ವಾಷಿಂಗ್ಟನ್,
ಮಾರ್ಚ್29, ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ರಕ್ತ
ಸಂಬಂಧಿತ ಚಿಕಿತ್ಸೆಯನ್ನು ಒಳಗೊಂಡಂತೆ ಕೊವಿದ್ರೋಗಿಗಳಿಗೆ ಚಿಕಿತ್ಸೆಗಳ
ಅಭಿವೃದ್ಧಿಯನ್ನು ದೇಶದಲ್ಲಿ ಚುರುಕುಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್
ಟ್ರಂಪ್ ಭಾನುವಾರ ಹೇಳಿದ್ದಾರೆ.ಶ್ವೇತಭವನದಲ್ಲಿ
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ನ್ಯೂಯಾರ್ಕ್ನಲ್ಲಿ 1,100
ರೋಗಿಗಳಿಗೆ ಜಡ್-ಪ್ಯಾಕ್ಅಥವಾ ಅಜಿಥ್ರೊಮೈಸಿನ್ ಜೊತೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್
ಚಿಕಿತ್ಸೆ ನೀಡಲಾಗುತ್ತಿದೆ.
'ಕೇವಲ ಎರಡು ದಿನಗಳ ಹಿಂದೆ ಈ ಚಿಕಿತ್ಸೆ ಆರಂಭವಾಗಿದೆ. ಆದರೆ ಏನಾಗುತ್ತದೆ ಎಂದು ಕಾದು ನೋಡುತ್ತೇವೆ' ಎಂದು ಅವರು ಹೇಳಿದ್ದಾರೆ.
ತೀವ್ರ
ಅನಾರೋಗ್ಯ ಪೀಡಿತ ರೋಗಿಗಳಿಗೆ ಪ್ರಾಯೋಗಿಕ ಚಿಕಿತ್ಸೆಯಾಗಿ ಅಮೆರಿಕ ಆಹಾರ ಮತ್ತು ಔಷಧ
ಆಡಳಿತ (ಎಫ್ಡಿಎ) ರಕ್ತ ಸಂಬಂಧಿತ ಚಿಕಿತ್ಸೆಯಾದ ಕನ್ವೆಲೆಸೆಂಟ್ ಪ್ಲಾಸ್ಮಾ ವನ್ನು
ತುರ್ತು ಬಳಕೆಗೆ ಅನುಮತಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಚಿಕಿತ್ಸೆಯು
ಕೊವಿದ್ನಿಂದ ಚೇತರಿಸಿಕೊಂಡ ಜನರಿಂದ ರಕ್ತ ಪ್ಲಾಸ್ಮಾ ಪಡೆಯುವುದನ್ನು ಒಳಗೊಂಡಿರುತ್ತದೆ.
ಹೊಸ ರೋಗಿಗಳಿಗೆ ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ರಕ್ತವನ್ನು ವರ್ಗಾವಣೆ
ಮಾಡಲಾಗುವುದು. ಈ ಚಿಕಿತ್ಸೆಯ ಆರಂಭಿಕ ಫಲಿತಾಂಶಗಳು ಉತ್ತಮವಾಗಿವೆ ಎಂದು ಅವರು
ಹೇಳಿದ್ದಾರೆ.
ಕನ್ವೆಲೆಸೆಂಟ್ ಪ್ಲಾಸ್ಮಾ, ಕರೋನವೈರಸ್ ನಿಗ್ರಹಿಸುವ ಶಕ್ತಿಯನ್ನು
ಹೊಂದಿದೆ. ಇದು ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿದೆ ಎಂದು ಎಫ್ಡಿಎ
ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚು ತ್ವರಿತವಾಗಿ ಪರೀಕ್ಷಿಸಲು ಅಮೆರಿಕ ವೈದ್ಯಕೀಯ
ಸಾಧನಗಳ ಕಂಪನಿ ಅಬಾಟ್ ಲ್ಯಾಬೊರೇಟರೀಸ್ ಅಭಿವೃದ್ಧಿಪಡಿಸಿದ ಹೊಸ ಪರೀಕ್ಷೆಯನ್ನು ಎಫ್ಡಿಎ
ಶುಕ್ರವಾರ ಅಧಿಕೃತಗೊಳಿಸಿದೆ.ಪರೀಕ್ಷೆಯು ಐದು ನಿಮಿಷಗಳಲ್ಲಿ ವರದಿ
ನೀಡುತ್ತದೆ. ಧೃಡಪಡದ ಪ್ರಕರಣಗಳಿಗೆ 13 ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀಡುತ್ತದೆ.
ಮುಂದಿನ ವಾರದಿಂದ ದಿನಕ್ಕೆ 50,000 ಪರೀಕ್ಷೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು
ಕಂಪನಿ ತಿಳಿಸಿದೆ.ಈ ಮಧ್ಯೆ, ಸಾಮಾಜಿಕ ಅಂತರ ಮಾರ್ಗಸೂಚಿಗಳನ್ನು ಏಪ್ರಿಲ್ 30 ಕ್ಕೆ ವಿಸ್ತರಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ. ಮುಂದಿನ
ಎರಡು ವಾರಗಳಲ್ಲಿ ದೇಶದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ ಎಂದು
ಹೇಳಿರುವ ಟ್ರಂಪ್, ಜೂನ್ 1 ರೊಳಗೆ ದೇಶ ಚೇತರಿಕೆಯ ಹಾದಿಯಲ್ಲಿರದೆ ಎಂದು
ಆಶಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಾರ್ಚ್ 11 ರಂದು
ಕರೋನವೈರಸ್ (ಕೊವಿದ್-19) ಅನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ-ಅಂಶಗಳಂತೆ, ಜಾಗತಿಕವಾಗಿ 7,21,000
ಕರೋನವೈರಸ್ ಪ್ರಕರಣಗಳು ದೃಢಪಟ್ಟಿವೆ. ಕೊವಿದ್ -19 ಸೋಂಕಿನಿಂದ 33,900 ಕ್ಕೂ ಹೆಚ್ಚು
ಜನರು ಸಾವನ್ನಪ್ಪಿದ್ದಾರೆ.