ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಗಾಂಧಿ ಕನಸು ನನಸಾಗಿಸಿ: ಕರಿಶಂಕರಿ

ಬಾಗಲಕೋಟೆ: ಗ್ರಾಮಗಳನ್ನು ಅಭಿವೃದ್ದಿಪಡಿಸುವುದು ಮಹಾತ್ಮಾಗಾಂಧೀಜಿಯವರ ಕನಸನ್ನು ನನಸಾಗಿಸುವ ಕಾರ್ಯವಾಗಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಹೇಳಿದರು.

ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿಂದು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಹಾತ್ಮಾಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ಗಾಂಧೀಜಿ ಹಾಗೂ ಗ್ರಾಮೀಣ ಅಬಿವೃದ್ಧಿ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಗಾಂಧೀಜಿಯವರು ಗ್ರಾಮಗಳನ್ನು ಅಭಿವೃದ್ದಿ ಪಡಿಸುವ ಗುರಿಯಾಗಿತ್ತು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಿದ್ದಾದರೆ ಇಡೀ ದೇಶ ಅಭಿವೃದ್ದಿಯಾಗುವದರಲ್ಲಿ ಸಂಶಯವಿಲ್ಲವೆಂದರು. ಇಂದಿನ ಯುವ ವಿದ್ಯಾಥರ್ಿ ಗಾಂಧೀಜಿಯವರ ತತ್ವ ಆದರ್ಶಗಳನ್ನು ಪಾಲಿಸುವದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇಂತಹ ಮಹಾತ್ಮಾ ಗಾಂಧೀಜಿಯವರ ಕುರಿತಾದ ಕಾರ್ಯಕ್ರಮಗಳನ್ನು ವಾತರ್ಾ ಇಲಾಖೆ ಗ್ರಾಮೀಣ ಭಾಗದಲ್ಲಿ ಹಮ್ಮಿಕೊಳ್ಳುತ್ತಿರುವುದನ್ನು ಶ್ಲಾಘಿಸಿದರು. 

ಉಪನ್ಯಾಸಕರಾಗಿ ಆಗಮಿಸಿದ್ದ ಕೂಡಲಸಂಗಮ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಮಹಾದೇವ ಬಸರಕೋಡ ಮಾತನಾಡಿ ಭಾರತ ಪಾರಂಪರಿಕವಾಗಿ ಹಳ್ಳಿಗಳ ದೇಶವಾಗಿದ್ದ, ಅವುಗಳ ಅಭಿವೃದ್ದಿ ನಮ್ಮೆಲ್ಲರ ಉಸಿರಾಗಬೇಕಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಹಳ್ಳಿಗಳ ಅಭಿವೃದ್ದಿ ಮುಖ್ಯವಾಗಿದ್ದು, ಬಡತನ ನಿಮರ್ೂಲನೆ ಹಾಗೂ ಆಥರ್ಿಕ ಅಭಿವೃದ್ದಿ ಗ್ರಾಮ ಮಟ್ಟದಿಂದ ಪ್ರಾರಂಭವಾಗಬೇಕು ಎಂಬುದು ಗಾಂಧೀಜಿ ಪ್ರತಿಪಾಧಿಸಿದ್ದರು. 

      ಜರಲ್ಲಿ ಹುದುಗಿರುವ ಪ್ರಾವಿಣ್ಯತೆಯನ್ನು ಬಳಸಿಕೊಂಡು ಸ್ಥಳೀಯವಾಗಿ ದೊರೆಯುವ ಸಾಂಪ್ರದಾಯಕ ಉತ್ಪಾದನಾ  ಕ್ರಮಗಳಿಂದ ಉತ್ಪಾದನೆಯಾಗಬೇಕು.

          ಉತ್ಪಾದನಾ ಘಟಕಗಳು ಗ್ರಾಮಗಳಿಗೆ ಹತ್ತಿರ ಸ್ಥಾಪನೆಗೊಂಡರೆ ಗ್ರಾಮದ ಎಲ್ಲ ಕೆಲಸಗಾರರು ತಮ್ಮ ಸಂಸಾರದ ಜೊತೆಗಿದ್ದುಕೊಂಡೇ ತಮ್ಮ ಮನೆಯಿಂದ ಕೆಲಸಕ್ಕೆ ಹೋಗಲು ಅನುಕೂಲವಾಗುತ್ತದೆ. ಇದರಿಂದ ಕೈಗಾರಿಕೆಗಳಿಗೆ ಬೇಕಾದ ಯಾವುದೇ ಅಗತ್ಯಗಳನ್ನು ದೂರದ ಪ್ರದೇಶದಿಂದ ತರಿಸುವ ಪ್ರಮೇಯ ಬರುವದಿಲ್ಲ ಎಂಬು ಗಾಂದೀಜಿಯವರ ಪ್ರಭಲ ವಾದವಾಗಿತ್ತು ಎಂದರು.

