ಧಾರವಾಡ ಆಕಾಶವಾಣಿ ಮುಖ್ಯಸ್ಥ ಶರಣಬಸವ ಚೋಳಿನ ಸೇವಾ ನಿವೃತ್ತಿ
Dharwad All India Radio Chief Sharanabasava Chola retires from service
ಲೋಕದರ್ಶನ ವರದಿ
ಧಾರವಾಡ, ಮಾ. 28: ಆಕಾಶವಾಣಿ ಧಾರವಾಡ ಕೇಂದ್ರದ, ಸಹಾಯಕ ನಿರ್ದೇಶಕ ಹಾಗೂ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ, ಭಾರತೀಯ ಪ್ರಸಾರ ಸೇವೆ (ಐ.ಬಿ.ಪಿ.ಎಸ್.) ಹಿರಿಯ ಅಧಿಕಾರಿ, ಶರಣಬಸವ ಚೋಳಿನ ಅವರು, 35 ವರ್ಷಗಳ ಸುಧೀರ್ಘ ಸೇವೆಯ ಬಳಿಕ, ಈ ತಿಂಗಳ 31 ರಂದು, ಸೇವಾ ನಿವೃತ್ತಿ ಹೊಂದಲಿದ್ದಾರೆ.
ಕ್ರಿಯಾಶೀಲ ಕಾರ್ಯಕ್ರಮ ಅಧಿಕಾರಿಯಾಗಿ, ಸೃಜನಶೀಲ ಸಹಾಯಕ ನಿರ್ದೇಶಕರಾಗಿ, ಸೇವಾ ನಿವೃತ್ತರಾಗಲಿರುವ, ಶರಣಬಸವ ಚೋಳಿನ ಅವರಿಗೆ, ಆಕಾಶವಾಣಿ ಧಾರವಾಡ ಕೇಂದ್ರದ, ಕಾರ್ಯಕ್ರಮ ವಿಭಾಗ, ತಾಂತ್ರಿಕ ವಿಭಾಗ ಹಾಗೂ ಆಡಳಿತ ವರ್ಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದಾರೆ.
ಸೋಮವಾರ, ದಿನಾಂಕ 30 ರಂದು, ಬೆಳಗ್ಗೆ 11 ಗಂಟೆಗೆ, ಆಕಾಶವಾಣಿ ಧಾರವಾಡ ಕೇಂದ್ರದ ಆವರಣದಲ್ಲಿ, ಮನಗುಂಡಿಯ ಗುರು ಬಸವ ಮಹಾಮನೆಯ, ಬಸವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ, ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ, ಉಪ ಕುಲಪತಿ, ಪ್ರೊಫೆಸರ್ ಪಿ.ಎಲ್.ಪಾಟೀಲ ಶುಭಾಶಂಸನೆ ನೆರವೇರಿಸಲಿದ್ದಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಉಪ ಕುಲಪತಿ, ಎ.ಎಂ. ಖಾನ್ ಹಾಗೂ ತಾಂತ್ರಿಕ ವಿಭಾಗದ ಉಪ ಮಹಾನಿರ್ದೇಶಕ ಅರುಣ ಪ್ರಭಾಕರ, ಅತಿಥಿಯಾಗಿ ಪಾಲ್ಗೊಳ್ಳುವರು. ವಿಶೇಷ ಆಹ್ವಾನಿತ ಗಣ್ಯರು, ಆಕಾಶವಾಣಿಯ ಕೇಳುಗರು ಭಾಗವಹಿಸಲಿದ್ದು, ಮಾಧ್ಯಮ ಮಿತ್ರರಿಗೂ, ಆತ್ಮೀಯ ಆಮಂತ್ರಣವಿದೆ.
ಏಪ್ರಿಲ್ 1, ಬುಧವಾರ, ಆಕಾಶವಾಣಿ ಧಾರವಾಡ ಕೇಂದ್ರದ, ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾಗಿ, ಹಿರಿಯ ಕಾರ್ಯಕ್ರಮ ನಿರ್ವಾಹಕಿ, ಮಂಜುಳಾ ಪುರಾಣಿಕ ಅವರು, ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 