ಹಾವೇರಿ17: ವಿಕಲಚೇತನರ ಸಮಸ್ಯೆಗಳಿಗೆ ಅಂಗವಿಕಲರ ಕಲ್ಯಾಣ ಇಲಾಖೆ ಜವಾಬ್ದಾರಿ ಎಂದು ತಿಳಿಯಬಾರದು. 2016ರ ಅಂಗವಿಕಲರ ಕಾಯ್ದೆ ಅನ್ವಯ ಎಲ್ಲ ಇಲಾಖೆಗಳ ಮುಖ್ಯಸ್ಥರರು ಜವಾಬ್ದಾರರು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತರಾದ ವಿ.ಎಸ್.ಬಸವರಾಜು ಅವರು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ವೈದ್ಯಾಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಡಿಪಿಓ, ಬಿ.ಆರ್.ಸಿ. ಇತರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
21 ಬಗೆಯ ವಿಕಲತೆಗಳಿವೆ. ಎಲ್ಲರಿಗೂ ಸೌಲಭ್ಯಗಳು ದೊರಬೇಕು. ತ್ರಿಚಕ್ರವಾಹನ ವಿತರಣೆ ಹಾಗೂ ಪಿಂಚಣಿ ಸೌಲಭ್ಯ ನೀಡಿದರೆ ನಮ್ಮ ಕರ್ತವ್ಯ ಮುಗಿಯಲ್ಲ. ಅವಶ್ಯಕತೆ ಇರುವ ಇತರ ವಿಕಲಚೇತನರಿಗೆ ಶಿಕ್ಷಣ, ಆರೋಗ್ಯ, ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಬೇಕು. ಅಂತಹ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು.
ಈ ಕೆಲಸಗಳನ್ನು ಮಾಡಲು ಸರಿಯಾದ ಅಂಕಿಅಂಶ ಬೇಕು. ಹಾಗಾಗಿ ಮುಂದಿನ ದಿನಗಳಲ್ಲಿ ಸರಿಯಾದ ಅಂಕಿಅಂಶ ಕಲೆಹಾಕಿ, ವಿಕಲಚೇತನ ಮಕ್ಕಳ ಪೋಷಕರಿಗೆ ತರಬೇತಿ ನೀಡಿ ಜಾಗೃತಿ ಮೂಡಿಸಿ, ತಲೆಸಿಮಿಯಾ ಹಾಗೂ ಹೀಮೋಪಿಲಿಯಾ ಮಕ್ಕಳ ಸಂಖ್ಯೆ ಎಷ್ಟು ಎಂದು ಗುರುತಿಸಿ, ಅವರಿಗೆ ಸರಿಯಾದ ಚಿಕಿತ್ಸೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಾವ ವಿಕಲತೆಗೆ ಎಷ್ಟು ಶೇಕಡಾವಾರು ನೀಡಬೇಕು ಎಂದು ವೈದ್ಯರು ನೋಡಿ ವಿಕಲಚೇತನ ಪ್ರಮಾಣ ಪತ್ರ ವಿತರಣೆ ಮಾಡಬೇಕು. ವೈದ್ಯರಿಗೆ ಸಮಾಜದಲ್ಲಿ ಗೌರವ ಘನತೆ ಇದೆ. ಇದನ್ನು ಮದ್ಯವತರ್ಿಗಳು ಹಾಳುಮಾಡುತ್ತಿದ್ದಾರೆ. ಈ ಕುರಿತು ವೈದ್ಯರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ ಲೀಲಾ ಅವರು ವಿಕಲಚೇತನ ಮಕ್ಕಳು ಶಾಲೆಯಲ್ಲಿ ಕೀಟಲೆ ಮಾಡುತ್ತಾರೆ ಎಂಬ ಕಾರಣಕ್ಕೆ ಮನೆಗೆ ಕಳುಹಿಸಲಾಗುತ್ತಿದೆ ಎಂದು ಪೋಷಕರು ಹೇಳುತ್ತಿದ್ದಾರ ಎಂದು ಆಯುಕ್ತರ ಗಮನಕ್ಕೆ ತಂದರು.
ಆಗ ಆಯುಕ್ತರು ಮಾತನಾಡಿ, ಇತಂಹ ಪ್ರಕರಣಗಳನ್ನು ನಡೆಯದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆದಲ್ಲಿ ಹಾಗೂ ಈ ಕುರಿತು ದೂರುಗಳು ಬಂದರೆ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಎ.ಪಿ.ಡಿ.ನಿದರ್ೆಶಕ ಶಿವು ಹಿರೇಮಠ, ಸಹಾಯಕ ಆಯುಕ್ತರಾದ ಪದ್ಮನಾಭ, ಉಪವಿಭಾಗಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೆಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾಜರ್ುನ ಮಠದ, ಜಿಲ್ಲಾ ಶಸ್ತ್ರ ಚಿಕಿತ್ಸರು, ಜಿಲ್ಲಾ ಆಸ್ಪತ್ರೆ ಮನೋವೈದ್ಯೆ ಡಾ ಲೀಲಾ, ಇತರೆ ವೈದ್ಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಿ.ಆರ್.ಸಿ.ಗಳು, ಡಿ.ಡಿಆರ್.ಸಿಗಳು ಹಾಗೂ ಆರ್.ಬಿ.ಎಸ್.ಕೆ.ಗಳು ಇತರರು ಉಪಸ್ಥಿತರಿದ್ದರು.