ಹುಲ್ಯಾಳ ಕೆರೆಗೆ ಗಣ್ಯರಿಂದ ಬಾಗಿನ ಅರ್ಪಣೆ
Dignitaries offers Bagina to Hulyala Lake
ರಾಯಬಾಗ, 07 : ಹಿರಣ್ಯಕೇಶಿ ನದಿಯಿಂದ ಕೆನಾಲ ಮೂಲಕ ಈ ಭಾಗದಲ್ಲಿ ನೀರಿನ ಅಭಾವ ಉಂಟಾಗದಂತೆ ಮಳೆ ಪ್ರಾರಂಭಗೊಳ್ಳುವ ಮೊದಲೆ ಪಟ್ಟಣದ ಹುಲ್ಯಾಳ ಕೆರೆ ತುಂಬಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಶಿವನಗೌಡ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಹುಲ್ಯಾಳ ಕೆರೆಗೆ ಬಾಗಿನ ಅರ್ಿಸಿ ಮಾತನಾಡಿದ ಅವರು, ಹಿರಣ್ಯಕೇಶಿ ನದಿ ಪೋಲು ಆಗಿ ಹಳ್ಳಕ್ಕೆ ಹರಿದು ಹೋಗುವ ಬದಲಾಗಿ, ಈ ಭಾಗದ ರಾಯಬಾಗ ಸೇರಿದಂತೆ ನಂದಿಕುರಳಿ, ನಸಲಾಪೂರ, ಕೆಂಪಟ್ಟಿ, ಕೆರೂರ, ಖಡಕಲಾಟ ವರೆಗಿನ ಗ್ರಾಮಗಳ ಕೇನಾಲಗಳಿಗೆ ಹರಿಸುವುದರಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನುಕೂಲವಾಗಲಿಗೆ ಎಂದು ತಿಳಿಸಿದರು. ಕೇನಾಲಗಳಿಗೆ ನೀರು ಹರಿವುದರಿಂದ ಅಂತರಜಲಮಟ್ಟ ಹೆಚ್ಚಿಸಿ, ಬೊರವೇಲ್‌ಗಳಿಗೆ ನೀರು ದೊರೆಯುತ್ತದೆ. ರೈತರು ಪಟ್ಟಣದ ಜನರಿಗೆ ಕುಡಿಯುವ ನೀರು ಕಡಿಮೆಯಾದಂತೆ ನೋಡಿಕೊಳ್ಳಬೇಕು. ನೀರು ಹರಿಸಲು ಕಾರಣಿಭೂತರಾಗಿರುವ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಹಾಗೂ ನೀರಾವರಿ ಇಲಾಖೆ ಅಭಿಯಂತರರಿಗೆ ರೈತರ ಮತ್ತು ಸಾರ್ವಜನಿಕರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ ಮಾತನಾಡಿ, ಪೋಲು ಆಗಿ ಹೋಗುತ್ತಿದ್ದ ನೀರನ್ನು ಕೆನಾಲ ಮತ್ತು ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಂಡಿರುವ ನೀರಾವರಿ ಇಲಾಖೆ ಅಧಿಕಾರಿಗಳ ಕಾರ್ಯ ಮೆಚ್ಚುವಂತಹದ್ದು, ಈ ನೀರಿನ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಹೇಳಿದರು.
ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಬಂಡಗರ, ಜ್ಯೋತಿ ಕೆಂಪಟ್ಟಿ, ತಮ್ಮಣ್ಣಿ ನಿಂಗನೂರೆ, ದೀಲೀಪ ಜಮಾದಾರ, ಅಬ್ದುಲಸತ್ತಾರ ಮುಲ್ಲಾ, ಹರೀಶ ಕುಲಗುಡೆ, ವಿವೇಕ ಹಟ್ಟಿಕರ, ಮಾರುತಿ ನಾಯಿಕ, ಅಣ್ಣಾಸಾಹೇಬ ಸಮಾಜೆ, ದೀಲೀಪ ಜಮಾದಾರ, ಅರ್ಜುನ ಬಂಡಗರ, ಹಾಜಿ ಮುಲ್ಲಾ, ಫಾರೂಕ ಮೊಮಿನ, ಜಿನ್ನಪ್ಪ ಖೆಮಲಾಪೂರೆ, ಎಸ್.ಜಿ.ಸಲಗರೆ, ಅಭಿಯಂತರ ಎಚ್.ಎಲ್.ಪೂಜಾರಿ, ಸೇರಿದಂತೆ ಅನೇಕರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 