ಆಷಾಢ ಮಾಸದ ಪವಿತ್ರ ಮಣ್ಣೇತ್ತಿನ ಅಮಾವಾಸ್ಯಯ ಸಾಂಪ್ರದಾಯಿಕ ಆಚರಣೆ
The traditional observance of the sacred Mannettina Amavasya during the month of Ashadha
ಲೋಕದರ್ಶನ ವರದಿ
ಗದಗ 13: ಧಾರ್ಮಿಕವಾಗಿ ಆಷಾಢ ಮಾಸದಲ್ಲಿ ಅಮಾವಾಸ್ಯೆಯನ್ನು ಕರ್ನಾಟಕದಲ್ಲಿ 'ಮಣ್ಣೆತ್ತಿನ ಅಮಾವಾಸ್ಯೆ' ಎಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಕೃಷಿ ಸಂಸ್ಕೃತಿಯಲ್ಲಿ ಎತ್ತುಗಳಿಗೆ ಅಗ್ರಸ್ಥಾನವಿದ್ದು, ಜೂನ್ ಜುಲೈ ನಲ್ಲಿ ಪ್ರಾರಂಭವಾಗುವ ಮಳೆಗಾಲದ ಆರಂಭದಲ್ಲಿ ಭೂಮಿಯನ್ನು ಹದಗೊಳಿಸಲು ಎತ್ತುಗಳೇ ಆಧಾರ.ಜೀವನಾಡಿಯಾಗಿರುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಕೃಷಿ ಚಟುವಟಿಕೆಗಳು ನಿರ್ವಿಘ್ನವಾಗಿ ನಡೆಯಲು ಪ್ರಾರ್ಥಿಸುವುದೇ ಈ ಸಂಪ್ರದಾಯಿಕ ಹಬ್ಬದ ಮುಖ್ಯ ಉದ್ದೇಶವಾಗಿದೆ.
ಆಷಾಢ ಅಮಾವಾಸ್ಯಯ ಧಾರ್ಮಿಕ ಹಿನ್ನೆಲೆ ಮತ್ತು ಮಹತ್ವ : ಇಂದಿನ ದಿನದ ವಿಶೇಷ ಪೂಜೆಯಲ್ಲಿ ಮಣ್ಣಿನಿಂದ ತಯಾರಿಸಲಾದ ಜೋಡೇತ್ತು (ಮಣ್ಣೆತ್ತು)ಗಳನ್ನು ಮನೆಗೆ ತಂದು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಮಣ್ಣು ಸಕಲ ಜೀವಸಂಕುಲದ ಮೂಲ ಹಾಗೂ ಪವಿತ್ರವಾದದ್ದು ಎಂದು ಪರಿಗಣಿಸಲಾಗುತ್ತದೆ.
ಆಷಾಢ ಅಮಾವಾಸ್ಯೆಯ ಪಿತೃ ಕಾರ್ಯ: ಪೂರ್ವಜರ (ಪಿತೃಗಳ) ಆರಾಧನೆಗೆ ಸರ್ವ ಶ್ರೇಷ್ಠವಾದ ಆಷಾಢ ಅಮಾವಾಸ್ಯಯ ದಿನದಂದು ಪಿತೃಗಳಿಗೆ ತರ್ಣ ನೀಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಕುಟುಂಬದಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ.
ಮುತ್ತೈದೆಯರಿಗೆ ಭೀಮನ ಅಮಾವಾಸ್ಯೆ : ಕರ್ನಾಟಕದ ಕೆಲವು ಭಾಗಗಳಲ್ಲಿ ಇದೇ ದಿನವನ್ನು 'ಭೀಮನ ಅಮಾವಾಸ್ಯೆ' ಎಂದೂ ಕರೆಯುತ್ತಾರೆ. ಈ ದಿನ ಮುತ್ತೈದೆಯರು ಹಾಗೂ ಕನ್ಯೆಯರು ತಮ್ಮ ಪತಿಯ ಮತ್ತು ಕುಟುಂಬದ ಒಳಿತಿಗಾಗಿ ವಿಶೇಷ ಪೂಜೆಗಳನ್ನು ಮಾಡುವ ಸಂಪ್ರದಾಯವಿದೆ.
ರೈತರ ವಿಶಿಷ್ಟ ನಂಬಿಕೆಯ ಮಣ್ಣೆತ್ತಿನ ಅಮಾವಾಸ್ಯ : ರೈತರು ಎತ್ತುಗಳನ್ನು ಎಷ್ಟರ ಮಟ್ಟಿಗೆ ನಂಬಿರುವರೆ0ದರೆ ಕಾರಹುಣ್ಣಿಮೆಯ ಕರಿ ಹರಿದು ನಂತರ ಮನೆಗೆ ತರುವಾಗ ಮನೆಯ ಬಾಗಿಲಲ್ಲಿ ತಾವು ಆ ವರ್ಷ ತಮ್ಮ ಹೊಲಗಳಿಗೆ ಯಾವ ಬೆಳೆ ಬಿತ್ತಬೇಕು ಎಂದು ನಿರ್ಧರಿಸವರೋ ಆ ಎಲ್ಲ ಧಾನ್ಯಗಳನ್ನು ಮನೆಯ ಎತ್ತು ಹಾದು ಹೋಗುವ ಬಾಗಿಲಲ್ಲಿ ಇಡುತ್ತಾರೆ ಆಗ ಎತ್ತು ತನ್ನ ಕಾಲಿನಿಂದ ಯಾವ ಧಾನ್ಯವಿದ್ದ ಸೇರನ್ನು ತಳ್ಳಿ ಮುಂದೆ ಸಾಗುತ್ತದೆಯೋ ಆ ಧಾನ್ಯದ ಬೆಳೆಯನ್ನು ಆ ವರ್ಷ ತಮ್ಮ ಹೊಲಕ್ಕೆ ಹಾಕುವ ಮಟ್ಟಿಗೆ ಎತ್ತುಗಳ ಮೇಲೆ ಭಕ್ತಿಯನ್ನು ಹೊಂದಿರುವರು.
ಆಗಸ್ಟ್ 6ರ ವಿಧಾನಸಭೆ ಅಧಿವೇಶನಕ್ಕೂ ಮುನ್ನ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ. ಶಿವಕುಮಾರ್
ರಾಜಸ್ಥಾನದ ಬಾಲೋತ್ರಾ-ಜೋಧ್ಪುರ ಹೆದ್ದಾರಿಯಲ್ಲಿ ಎಸ್ಯುವಿ-ಡಂಪರ್ ಡಿಕ್ಕಿ: ಐವರು ಸಾವು, ಮೂವರಿಗೆ ಗಾಯ
ಬಕ್ಕಖಾಲಿ ಕರಾವಳಿಯಲ್ಲಿ ಮುಳುಗಿದ್ದ ಮೀನುಗಾರಿಕಾ ದೋಣಿಯಲ್ಲಿ 9 ಮೀನುಗಾರರ ಶವ ಪತ್ತೆ; 6 ಮಂದಿಗಾಗಿ ಶೋಧ ಮುಂದುವರಿಕೆ
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ 