ದೇವಿಯ ಪುರಾಣ ಕಾರ್ಯಕ್ರಮ: ಕೃಷ್ಣೆಗೌಡ ಪಾಟೀಲರಿಗೆ ಸನ್ಮಾನ
Deviya Purana program: Tribute to Krishnagouda Patil
ಗದಗ 23: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿನ 30 ನೇ ವಾರ್ಡಿನಲ್ಲಿ ನವರಾತ್ರಿ ಹಬ್ಬದ ವಿಜಯದಶಮಿ ದಸರಾ ಹಬ್ಬದ ನವರಾತ್ರಿ ಆಚರಣೆಯ ಪ್ರಯುಕ್ತ 9 ದಿನಗಳ ಕಾಲ ತಾಯಿ ಬನಶಂಕರಿ ದೇವಿಯ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಒಂದು ಧಾರ್ಮಿಕ ಆಚರಣೆಯ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣೇಗೌಡ ಪಾಟೀಲ್ ಅವರು ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ ಸಮಸ್ತ ನಾಗರಿಕರಿಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿ ಯುವಕರು ಹೆಚ್ಚು ಹೆಚ್ಚು ಇಂತಹ ನವರಾತ್ರಿ ಪುರಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಪುರಾಣದ ಗತವೈಭವವನ್ನು ಅರಿತುಕೊಂಡು ಪುನೀತರಾಗಬೇಕು ಎಂದು ಯುವಕರನ್ನು ಕರೆ ನೀಡಿದರು ಮತ್ತು ಹಿರಿಯರಿಂದ ಸೂಕ್ತ ಸಲಹೆ ಸೂಚನೆ ಹಾಗೂ ನನಗೆ ಮಾರ್ಗದರ್ಶನ ನೀಡಬೇಕಾಗಿ ಮನವಿ ಮಾಡಿದರು. ಶ್ರೀ ಸಿದ್ಧಿ ವಿನಾಯಕ ಸಮುದಾಯ ಭವನ ಆದಷ್ಟು ಬೇಗನೆ ಪೂರ್ಣಗೊಳಿಸುವ ಮಾತುಗಳನ್ನು ನೀಡಿ ಭಾಗದ ಎಲ್ಲ ಜನರ ವಿಶ್ವಾಸಕ್ಕೆ ಪಾತ್ರರಾದರು.
ಕಾರ್ಯಕ್ರಮದ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಆಂಜನೇಯ ಕಟ್ಟಿಗೆಯವರು ದೇವಿಯ ಪುರಾಣ 9 ದಿನಗಳ ಈ ಕಾರ್ಯಕ್ರಮ ಸುಮಂಗಲಿಯರಿಗೆ, ಮಹಿಳೆಯರಿಗೆ ಶ್ರೀ ದೇವಿಯ ಆರಾಧನೆ ಮಾಡುವ ಅವಕಾಶ ಇದಾಗಿದೆ ಬೆಳಗ್ಗೆ ನಾಲ್ಕು ಗಂಟೆಗೆ ತಾಯಂದಿರು ಬನ್ನಿ ಮಹಾಕಾಳಿ ದೇವರ ಆಶೀರ್ವಾದ ಪಡೆದು ಸಾಯಂಕಾಲ ಪುರಾಣದಲ್ಲಿ ಭಾಗವಹಿಸಿ 9 ದಿನಗಳ ಕಾಲ ತಾಯಿಯ ಸೇವೆ ಮಾಡಿ ಅವರ ಈ ಸೇವೆಯಿಂದ ನಮಗೂ ಕೂಡ ಶ್ರೀರಕ್ಷೆ ದೊರೆಯುವುದು ನಾವೆಲ್ಲರೂ ಒಂದಿಲ್ಲ ಒಂದು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ ಅದಕ್ಕಾಗಿ ಈ ಹಬ್ಬ ನಮ್ಮನ್ನು ಹೆಚ್ಚು ಹೆಚ್ಚು ಭಕ್ತಿಯಲ್ಲಿ ತೇಲಿಸಿ ತಾಯಿ ಆಶೀರ್ವಾದಕ್ಕೆ ಪಾತ್ರರಾಗಲು ಈ ನವರಾತ್ರಿ ಹಬ್ಬವೇ ಸಾಕ್ಷಿ ಎಂದು ನುಡಿದರು. ಅದರಂತೆ ವಾರ್ಡಿನ ನಗರಸಭೆ ಸದಸ್ಯರಾದ ಶ್ರೀಮತಿ ಪದ್ಮಾವತಿ ಕಟಗಿಯವರ ನೇತೃತ್ವದಲ್ಲಿ ಸುಮಂಗಲಿಯರಿಗೆ ಉಡಿ ತುಂಬಿವ ಕಾರ್ಯಕ್ರಮ ನಡೆಯಿತು.ಈ ಸಂಧರ್ಭದಲ್ಲಿ ಗದಗ ನಗರದ ಸಂಭಾಪೂರ ರಸ್ತೆ ಶ್ರೀ ಪಂಡಿತ ಪುಟ್ಟರಾಜ ನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಕಮೀಟಿಯ ಸರ್ವ ಸದಸ್ಯರು ಹಾಗೂ ಸಮಸ್ತ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 