ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಧಾರವಾಡ ಗ್ರಾಮೀಣ ತಾಲೂಕು ಉತ್ತಮ ಸಾಧನೆ
Dharwad Rural Taluk performs well in SSLC exams
ಲೋಕದರ್ಶನ ವರದಿ
ಧಾರವಾಡ 02: ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅವಕಾಶ ಸಿಕ್ಕಾಗ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.
ಅವರು ಧಾರವಾಡ ಗ್ರಾಮೀಣ ತಾಲೂಕಿನಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿಆರಸಿಯಲ್ಲಿ ಏರಿ್ಡಸಿದ್ದ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸಮಯಕ್ಕೆ ಮಹತ್ವ ನೀಡಿ ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಿರಿ ನಿಮಗೆ ಅಭಿನಂದನೆಗಳು ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 97.23 ಅ ಫಲಿತಾಂಶದೊಂದಿಗೆ ಧಾರವಾಡ ಗ್ರಾಮೀಣ ತಾಲೂಕು ಉತ್ತಮ ಸಾಧನೆ ಮಾಡಿದೆ. ಈ ನಿಮಿತ್ತ ಧಾರವಾಡ ಗ್ರಾಮೀಣ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ ಅವರಿಗೆ ತಾಲೂಕಿನ ಎಲ್ಲರ ಪರವಾಗಿ ಸನ್ಮಾನಿಸಲಾಯಿತು.
2025-26 ನೇ ಸಾಲಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ ಇವರು ಉತ್ತಮ ಫಲಿತಾಂಶಕ್ಕೆ ಕೈಗೊಂಡ ಕ್ರಮಗಳು;
ವಿಶೇಷ ತರಗತಿಗಳ ನಿರ್ವಹಣೆ, ವಿದ್ಯಾರ್ಥಿಗಳ ಮನೆ ಭೇಟಿ, ವಿಷಯ ಶಿಕ್ಷಕರ ಕಾರ್ಯಾಗಾರಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು, 40+ ಪಾಸಿಂಗ್ ಪ್ಯಾಕೇಜ್, ಎಲ್ಬಿಎ ಆಧಾರಿತ ಸ್ಕೋರಿಂಗ್ ಪ್ಯಾಕೇಜ್ ತರಗತಿಗಳು, ಸಕಾಲದಲ್ಲಿ ಪಠ್ಯ ಬೋಧನೆ ಪೂರ್ಣಗೊಳಿಸುವುದು, ಸಂಪನ್ಮೂಲ ವ್ಯಕ್ತಿಗಳ ಸದ್ಬಳಕೆ, ಪ್ರತಿ ಶನಿವಾರ ಮುಖ್ಯೋಪಾಧ್ಯಾಯರಿಗೆ ಗೂಗಲ್ ಸಭೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ತಂಡ ರಚಿಸಿ ತಾವೇ ಶಾಲೆಗೆ ಭೇಟಿ ನೀಡಿ ಮಾರ್ಗದರ್ಶನ ಮಾಡಿದರು. ದೈಹಿಕ ಶಿಕ್ಷಣ ಪರೀವೀಕ್ಷಕರ, ಕ್ಷೇತ್ರ ಸಮನ್ವಾಧಿಕಾರಿಗಳ, ತಾಲೂಕಾ ಎಸ್.ಎಸ್.ಎಲ್.ಸಿ ಪರೀಕ್ಷಾ ನೊಡಲ್, ಶಿಕ್ಷಣ ಸಂಯೋಜಕರ, ಬಿಆರಸಿ ಕಛೇರಿ ಅವರ ತಂಡದೊಂದಿಗೆ ಮುಖ್ಯೋಪಾಧ್ಯಾಯರ ನಿರ್ದೇಶನದಂತೆ ಶಿಕ್ಷಕರು ವಾಟ್ಸ್ಪ್ ಗುಂಪು ರಚಿಸಿ,ಮಕ್ಕಳಿಗೆ ಕರೆ ಮೂಲಕ ವಿಷಯಗಳನ್ನು ಚರ್ಚಿಸಲು ತಿಳಿಸಲಾಯಿತು. ಈ ಮೂಲಕ ಮಕ್ಕಳ ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲಾಯಿತು. ಯಾವ ಮಕ್ಕಳಿಗೂ ಏನೂ ತೊಂದರೆ ಆಗದೆ ಪರೀಕ್ಷೆ ನಡೆಸುವುದು, ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ ಸಾಧನೆ ಮಾಡಲು ಪ್ರೇರೆಪಣೆ ನೀಡಲಾಯಿತು. ಜನಪ್ರತಿನಿಧಿಗಳು, ಮುಖ್ಯಾಧ್ಯಾಪಕರ, ಸಹ-ಶಿಕ್ಷಕ ಹಾಗೂ ನೌಕರರ ಸಂಘಟನೆ ಸಹಕಾರದೊಂದಿಗೆ ತಾಲೂಕು ಈ ಬಾರಿ 97.23 ಅ ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಉತ್ತಮ ಸ್ಥಾನ ಪಡೆಯಿತು.ಹೀಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ತಾಲೂಕಿನ ಎಲ್ಲಾ ಮಕ್ಕಳು ಚೆನ್ನಾಗಿ ಓದಿ ಪರೀಕ್ಷೆಗೆ ಸಿದ್ದಗೊಳಿಸಿದ ಇವರ ಪಾತ್ರ ಮಹತ್ವದಾಗಿದೆ.
ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿ ಶ್ರೀರಕ್ಷಾ ಗೂಳಪ್ಪ ಬಡಿಗೇರ(619) ಮಾತನಾಡುತ್ತಾ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕಾದರೆ ಮುಂದೆ ಮಾಡುವ ಕೆಲಸದ ಬಗ್ಗೆ ಸ್ಪಷ್ಟ ಗುರಿ ಹೊಂದಿರಬೇಕು. ಆಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ. ನಾನು ಸಾಧನೆ ಮಾಡಲು ಇದೆ ಕಾರಣ ಎಂದು ಹೇಳಿದಳು.
2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರೀರಕ್ಷಾ ಗೂಳಪ್ಪ ಬಡಿಗೇರ(619), ಶ್ರೀನಿಧಿ ಆನಂದ ಪಾಟೀಲ (619), ಶ್ರೀಧರ ಸೂರ್ಯವಂಶಿ(618), ಜ್ಯೋತಿ ರುದ್ರ್ಪ ಹಜೇರಿ(616), ವೈಷ್ಣವಿ ರಾಜೇಶ ಹವಾನಿ(616),ಮಹಾಲಕ್ಷ್ಮೀ ಸಂತೋಷ ಗಿರಿಯಪ್ಪನವರ(616),ಕಾವ್ಯಾ ಬಸಪ್ಪ ಸಾಲಗಟ್ಟಿ(618) ಇವರಿಗೆ ತಾಲೂಕಿನ ಪರವಾಗಿ ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಣ ಪರೀವೀಕ್ಷಕರಾದ ಈಶ್ವರ ಆಯಟ್ಟಿ, ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ. ಎಫ್. ತಾಲೂಕ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಯಾದ ಸಿ ಎಮ ಲಾಳನವರ, ಶಿಕ್ಷಣ ಸಂಯೋಜಕರು, ಬಿಆರ್ಪಿಗಳು, ತಾಲೂಕಿನಿಂದ ಆಗಮಿಸಿದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಪಾಲಕರು, ಮುಖ್ಯಾಧ್ಯಾಪಕರು, ಶಿಕ್ಷಕರು ಉಪಸ್ಥಿತರಿದ್ದರು.
ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ. ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿ ಶ್ರೀರಕ್ಷಾ ಗೂಳಪ್ಪ ಬಡಿಗೇರ(619) ಮಾತನಾಡಿದಳು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅವಕಾಶ ಸಿಕ್ಕಾಗ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 97.23 ಅ ಫಲಿತಾಂಶದೊಂದಿಗೆ ಧಾರವಾಡ ಗ್ರಾಮೀಣ ತಾಲೂಕು ಉತ್ತಮ ಸಾಧನೆ ಮಾಡಿದೆ. ಈ ನಿಮಿತ್ತ ಧಾರವಾಡ ಗ್ರಾಮೀಣ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ ಅವರಿಗೆ ತಾಲೂಕಿನ ಎಲ್ಲರ ಪರವಾಗಿ ಸನ್ಮಾನಿಸಲಾಯಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 