ಬಾಗಲಕೋಟೆ: ಘಟಪ್ರಭಾ ನದಿಯ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿಮರ್ಿಸಿಕೊಡುವಲ್ಲಿ ತಾರತಮ್ಯ ಮಾಡಲಾಗಿದ್ದು, ಅನ್ಯಾಯವಾದ ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡಿಸಬೇಕು ಎಂದು ಆಗ್ರಹಿಸಿ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದ ಗ್ರಾಮಸ್ಥರು ಮುಖಂಡ ಕಲ್ಲಪ್ಪ ಕಡಬಲ್ಲನವರ ನೇತೃತ್ವದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಕಛೇರಿ ಎದುರು ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಢವಳೇಶ್ವರ ಗ್ರಾಮದ ಸಂತ್ರಸ್ತ ಮುಖಂಡರಾದ ಕಲ್ಲಪ್ಪ ಕಡಬಲ್ಲನವರ ಮಾತನಾಡಿ, 2009ರಲ್ಲಿ ಉಂಟಾದ ಪ್ರವಾಹ ಸಂದರ್ಭ ಮತ್ತು ಇತ್ತೀಚಿಗಿನ ಪ್ರವಾಹ ಸಂದರ್ಭಗಳಲ್ಲಿಯೂ ಢವಳೇಶ್ವರ ಗ್ರಾಮದಲ್ಲಿನ ಬಡವರಿಗೆ ಅನ್ಯಾಯವಾಗಿದೆ. ಇತ್ತೀಚಿಗೆ ಘಟಪ್ರಭಾ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಇಡೀ ಗ್ರಾಮ ಸಂಪೂರ್ಣ ಮುಳುಗಿ ಹೋಗಿತ್ತು. ಹೀಗಾಗಿ ಸಾಕಷ್ಟು ಮನೆಗಳು ಬಿದ್ದು ಜನರ ಬದುಕು ಬೀದಿಗೆ ಬಂದಿತ್ತು. ಈ ಮಧ್ಯೆ ಸಕರ್ಾರ ತಕ್ಷಣ ಪರಿಹಾರ ನೀಡಿ ಮನೆಗಳ ಸವರ್ೇ ವೇಳೆ ಅಧಿಕಾರಿಗಳು ತಮಗಿಷ್ಟ ಬಂದತೆ ಮಾಡಿದ್ದಾರೆ, ಬೇಕಿದ್ದವರಿಗೆ ಎ ಗ್ರೇಡ್ ನೀಡಿ ಇತ್ತ ಮನೆ ಬಿದ್ದರೂ ಸಹ ಸಿ ಗ್ರೇಡ್ ನೀಡುವ ಮೂಲಕ ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ. ಒಂದೇ ಕುಟುಂಬದವರಿಗೆ 4 ಮನೆ ಮಂಜೂರು ಮಾಡಿದ್ದಾರೆ. ಅದರಲ್ಲೂ ಹಿಂದುಳಿದ, ದಲಿತ ವರ್ಗದವರಿಗೆ ನ್ಯಾಯ ಸಿಕ್ಕಿಲ್ಲ. ಅನರ್ಹರಿಗೆ ಮನೆಗಳು ದೊರಕಿವೆ. ಅಧಿಕಾರಿಗಳು ಹಾಗೂ ಸ್ಥಳೀಯ ಪಟ್ಟಬದ್ಧ ಹಿತಾಸಕ್ತಿಗಳು ಬಡ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವುದರ ಜೊತೆಗೆ ಅವರ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರವಾಹದಿಂದ ದುಃಖಕ್ಕೆ ಒಳಗಾಗಿ, ಇರಲು ಮನೆಯಿಲ್ಲ, ಉದ್ಯೋಗವಿಲ್ಲ, ತಿನ್ನಲು ಅನ್ನ ಇಲ್ಲ ಇಂತಹ ಪರಸ್ಥಿತಿಯಲ್ಲಿ ಬಡವರು ಒದ್ದಾಡಿ ಸಾಯುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದು ಸರಕಾರ ಕಣ್ಣು ತೆರೆದಿಲ್ಲ. ಕಾರಣ ನಾವು ಸತ್ತರೂ ಪರವಾಗಿಲ್ಲ. ಎಲ್ಲ ಫಲಾನುಭವಿಗಳ ಸಮಸ್ಯೆ ಇತ್ಯರ್ಥವಾಗಬೇಕು. ಈ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಪರಿಹಾರ ಧನ ಕೊಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಢವಳೇಶ್ವರ ಗ್ರಾಮದ ನೆರೆ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆಯಲ್ಲಿ ಅನ್ಯಾಯವಾಗಿರುವುದು ನಿಜ. ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಹಾರ ಇಲ್ಲದೆ ಅನ್ಯಾಯವಾಗಿದೆ. ಈ ಕುರಿತು ಸಮಗ್ರ ತನಿಖೆಂ ಜೊತೆಗೆ ಆಗಿರುವ ಲೋಪ ಸರಿಪಡಿಸಲು ಒತ್ತಾಯಿಸಿ ಇಂದಿನಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದೇವೆ. ನಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.
ಶಿವಯ್ಯ ಹಿರೇಮಠ, ಕಲಂಧರ ನಧಾಪ, ರಮೇಶ ಮರಾಠಿ, ಮಲ್ಲಪ್ಪ ಪಟೇದ, ಚಂದ್ರವ್ವ ಕಡಬಲ್ಲನವರ, ಬಸಪ್ಪ ಪಾಟೀಲ, ಮಾಲವ್ವ ವಡರಟ್ಟಿ, ಚಂದ್ರವ್ವ ತಳವಾರ, ಸುಲವ್ವ ಮಾಂಗ, ಸಂಗೀತಾ ಮಾಂಗ, ಗಂಗವ್ವ ವಡರಟ್ಟಿ ಸೇರಿದಂತೆ 30ಕ್ಕೂ ಅಧಿಕ ಫಲಾನುಭವಿಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.