ಲಕ್ಷಣ್ ಸವದಿಗೆ ಉಪ ಮುಖ್ಯಮಂತ್ರಿ ಮಾಡಿದರೇ, ಕಾಂಗ್ರೆಸಿಗೇನು ನಷ್ಟ? : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ, ಆಗಸ್ಟ್ 31 :   ಲಕ್ಷಣ್ ಸವದಿ ಅಥವಾ ರಾಮ ಸವದಿಯನ್ನು ಉಪ ಮುಖ್ಯ ಮಂತ್ರಿಯಾಗಿ ಮಾಡುತ್ತೇವೆ. ಅದು ನಮ್ಮ ಪಕ್ಷದ ನಿರ್ಧಾರ , ಅದರಿಂದ ಕಾಂಗ್ರೆಸಿಗೇನು ನಷ್ಟ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಜಾರಿ ನಿದರ್ೆಶನಾಲಯ ನೋಟಿಸ್ ನೀಡಿದ ನಂತರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಮೇಲೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಭಾವವಿರುತ್ತದೆ ಎಂಬ ಅಂಶವನ್ನು ಕಾಂಗ್ರೆಸ್ ನವರು ಒಪ್ಪುತ್ತಾರೆಯೇ ಎಂದು ಅವರು ಪ್ರಶ್ನಿಸಿದರು.ಒಂದು ವೇಳೆ ಜಾರಿ ನಿದರ್ೆಶನಾಯಲದ ಅಧಿಕಾರಿಗಳು ತಪ್ಪು ಮಾಡಿದ್ದರೆ,ನ್ಯಾಯಾಲಯ ಇಡಿಗೆ ಛೀ ಮಾರಿ ಹಾಕುತ್ತಿತ್ತು. ಆದರೆ, ನ್ಯಾಯಾಲಯ ತಡೆಯಾಜ್ಞೆ ನೀಡಲು ನಿರಾಕರಿಸಿರುವುದನ್ನು ಗಮನಿಸಿದರೆ ಡಿಕೆ ಶಿವಕುಮಾರ್ ಅವರು ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನೇರ ಆರೋಪ ಮಾಡಿದರು. 

ಇಷ್ಟೆಲ್ಲ ಆದರೂ ಈ ಪ್ರಕರಣದಲ್ಲಿ ತಮ್ಮದೇನು ತಪ್ಪಿಲ್ಲ,ಕಾನೂನು ಹೋರಾಟದಿಂದ ಗೆದ್ದು ಬರುತ್ತೇನೆ ಎಂದು ಡಿಕೆಶಿ ಹೇಳಿದ್ದಾರಲ್ಲ, ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯಭರಿತ ಶುಭ ಹಾರೈಸಿದರು. 

ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳಿ ಇಲ್ಲಿಯವರೆಗೆ ಗೌಡರ ಕುಟುಂಬದ ಸ್ವಂತ ಆಸ್ತಿಯಾಗಿತ್ತು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ನಡೆಯುವುದಿಲ್ಲ.ಇದೀಗ ಕುಟುಂಬದ ಹಿಡಿತದಿಂದ ಹೊರ ಬಂದಿದೆ.ಆಪರೇಷನ್ ಕಮಲದ ಬಗ್ಗೆಯೂ ತನಿಖೆ ನಡೆಸುವಂತೆ ಕಾಂಗ್ರೆಸ್ ನಾಯಕರು ಈಗ ಒತ್ತಾಯಿಸುತ್ತಿದ್ದಾರೆ. ಇತ್ತೀಚಿನ ದಿನಗಳವರೆಗೂ ನೀವೇ ಅಧಿಕಾರದಲ್ಲಿದ್ದು ಯಾಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿಲ್ಲ.  ತನಿಖೆ ಮಾಡಲಿಲ್ಲ ಎಂದರೇ ನಿಮಗೆ ಶಕ್ತಿ ಇರಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ಆಪರೇಷನ್ ಕಮಲದ ಸಿಬಿಐ ತನಿಖೆ ಕುರಿತು ಮಾತನಾಡುವ ನೈತಿಕ ಶಕ್ತಿ ನಿಮಗೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.