ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳು ಪ್ರದರ್ಶನ

ಲೋಕದರ್ಶನವರದಿ

ಧಾರವಾಡ: ನಗರದ ಎಸ್.ಡಿ.ಎಂ. ಇಂಜನೀಯರಿಂಗ್ ಕಾಲೇಜಿನಲ್ಲಿ ಅ.18 ರಿಂದ ಅ.25ರವರೆಗೆ ದಿನಗಳ ಕಾಲ ಹಮ್ಮಿಕೊಂಡಿರುವ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗೆ ಶುಕ್ರವಾರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್. ಬಿ. ವಣಕುದುರೆಯವರು ಚಾಲನೆ ನೀಡಿದರು. 

         ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಪೈಪೋಟಿ ದರಗಳಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆ ಒದಗಿಸುತ್ತಿದ್ದು, ಸಿರಿ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ ಎಂದರು. ಗ್ರಾಮೀಣ ಮಹಿಳೆಯರ ಸಬಲೀಕರಣ ಹಾಗೂ ನೇರ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುವುದೇ ಸಿರಿ ಸಂಸ್ಥೆಯ ಗುರಿ ಹಾಗೂ ಉದ್ದೇಶವಾಗಿದೆ.

       ಈ ಮೇಳದ ಸದುಪಯೋಗವನ್ನು ವಿದ್ಯಾಥರ್ಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದವರು, ಸಾರ್ವಜನಿಕರು ಮಾಡಿಕೊಳ್ಳಬೇಕಾಗಿ ಪ್ರಾಂಶುಪಾಲರು ಕರೆಯಿತ್ತರು ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲಾ ಉತ್ಪನ್ನಗಳ ಮೇಲೆ ವಿಶೇಷ ರಿಯಾಯತಿ ಹಾಗೂ ದರ ಕಡಿತ ಮಾರಾಟವಿರುತ್ತದೆ ಎಂದು ಸಿರಿ ಸಂಸ್ಥೆ ಪ್ರಕಟಿಸಿದೆ ಎಂದು ತಿಳಿಸಿದರು. 

     ಕಾರ್ಯಕ್ರಮದಲ್ಲಿ  ಎಸ್.ಡಿ.ಎಂ.ಇಂಜನೀಯರಿಂಗ್ ಕಾಲೇಜಿನ ಡೀನ್ಸಗಳಾದ ಡಾ. ಕೆ. ಗೋಪಿನಾಥ, ಪ್ರೊ. ಎ. ವಿ. ಕುಲಕಣರ್ಿ, ಪ್ರೊ. ಚೆಲಿ,್ಲ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇಂಜನೀಯರಿಂಗ್ ಕಾಲೇಜಿನ ಗಂಗಾಧರ್ ರಾವ್ ಮಾತನಾಡಿ ಸ್ವಾಗತಿಸಿದರು. ಯುವರಾಜ ಜೈನ್ ವಂದಿಸಿದರು.