ಘಟಪ್ರಭಾದ ಭಕ್ತರು ಎಲ್ಲರಿಗೂ ಮಾದರಿ ಆಗಿದ್ದಾರೆ : ಶಿವಕುಮಾರ ಶ್ರೀಗಳು
Devotees of Ghataprabha are a role model for everyone: Shivakumar Swamiji
ಘಟಪ್ರಭಾ 13 : ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಹುಟ್ಟು ಹಬ್ಬವನ್ನು ವಿಶಿಷ್ಟವಾದ ರೀತಿಯಲ್ಲಿ ರಕ್ತ ದಾನ, ಅನಾಥ ಮಕ್ಕಳಿಗೆ ಅನ್ನ ಬಟ್ಟೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು. ವಿವಿಧ ಆಸ್ಪತ್ರೆಗಳ ರೋಗಿಗಳ ಹಣ್ಣು ಹಂಪಲು ವಿತರಣೆ, ಉಚಿತ ಆರೋಗ್ಯ ತಪಾಸಣೆ ಯಂತಹ ಕಾರ್ಯಕ್ರಮಗಳ ಜೊತೆಗೆ ಆಚರಿಸುವ ಮೂಲಕ ಎಲ್ಲಾ ಮಠ ಮಾನ್ಯ ಗಳಿಗೆ ಮತ್ತು ಸಮಾಜಕ್ಕೆ ಘಟಪ್ರಭಾದ ಕೆಂಪಯ್ಯಾ ಸ್ವಾಮಿ ಮಠದ ಭಕ್ತರು ಮಾದರಿ ಎನಿಸಿದ್ಧಾರೆ ಎಂದು ಖ್ಯಾತ ಪ್ರವಚನಕಾರರಾದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಬಳೂಟಗಿ ಹೇಳಿದರು.
ಅವರು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಹುಟ್ಟು ಹಬ್ಬದ ಆಚರಣೆ ಕುರಿತು ಶನಿವಾರ ದಿನಾಂಕ 11-07-2026 ರಂದು ಮಠದಲ್ಲಿ ನಡೆದ ಪೂರ್ವ ಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಗಣೇಶ್ ಗಾಣಿಗ ಸ್ವಾಗತಿಸಿ ಪೂರ್ವಭಾವಿ ಸಭೆಯ ಸಿದ್ಧತೆಯ ರೂಪವೇಷಗಳ ಬಗ್ಗೆ ವಿವರಿಸಿದರು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಮಾತನಾಡಿ ಧಾರ್ಮಿಕ ಕಾರ್ಯಗಳ ಜೊತೆಗೆ ಸಾರ್ವಜನಿಕ ಮತ್ತು ಸಾಮಾಜಿಕ ಕಾರ್ಯ ಗಳನ್ನು ಕೈಗೊಳ್ಳುವ ಮೂಲಕ ಭಕ್ತ ಸಮೂಹ ಆದರ್ಶ ವೆನಿಸಿದೆ ಎಂದರು.
ಕನ್ನಡ ರಕ್ಷಣೆ ವೇದಿಕೆ ರಾಜ್ಯಾಧ್ಯಕ್ಷ ಡಾ, ಕೆಂಪಣ್ಣ ಚೌಕಶಿ ಮಾತನಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಬಿಸಿಲು ಮಳೆಗೆ ಅನುಕೂಲವಾಗುವ ದೃಷ್ಟಿಯಿಂದ ಅವರಿಗೆ ಛತ್ರಿಗಳನ್ನ ವಿತರಿಸುವ ಕಾರ್ಯ ಹಾಗೂ ಪ್ರಗತಿಪರ ರೈತರಿಗೆ ಅವರ ಸಾಧನೆಗೆ ಮೆಚ್ಚಿ ಅವರಿಗೆ ಗೌರವ ಪುರಸ್ಕಾರ ನೀಡಿ ಅವರಿಗೆ ಗೌರವಿಸುವ ಕಾರ್ಯ ಮಾಡಿಕೊಡುವ ಭಕ್ತ ಸಮೂಹದಿಂದ ಆಗಲಿ ಎಂದರು. ಧರೆಪ್ಪಾ ಮಗದುಮ್ ಮಾತನಾಡಿ ಸುತ್ತ ಹತ್ತು ಹಳ್ಳಿ ಗಳಿಂದ ಭಕ್ತರು ಬಂದು ಎಲಾ ಕಾರ್ಯಕ್ಕೆ ಸಹಕಾರ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ರವಿ ಹುದಲಿ, ಮಾಂತೇಶ ಗಾಳಿ, ಮಾರುತಿ ಕಾ ಹುಕ್ಕೇರಿ, ಮಂಜು ಮಟಗಾರ್, ಗಂಗಾಧರ್ ಬಡಕುಂದ್ರಿ, ಅಪ್ಪಾ ಸಾಬ್ ಮುಲ್ಲಾ, ಕಲ್ಲಪ್ಪ ಕೊಂಕಣಿ, ಮಾರುತಿ ದು ಹುಕ್ಕೇರಿ, ಕಲ್ಲಪ್ಪ ಕಾಡದವರ, ತಮ್ಮಣ್ಣಾ ಅರಭಾಂವಿ,ನವೀನ್ ತುಕ್ಕಾನಟ್ಟಿ, ಅಜಿತ ಗುಡಶಿ, ಮಲ್ಲಪ್ಪ ಕಮತ, ಗೋಪಾಲ ಕುಕುನೂರ, ಯಲ್ಲಪ್ಪ ಅಟ್ಟಿಮಿಟ್ಟಿ, ಹಾಗೂ ಮಲ್ಲಾಪುರ್ ಪಿಜಿ ಘಟಪ್ರಭಾ. ಧುಪದಾಳ ಸಾವಳಗಿ,ನಂದಗಾವ್, ಸಿಂಧಿಕುರಬೇಟ, ಪಾಮಲದಿನ್ನಿ, ಬಡಿಗವಾಡ ಸೇರಿದಂತೆ ಮಠದ ಅಪಾರ ಸದ್ಭಕ್ತರು ಭಾಗವಹಿಸಿದರು.
ಆಗಸ್ಟ್ 6ರ ವಿಧಾನಸಭೆ ಅಧಿವೇಶನಕ್ಕೂ ಮುನ್ನ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ. ಶಿವಕುಮಾರ್
ರಾಜಸ್ಥಾನದ ಬಾಲೋತ್ರಾ-ಜೋಧ್ಪುರ ಹೆದ್ದಾರಿಯಲ್ಲಿ ಎಸ್ಯುವಿ-ಡಂಪರ್ ಡಿಕ್ಕಿ: ಐವರು ಸಾವು, ಮೂವರಿಗೆ ಗಾಯ
ಬಕ್ಕಖಾಲಿ ಕರಾವಳಿಯಲ್ಲಿ ಮುಳುಗಿದ್ದ ಮೀನುಗಾರಿಕಾ ದೋಣಿಯಲ್ಲಿ 9 ಮೀನುಗಾರರ ಶವ ಪತ್ತೆ; 6 ಮಂದಿಗಾಗಿ ಶೋಧ ಮುಂದುವರಿಕೆ
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ 