ಧರ್ಮಸ್ಥಳ ಸಂಘದ ಟ್ಯೂಷನ್ ಸಮಾರೋಪ ಕಾರ್ಯಕ್ರಮ

 ಧರ್ಮಸ್ಥಳ ಸಂಘದ ಟ್ಯೂಷನ್ ಸಮಾರೋಪ ಕಾರ್ಯಕ್ರಮ Dharmasthala Sangha tuition closing ceremony

ಲೋಕದರ್ಶನ ವರದಿ 

 ಧರ್ಮಸ್ಥಳ ಸಂಘದ ಟ್ಯೂಷನ್ ಸಮಾರೋಪ ಕಾರ್ಯಕ್ರಮ 

ನೇಸರಗಿ 03:  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್‌ ಮಹಿಳಾ ಜ್ಞಾನವಿಕಾಸ  ಕಾರ್ಯಕ್ರಮದಡಿಯಲ್ಲಿ ಸರಕಾರಿ ಪ್ರೌಢಶಾಲೆ ಹಣಬರಹಟ್ಟಿ ಶಾಲೆಯ ಸಂಯೋಗದೊಂದಿಗೆ  ಮೂರು ತಿಂಗಳ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಲೆಯ ಮುಖ್ಯ ಗುರುಗಳಾದ  ಗಾಯಿತ್ರಿ ಪತ್ತಾರ ಮುಖ್ಯ ಅತಿಥಿಗಳಾಗಿ ಖಖಐಅ ನೋಡಲ್ ಅಧಿಕಾರಿಯಾಗಿ ಅಕ್ಷರದಾಸೋಹ ನಿರ್ದೇಶಕರಾದಒ.ಖ.ಕೂಡುವಕ್ಕಲಿಗ , ಜ್ಞಾನ ವಿಕಾಸ ಸಮನ್ವೇದಿಕಾರಿ ಶೈಲಾ ಜೆ, ಎಸ್ ಡಿ ಎಮ್ ಸಿ  ಅಧ್ಯಕ್ಷರಾದ  ರಮೇಶ್ ಬಿರಗಡ್ಡಿ,, ಸದಸ್ಯರಾದ ಬಾಳೇಶ ಒಡೆಯರ್ , ಸಂತೋಷ ಉಳವಿ, ಸೇವಾ ಪ್ರತಿನಿಧಿ ಗೀತಾ ಬನ್ನೂರು . ಶಿಲ್ಪಾ ಬಿಲ್, ಸವಿತಾ ಆಕೊಳ್ಳಿ,ಗ್ರಾಮ ಪಂಚಾಯತಿಯ   ಪ್ರಕಾಶ್ ಉಳವಿ ಮತ್ತು ಶಿಕ್ಷಕರಾದ ಬಿ ಟಿ.ನಾಯಕ, ಎಸ್‌.ಹೊಸಮನಿ ವಿ.ಬಿ.ಕೋಲಕಾರ,ಬಿ ಎಫ್‌.ಶಿವನಾಯ್ಕರ, ಇವರ ಸಮ್ಮುಖದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ *ಸಮಾರೋಪ ಸಮಾರಂಭ ಉದ್ಘಾಟನೆ ನೆರವೇರಿಸಿದರು.  

    ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ  ಶೈಲಾ ಜೆ  ಮಾತನಾಡಿ  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಪ್ರಾರಂಭವಾದ ಉಚಿತ ಟ್ಯೂಷನ್ ಕ್ಲಾಸಿನ ಸದುಪಯೋಗ ಸರಕಾರಿ ಶಾಲೆಗಳಿಗೆ ನೀಡುತ್ತಿರುವ ಉದ್ದೇಶ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅತಿ ಹೆಚ್ಚು  ಅಂಕಗಳ ಪಡೆದುಕೊಳ್ಳುವಲ್ಲಿ ಸಹಕಾರವಾಗುವುದು ಮತ್ತು ದುಡ್ಡು ಕೊಟ್ಟು ಹೊರಗಡೆ ಕ್ಲಾಸ್ ಹೇಳಿಸಿಕೊಳ್ಳಲು ಕಷ್ಟಕರವಾದ ಜೀವನ ನಡೆಸುತ್ತಿರುವದರಿದಾ ಅನುಕೂಲವಾಗಿರುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಾಯಕ ಅಕ್ಷರ ದಾಸೋಹ ನಿರ್ದೇಶಕಿ ಮತ್ತು ಎಸ್ ಎಲ್ ಸಿ ನೂಡಲ್ ಅಧಿಕಾರಿಗಳಾದ  ಎಮ್ ಎಸ್  ಕೂಡುವಕ್ಕಲಿಗ ಇವರು ಮಾತನಾಡಿ  ಕ್ಷೇತ್ರದಿಂದ  ನೀಡುವ ಎಷ್ಟೋ ಕೆಲಸ ಕಾರ್ಯಗಳು ಪರಮಪೂಜ್ಯದಂಪತಿಗಳು ನೀಡುವ ಈ ಸೌಲಭ್ಯವು ವಿದ್ಯಾರ್ಥಿ ಜೀವನಕ್ಕೆ ಅತಿ ಅಮೂಲ್ಯವಾದದ್ದು ಮತ್ತು ಧರ್ಮಸ್ಥಳ ಸಂಸ್ಥೆಯಿಂದ 10 ಹಲವಾರು ಕಾರ್ಯಕ್ರಮಗಳನ್ನ ಗ್ರಾಮೀಣ ಪ್ರದೇಶದಲ್ಲಿ ಒದಗಿಸುವ ಉದ್ದೇಶ ಬಡಪೀಡಿತ ಪ್ರದೇಶಗಳು ಅಭಿವೃದ್ಧಿಪಡಿಸಲು ಈ ಸಂಸ್ಥೆ ಮುಂದಾಗಿರುತ್ತದೆ  ಎಂದು ಶುಭ ಹಾರೈಸಿದರು ಕಾರ್ಯಕ್ರಮದ ನಿರೂಪಣೆ   ರವೀಂದ್ರ ಗೋಕಾಕ ಸ್ವಾಗತವನ್ನು ಡಿ.ಬಿ.ಅತ್ತಾರ. ನೆರವೇರಿಸಿದರು.ಈ ಸಂದರ್ಭ ಮುದ್ದು ವಿದ್ಯಾರ್ಥಿಗಳು  ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.