ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳಿಗೆ ಮರುಜೀವ: ಸತೀಶ್ ನಾಯ್ಕ
Dharmasthala Rural Development Project will revive lakes: Satish Naik
ಲೋಕದರ್ಶನ ವರದಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳಿಗೆ ಮರುಜೀವ: ಸತೀಶ್ ನಾಯ್ಕ
ಬೆಳಗಾವಿ 03: ಕೆರೆಗಳು ಗ್ರಾಮೀಣ ಜನತೆಯ ಜೀವನಾಡಿಯಾಗಿವೆ. ಅವರ ಆಶಯದಂತೆ ಅವುಗಳನ್ನು ಪುನಶ್ಚೇತನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೇಸಿಗೆ ಸಮಯದಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿಯು ಪ್ರತಿ ದಿನ ಹಳ್ಳಿ ಮತ್ತು ಪಟ್ಟಣ ಪ್ರದೇಶ ಗಳಲ್ಲಿ ಕಂಡುಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೆರೆಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ ಅವರು ಹೇಳಿದರು.
ತಾಲೂಕಿನ ಬಾಳೆಕುಂದ್ರಿ ಕೆ. ಎಚ್ ಗ್ರಾಮದ ಕೆರೆ ಅಭಿವೃದ್ಧಿ ಸಮಿತಿ ಮಾವಿನಕಟ್ಟಿ ಹಾಗೂ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರ್ಥಿಕ ಸಹಕಾರದೊಂದಿಗೆ "ನಮ್ಮೂರು ನಮ್ಮ ಕೆರೆ" ಯೋಜನೆಯಡಿಲ್ಲಿ ಸರ್ಕಾರಿ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹಗ್ಗೆಡೆಯವರು ನಮ್ಮೂರು ನಮ್ಮ ಕೆರೆ ಎಂಬ ಕಾರ್ಯಕ್ರಮದ ಮೂಲಕ 2016 ರಿಂದ ಕೆರೆಗಳನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯಾದ್ಯಂತ 930 ಕೆರೆಗಳನ್ನು ಹೂಳೆತ್ತಲಾಗಿದೆ.
ಬೆಳಗಾವಿ ಜಿಲ್ಲಾದ್ಯಂತ 90 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಮಾವಿನಕಟ್ಟಿ ಸರ್ಕಾರಿ ಕೆರೆಯನ್ನು ಹೂಳೆತ್ತಲು ಗ್ರಾಮಸ್ಥರ ಸಹಕಾರ ತುಂಬಾ ಅತ್ಯವಶ್ಯಕವಾಗಿದ್ದು, ರೈತರು ಟ್ರಾಕ್ಟರ್ ಮೂಲಕ ಕೆರೆಯ ಫಲವತ್ತಾದ ಮಣ್ಣನ್ನು ತಮ್ಮ ಜಮೀನಿಗೆ ಹಾಕಿಸಿಕೊಳ್ಳಲು ತಿಳಿಸಿದರು. ಯೋಜನೆಯ ಮೂಲಕ ಕೆರೆಯ ಹೂಳೆತ್ತಿ,ತಂತಿ ಬೇಲಿ ಹಾಕಿಕೊಡಲಾಗುವುದು ಎಂದು ಹೇಳಿದರು. ಬಾಳೆಕುಂದ್ರಿ ಕೆ.ಎಚ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಮಾಲಾ ಎ.ಪಿ ಅವರು ಮಾತನಾಡಿ, ಪಂಚಾಯಿತಿ ಮೂಲಕ ಕೆರೆಗೆ ಕಲ್ಲು ಪಿಚ್ಚಿಂಗ್ ಮಾಡಲಾಗುವುದು.ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೈ ತೊಳೆಯಲು ಸಹಾಯವಾಗಲಿದೆ.
ಮುಂದಿನ ದಿನಗಳಲ್ಲಿ ಮೀನು ಸಾಕಾಣಿಕೆ ಮಾಡಿಸಲಾಗುವುದು ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಂಕರ್ಪ ಮಲ್ಲಣ್ಣವರು ವಹಿಸಿದ್ದರು. ಗ್ರಾಮದ ಗಣ್ಯರಾದ ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ, ಈರಯ್ಯ ಹಿರೇಮಠ, ಧಾರವಾಡ ಪ್ರಾದೇಶಿಕ ಕಚೇರಿಯ ಅಭಿಯಂತರರಾದ ನಿಂಗರಾಜ ಮಾಳವಾಡ, ಯೋಜನಾಧಿಕಾರಿಯವರಾದ ಸುಭಾಷ್ ಪಿ.ಸಿ, ಒಕ್ಕೂಟ ಅಧ್ಯಕ್ಷರಾದ ಮಂಜುಳಾ ಅರಗಂಜಿ ಮತ್ತು ಗ್ರಾಮದ ಹಿರಿಯರಾದ ಬಸವಾಣಿ ಮಲ್ಲಣ್ಣವರ,ಬಾಬು ಕಲಗೌಡ ಪಾಟೀಲ್, ಕಲ್ಲಪ್ಪ ಅರಗಂಜಿ,ಆರ್, ಎಲ್,ಚಿಕ್ಕಮಠ, ಕೃಷಿ ಮೇಲ್ವಿಚಾರಕ ಮಂಜುನಾಥ ಗೌಡ, ಮೇಲ್ವಿಚಾರಕ ಗಣೇಶ, ಸೇವಾ ಪ್ರತಿನಿಧಿ ಲೀಲಾವತಿ, ಸಂಘದ ಸದಸ್ಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 