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳುವ ಮೂಲಕ ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆಯೂ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ ಎಂದು ಅವರು ಸೂಚ್ಯವಾಗಿ ಹೇಳಿದರು. 

ಉಪಚುನಾವಣೆ ಮುಂದೂಡಿದ ಕೇಂದ್ರ ಚುನಾವಣಾ ಆಯೋಗದ ಮೇಲೆ ದೇಶದ ಜನರಿಗೆ ನಂಬಿಕೆ ಹೊರಟುಹೋಗಿದೆ, ಅದು ಬಿಜೆಪಿ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು. 

    ಆಯೋಗ ವಿನಾಕಾರಣ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿತು. ಚುನಾವಣಾ ಆಯೋಗ ಸ್ವಯಂ ಪ್ರೇರಣೆಯಿಂದ ಅನರ್ಹರು ಸ್ಪಧರ್ೆ ಮಾಡಬಹುದು ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ. ಚುನಾವಣೆ ಮುಂದೂಡಲು ನಮ್ಮ ಅಭ್ಯಂತರ ಇಲ್ಲ ಎಂದು ಆಯೋಗ ಹೇಳಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಅನರ್ಹ ಶಾಸಕರ ಪರವಾಗಿ ವಕಾಲತ್ತು ವಹಿಸಿದೆ ಎಂದು ಆರೋಪಿಸಿದರು. 

    ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ. ಸಂವಿಧಾನಾತ್ಮಕ ಸ್ವಾಯತ್ತತೆಯನ್ನು ಚುನಾವಣಾ ಆಯೋಗ ಕಳೆದುಕೊಂಡಿದೆ. ಯಾವುದೇ ಸಕಾರಣಗಳಿಲ್ಲದೇ ಚುನಾವಣೆ ಮುಂದೂಡಿರುವುದು ಸರಿಯಲ್ಲ. ಚುನಾವಣೆ ಮುಂದೂಡುವುದಕ್ಕೆ ಕಾರಣ ತಿಳಿಸುವ ಮೂಲಕ ದೇಶದ ಜನರ ಸಂಶಯ ಬಗೆಹರಿಸಬೇಕು ಸುಪ್ರೀಂ ಕೋಟರ್್ ತಡೆ ಕೊಡದೇ ಚುನಾವಣಾ ಮುಂದೂಡಿದ್ದು ಯಾಕೆ..?. ನಾಮಪತ್ರ ಸಲ್ಲಿಕೆ ಮಾಡಿದವರ ಪರಿಸ್ಥಿತಿ ಏನು?. ಚುನಾವಣಾ ಆಯೋಗ ಒಂದು ಪಕ್ಷದ ಸಂಸ್ಥೆ ಎನ್ನುವ ರೀತಿ ವರ್ತನೆ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸ್ಪಷ್ಟೀಕರಣ ಕೇಳುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

     ಕೋಮು ಗಲಭೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೆ, ಪ್ರಕೃತಿ ವಿಕೋಪ ತುತ್ತಾಗಿದ್ದರೆ ಮಾತ್ರ ಚುನಾವಣೆಯ ಅಧಿಸೂಚನೆ ರದ್ದುಪಡಿಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ. ಇಲ್ಲದಿದ್ದಲ್ಲಿ ರಾಷ್ಟ್ರಪತಿ ಅವರ ಅನುಮತಿ ಪಡೆದು ಆಯೋಗ ನಿಧರ್ಾರ ಪ್ರಕಟಿಸಬೇಕಿತ್ತು, ಆದರೆ ಎಲ್ಲವನ್ನು ಮೀರಿ ಸುಪ್ರೀಂ ಕೋಟರ್್ ನಲ್ಲಿ ಆಯೋಗದ ಪರ ವಕೀಲರು ಮುಂದೂಡಬಹುದು ಎಂದು ಹೇಗೆ ವಿಚಾರ ಪ್ರಸ್ತಾಪಿಸಿದರು ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್, ಇವೆಲ್ಲಾ ಬಿಜೆಪಿಯ ಏಜೆಂಟ್ ರೀತಿ ವತರ್ಿಸಿದರ ಪರಿಣಾಮ ಎಂದು ಆಯೋಗದ ವಿರುದ್ಧ  ಕಿಡಿ ಕಾರಿದರು.