ಕಾಳಿ, ಶರಾವತಿ ನದಿಯ ಹಿನ್ನೀರಿನಲ್ಲಿ ಕೇರಳ ಮಾದರಿಯ ರಿವರ್ ಟೂರಿಜಂ ಅಭಿವೃದ್ಧಿ

ಕಾಳಿ, ಶರಾವತಿ ನದಿಯ ಹಿನ್ನೀರಿನಲ್ಲಿ ಕೇರಳ ಮಾದರಿಯ ರಿವರ್ ಟೂರಿಜಂ ಅಭಿವೃದ್ಧಿ  Development of Kerala-style river tourism in the backwaters of the Kali and Sharavathi rivers

 ಕಾರವಾರ 18 : ಕೋಸ್ಟಲ್ ಟೂರಿಜಂಗೆ ಆದ್ಯತೆ ನೀಡಲಾಗುವುದು . ಕಾಳಿ , ಶರಾವತಿ ನದಿಯ ಹಿನ್ನೀರಿನಲ್ಲಿ ಕೇರಳ ಮಾದರಿಯ ರಿವರ್ ಟೂರಿಜಂ ಅಭಿವೃದ್ಧಿ ಮಾಡಲಾಗುವುದು ಎಂದು ಕರಾವಳಿ ಮಂಡಳಿ  ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.ಕಾರವಾರದ ಜಿಲ್ಲಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯ ನಂತರ  ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಈಗ ಮಂಡಳಿಯಾಗಿ  ಬದಲಾಗಿದೆ. ಇದರ ಸದಸ್ಯರ ಸಂಖ್ಯೆ ಸಹ ಹೆಚ್ಚಾಗಿದೆ. ಕರಾವಳಿ ಜಿಲ್ಲೆಗಳ ಸಂಸದರು ಸೇರಿದಂತೆ ಮೂರು ಜಿಲ್ಲೆಗಳ ಶಾಸಕರು ಸಹ ಸದಸ್ಯರಾಗಿದ್ದು ಇವತ್ತಿನ ಸಭೆಯಲ್ಲಿ ಸಲಹೆಗಳನ್ನು ನೀಡಿದ್ದಾರೆ ಎಂದರು.

ವಾಟರ್ ಮೆಟ್ರೋ ಸರ್ವೆ ನಡೆದಿದೆ. ಹಿನ್ನೆಲೆಯಲ್ಲಿ ಬೋಟ್ ಟ್ರಾಫಿಕ್ ಕಂಟ್ರೋಲ್ ಬಗ್ಗೆ ಸರ್ವೆ ಬಾಕಿಯಿದೆ. ಈ  ರಿಪೋರ್ಟ್‌ ಬಂದ ನಂತರ ಮುಂದಿನ ಹೆಜ್ಜೆ ಇಡಲಾಗುವುದು.  ಶರಾವತಿ , ಕಾಳಿ , ಅಘನಾಶಿಯಲ್ಲಿ ಬ್ಯಾಕ್ ವಾಟರ್ ಬೋಟ್ ಟೂರಿಜಂ ಬಗ್ಗೆ ಫಿಜಿಬಲಿಟಿ ಅಧ್ಯಯನ ಮಾಡಲಾಗುವುದು ಎಂದು ಎಂ.ಎ ಗಫೂರ್ ಹೇಳಿದರು. ಜಲ ಸಾರಿಗೆ ಬಗ್ಗೆ ಸಹ ಅಧ್ಯಯನ ನಡೆದಿದೆ. ಜಲ ಸಾರಿಗೆ ಅನುಷ್ಠಾನ ಮಾಡಿದರೆ, ಸಾರ್ವಜನಿಕರು ಅದನ್ನು ಬಳಸುವ ಬಗ್ಗೆ ಅಭಿಪ್ರಾಯ ಕೇಳಲಾಗುವುದು. ಕೇರಳದ  ಕೊಚ್ಚಿಯಲ್ಲಿ ಜಲ ಸಾರಿಗೆ ಯಶಸ್ವಿಯಾಗಿದೆ.

ಈ ಬಗ್ಗೆ ಮಂಡಳಿ ಅಧ್ಯಯನ ನಡೆಸಲಾಗಿದೆ ಎಂದರು. ಮಂಡಳಿಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕನಿಷ್ಠ 100 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿ ಗಳಿಗೆ ವಿನಂತಿಸಲಾಗಿದೆ. ಮಂಗಳೂರು ನಲ್ಲಿ  ಬರುವ ದಿನಗಳಲ್ಲಿ ನಡೆವ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಘೋಷಣೆ ನೀರೀಕ್ಷಿಸಲಾಗಿದೆ ಎಂದು ಕರಾವಳಿ ಮಂಡಳಿ  ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು. ಮಂಡಳಿ ಕಾರ್ಯದರ್ಶಿ, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.