ವಿಶ್ವದ ಬಹುತೇಕ ಸಮಸ್ಯೆಗಳಿಗೆ ಲಾಭಗಳಿಸುವುದು ಮತ್ತು ರಾಶಿಗಟ್ಟಲೇ ಉತ್ಪಾದನೆ ಮಾಡುವುದಾಗಿದ್ದು, ಇಂತಹ ಔದ್ಯೋಕಿರಣವನ್ನು ಗಾಂಧೀಜಿಯವರು ಪ್ರಬಲವಾಗಿ ವಿರೋಧಿಸುತ್ತಿದ್ದರು. ಗ್ರಾಮೀಣ ಭಾಗದ ಗುಡಿ ಕೈಗಾರಿಕೆ, ಸಣ್ಣ ಉದ್ಯಮಗಳಿಗೆ ಸದಾ ಬೆಂಬಲವಿತ್ತು. ಭಾರತದ ನಿಜವಾದ ಶಕ್ತಿ ಹಳ್ಳಿಗಳಲ್ಲಿದ್ದು, ಕೈಗಾರಿಕೆಗಳು ಹಳ್ಳಿಗಳಿಂದಲೇ ಬೆಳೆದು ಬಂದರೆ ಇಡಿ ದೇಸವೇ ಕೈಗಾರಿಕರದತ್ತ ಮುಖಮಾಡಿ ನಿಲ್ಲುವುದು ಎಂದು ಗಾಂಧಿ ಭಾವಿಸಿದ್ದರು. ಹೀಗಾರಿ ಅವರು ರಾಮರಾಜ್ಯದ ಪರಿಕಲ್ಪನೆ ಕುರಿತು ಚಿಂತಿಸುತ್ತಿದ್ದರು ಎಂದರು. ನಾವೆಲ್ಲರೂ ಗಾಂಧೀಜಿಯವರ ಪರಿಕಲ್ಪನೆಯಂತೆ ಹಳ್ಳಿಗಳ ಅಭಿವೃದ್ದಿಪಡಿಸಲು ಪಣ ತೊಡಬೇಕಾಗಿದೆ ಎಂದರು.

ಆಕಾಶವಾಣಿ ವರದಿಗಾರ ಹಾಗೂ ಗಾಂಧೀ ತತ್ವ ಪರಿಪಾಲಕ ನಿಲೇಶ ಬೇನಾಳ ಮಾತನಾಡುತ್ತಾ, ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿದಿರುವ ಮಹಾತ್ಮಾ ಗಾಂಧೀಜಿಯವರ  ಅನುಸರಿಸುತ್ತಿರುವ ಮಾರ್ಗಗಳನ್ನು ನಾವೆಲ್ಲರೂ ಅನುಸರಿಸುವ ಅಗತ್ಯವಿದೆ. 

        ಗಾಂಧೀಜಿ ಕೇವಲ ನಮ್ಮ ದೇಶದ ಜನರಿಗೆ ಮಾತ್ರ ಮಹತ್ವವಾಗಿರದೇ ಬೇರೆ ಬೇರೆ ದೇಶದವರಿಗೂ ಮಾರ್ಗದರ್ಶಕರಾಗಿದ್ದಾರೆ. ಗಾಂಧೀಜಿಯವರು ಶತ್ರುಗಳನ್ನು ಸಹ ಪ್ರೀತಿಯಿಂದ ಕಾಣುವ ಗುಣಗಳನ್ನು ಹೊಂದಿದ್ದರು ಎಂದರು. 

ದಿವ್ಯ ಸಾನಿದ್ಯವನ್ನು ವಹಿಸಿದ್ದ ಶಂಕರರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ  ಪ್ರಗತಿಗೆ ರಾಜಮಾರ್ಗ ತೋರಿದವರು ಗಾಂಧೀಜಿಯವರಾಗಿದ್ದು, ಅವರ ತತ್ವ ಸಿದ್ದಾಂತ ಮತ್ತು ಕಾರ್ಯಕ್ರಮಗಳನ್ನು ವಿಮಶರ್ಾತ್ಮಕವಾಗಿ ನೋಡಿದರೆ ಅವರೊಬ್ಬ ಕ್ರಾಂತಿಕಾರಕ ಸುಧಾರಕರಾಗಿದ್ದು, ಭವಿಶ್ಯದ ದೃಷ್ಠಿಕೋನ ಮತ್ತು ಪೂರ್ಣದೃಷ್ಠಿ ಹೊಂದಿದ ಮಾರ್ಗದರ್ಶಕರಾಗಿದ್ದಾರೆ. 

       ನಾವೆಲ್ಲರೂ ಅವರ ನಡೆದ ಹಾದಿಯಲ್ಲಿ ನಡೆಬೇಕಾಗಿದೆ. ಇಂತಹ ಮಹಾನ್ ವ್ಯಕ್ತಿಯ ಕುರಿತು ಜಾಗೃತಿ ಮೂಡಿಸಲು ವಾತರ್ಾ ಇಲಾಖೆ ಕಾರ್ಯಕ್ರಮ ಹಮ್ಮಿಕೊಳ್ಳಿತ್ತಿರುವುದು ಶ್ಲಾಘನೀಯವಾದುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿ ಉಪಪ್ರಾಚಾರ್ಯ ವಿ.ಎಂ.ವಸ್ತ್ರದ ಮಾತನಾಡಿ  ಇಂದಿನ ಯುವ ಪೀಳಿಗೆ ಗಾಂಧೀಜಿಯವರ ತತ್ವಗಳನ್ನು ಅನುಸರಿಸುವ ಅಗತ್ಯವಿದ್ದು.

    ಗಾಂಧೀಜಿಯವರ ಕಲ್ಪನೆಗಳನ್ನು ಸಾಕಾರಗೊಳಿಸಲು ಸರಕಾರ ಗ್ರಾಮ ಸ್ವರಾಜ್ಯ, ಸ್ವಚ್ಛಭಾರತ ಅಭಿಯಾನ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳನ್ನು ಸಮರ್ಪಕ ಅನುಷ್ಠಾನಕ್ಕೆ ನಾವೆಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು. ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾರಂಭದಲ್ಲಿ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹಶಿಕ್ಷಕ ಆರ್.ಜಿ.ಸನ್ನಿ. ವಾಯ್.ಎಚ್.ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಹಶಿಕ್ಷಕಿ ಎಸ್.ಎಸ್.ಬಾದರಡ್ಡಿ ವಂದಿಸಿದರು. ಎ.ಎಸ್.ಸಿಂದಗಿ ನಿರೂಪಿಸಿದರು.