ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ: ಕೃಷ್ಣಗೌಡ್ರು ಪಾಟೀಲ್

ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ: ಕೃಷ್ಣಗೌಡ್ರು ಪಾಟೀಲ್ Development is possible only when the mantra of unity is chanted in society: Krishnagoudru Patil

         ಗದಗ 26: "ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸವಿತಾ ಸಮಾಜ ಸುಧಾರಣಾ ಸಂಘದ 25 ವರ್ಷಗಳ ಕನಸಿನ ನಾಗದೇವರ ಮಂದಿರವು ಕೇವಲ ಕಟ್ಟಡವಾಗದೆ, ಇಡೀ ಸಮಾಜದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿ," ಎಂದು ಸಚಿವರ ಸುಪುತ್ರ ಹಾಗೂ ಯುವ ಕಾಂಗ್ರೆಸ್ ನಾಯಕ ಕೃಷ್ಣಗೌಡ್ರು ಪಾಟೀಲ್ ಆಶಯ ವ್ಯಕ್ತಪಡಿಸಿದರು.  ಗದಗ ನಗರದ ಗಂಗಿಮಡಿ ನಗರದಲ್ಲಿ ಮಂಗಳವಾರ ಸವಿತಾ ಸಮಾಜ ಸುಧಾರಣಾ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ನಾಗದೇವರ ದೇವಸ್ಥಾನ ನಿರ್ಮಾಣಕ್ಕೆ ಸಚಿವರ ವತಿಯಿಂದ ಬಿಡುಗಡೆಯಾದ 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಅಡಿಗಲ್ಲು ಹಾಕಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.  

       ಸಮಾಜದ ಸ್ವಾಭಿಮಾನಕ್ಕೆ ಕೈಜೋಡಿಸಿ: ದೇವಸ್ಥಾನವೆಂಬುದು ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಸವಿತಾ ಸಮಾಜದ ಸ್ವಾಭಿಮಾನದ ಸಂಕೇತ. ಪ್ರತಿಯೊಬ್ಬ ಸಮಾಜದ ಬಾಂಧವನು ನನ್ನ ದೇವಸ್ಥಾನಕ್ಕೆ ನನ್ನಿಂದಲೂ ಅಳಿಲು ಸೇವೆ ಇರಲಿ ಎಂಬ ದಾಸೋಹ ಭಾವದಿಂದ ಮುಂದೆ ಬರಬೇಕು. ಯುವಶಕ್ತಿಯು ಈ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತಾಗ ಮಾತ್ರ 25 ವರ್ಷಗಳ ಹಿರಿಯರ ಕನಸು ಭವ್ಯವಾಗಿ ನನಸಾಗಲು ಸಾಧ್ಯ. ಸವಿತಾ ಸಮಾಜದ ದಕ್ಷ ಹಾಗೂ ಪ್ರಾಮಾಣಿಕ ನಾಯಕತ್ವವನ್ನು ಬೆಂಬಲಿಸಿ, ರಾಜಕಾರಣ ರಹಿತವಾಗಿ ಒಗ್ಗಟ್ಟಿನ ಸಂದೇಶ ರವಾನಿಸುವುದು ಇಂದಿನ ತುರ್ತು ಅಗತ್ಯ. ಸಮಾಜದ ಪರವಾಗಿ ಮನವಿ ಮಾಡಿದ ಕೃಷ್ಣಾ ಎಚ್ ಹಡಪದ ಅವರ ಬೇಡಿಕೆಯಂತೆ ಹೆಚ್ಚುವರಿ ಅನುದಾನ ನೀಡಲು ನಾನು ಸದಾ ಸಿದ್ಧನಿದ್ದೇನೆ ಎಂದು ಅವರು ಘೋಷಿಸಿದರು.  

        ಸಮಾಜದ ನಡೆ-ನುಡಿಯ ಬಗ್ಗೆ ಕೃಷ್ಣಾ ಹಡಪದ ಮನವಿ: ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿ, "ಸಮಾಜದ ಹಿರಿಯರು ಕಂಡಿದ್ದ ಕಾಲು ಶತಮಾನದ ಕನಸಿಗೆ ಇಂದು ನಮ್ಮ ನೆಚ್ಚಿನ ಯುವ ನಾಯಕರಾದ ಕೃಷ್ಣಗೌಡ್ರು ಪಾಟೀಲರಿಂದ ಚಾಲನೆ ದೊರೆತಿದೆ. ಇದು ಕೇವಲ ದೇವಸ್ಥಾನವಲ್ಲ, ನಮ್ಮ ಸಂಘಟನೆಯ ಶಕ್ತಿ. ಯುವಕರು ದಿನಕ್ಕೆ ಕನಿಷ್ಠ 1. ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವ ಮೂಲಕ ಈ ದೇವಸ್ಥಾನವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಕಲ್ಪ ಮಾಡಬೇಕು," ಎಂದು ಕೈಮುಗಿದು ವಿನಂತಿಸಿದರು.  

      ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ್ ಕೋಟೆಕಲ್ಲ ಅವರು ಸಂಘದ ಬಲವರ್ಧನೆಗೆ ಎಲ್ಲರ ಸಹಕಾರ ಕೋರಿದರು.  ಗದಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು ಮಾತನಾಡಿ, ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಇಂತಹ ಕಾರ್ಯಗಳು ಪೂರಕ ಎಂದರು.  ಕಾಂಗ್ರೆಸ್ ಯುವ ನಾಯಕರುಗಳಾದ ರವಿಕುಮಾರ್ ರೆಡ್ಡಿ ಹಾಗೂ ಅಶೋಕ್ ಮಂದಾಲಿ. ನಗರಸಭೆಯ ಸ್ಥಳೀಯ ಸದಸ್ಯರಾದ ರವಿ ಕಮ್ತರ.  ಅವರು ಸಮಾಜದ ಒಗ್ಗಟ್ಟು ಮತ್ತು ಯುವಕರ ಜವಾಬ್ದಾರಿಯ ಬಗ್ಗೆ ಕ್ರಾಂತಿಕಾರಿ ವಿಚಾರಗಳನ್ನು ಹಂಚಿಕೊಂಡರು.  ವೇದಿಕೆಯಲ್ಲಿ ಹಿರಿಯರಾದ ಎಸ್‌.ಎನ್‌. ಬಳ್ಳಾರಿ ಗುರುಗಳು ಮತ್ತು ಮಾರ್ತಂಡಪ್ಪ ಹಾದಿಮನಿ ಅವರು ಆಶೀರ್ವಚನ ನೀಡಿದರು.  

     ಸಾಮಾಜಿಕ ಕಾರ್ಯಕರ್ತ ಕುಮಾರ ಮಾರನಬಸರಿ. ಅಬ್ದುಲಮುನಾಫ್ ಮುಲ್ಲಾ. ಸಂತ ಸೇನಾ ಮಹಾರಾಜ್ ನಾಭಿಕ ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷ ವಿಕಾಸ್, ಕ್ಷೀರಸಾಗರ್‌.  ಸವಿತಾ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ. ಪರಶುರಾಮ (ಬಜ್ಜು) ರಾಂಪೂರ. ಜಂಬಣ್ಣ ಕಡಮೂರ. ಪಂಪಣ್ಣ ರಾಯಚೂರ. ರಾಜು ಗೋಡರ ವೆಂಕಟೇಶ ರಾಂಪೂರ. ವೇದಿಕೆ ಮೇಲೆ ಹಾಸಿನರಾಗಿದ್ದರು.   

    ಸಂಘದ ಕಾರ್ಯದರ್ಶಿ ರವಿಕುಮಾರ್ ಹಡಪದ ನಿರೂಪಿಸಿದರು. ಗೌರವ ಅಧ್ಯಕ್ಷರಾದ ಕೃಷ್ಣಾ ಬಾಯಲಗುಡ್ಡ. ಸ್ವಾಗತಿಸಿದರು ಹಿರಿಯರಾದ ಆಂಜನೇಯ ಆದೋನಿ ವಂದನಾರೆ​‍್ಣಗೈದರು.  ಸವಿತಾ ಸಮಾಜ ಸುಧಾರಣಾ ಸಂಘದ ನೂರಾರು ಯುವಕರು, ಹಿರಿಯರು ಮತ್ತು ಗಂಗಿಮಡಿ ನಗರದ ಗುರು ಹಿರಿಯರು ಪಾಲ್ಗೊಂಡು ದೇವಸ್ಥಾನ ನಿರ್ಮಾಣಕ್ಕೆ ತಮ್ಮ ಪೂರ್ಣ ಬೆಂಬಲ ಘೋಷಿಸಿದರು.