ವಿಕಸಿತ ಕೃಷಿ ಸಂಕಲ್ಪ ಅಭಿಯಾನ
Developed Agriculture Resolution Campaign
ತಾಳಿಕೋಟೆ 12: ತಾಲೂಕಿನ ಬಳಗಾನೂರ ಹಾಗೂ ಮಿಣಜಗಿ ಗ್ರಾಮದಲ್ಲಿ ಸ್ಥಳೀಯ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ವಿಜಯಪುರ ಇವರುಗಳ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಪಶು ಸಂಗೋಪನೆ ವಿಷಯತಜ್ಞೆ ವಿಜಯಲಕ್ಷ್ಮೀ ಮುಂದಿನಮನಿ ಮಾತನಾಡಿ, ದನಕರುಗಳಿಗೆ ಬರತಕ್ಕ ಕಾಲುಬೇನೆರೋಗ, ಬಾಯಿರೋಗ, ಚಪ್ಪೆರೋಗ ಮತ್ತು ದನಗಳಿಗೆ ಲಸಿಕೆ ಹಾಕಿಸುವ ಬಗ್ಗೆ ಹಾಗೂ ಕೃಷಿ ಅಧಿಕಾರಿ ಮಹೇಶ ಜೋಶಿ ಬೀಜೋಪಚಾರ ಹಾಗೂ ಟ್ರೈಕೋಡರ್ಮದ ಮಹತ್ವ ಕುರಿತು ವಿವರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಪಶು ಸಂಗೋಪನೆ ವಿಷಯತಜ್ಞ ಮಂಜುನಾಥರೆಡ್ಡಿ ನಿವೇದಿ ಅವರು ನಾಯಿ ಕಡಿದಾಗ ಆಗುವ ಅನಾಹುತ, ರೆಬಿಸ್ ಲಸಿಕೆಯನ್ನು ಸಕಾಲದಲ್ಲಿ ಹಾಕಿಸಿಕೊಳ್ಳದಿದ್ದರೆ ಮನುಷ್ಯನ ಮೆದುಳಿನ ಮೇಲೆ ಪರಿಣಾಮ ಬೀರಿ ಹುಚ್ಚಿಗೆ ಕಾರಣವಾಗಬಹುದು ಎಂದರು.
ಬೇಸಾಯಶಾಸ್ತ್ರದ ವಿಷಯತಜ್ಞೆ ಶಿಲ್ಪಾ ಜೋಗಳಾಪುರ ಅವರು ತೊಗರಿ ತಳಿಗಳು, ಬೆಳೆಗಳಿಗೆ ತಗುಲುವ ಕೀಟ-ರೋಗಬಾಧೆ ಮತ್ತು ಹತೋಟಿಕ್ರಮಗಳು, ಹತ್ತಿ, ತೊಗರಿ ತಳಿಗಳು ಸೂಕ್ತ ಬೇಸಾಯಕ್ರಮಗಳ ಕುರಿತು ವಿವರಿಸಿದರು.
ಕೃಷಿ ಇಲಾಖೆಯ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಪಾಟೀಲ, ಸಂಜೀವಿನಿ ಸಿಬ್ಬಂದಿ ಕಿರಣಕುಮಾರ, ಅಪ್ಪು ಕುಂಟರೆಡ್ಡಿ, ಕೃಷಿ ಸಖಿಯರು, ಮಿಣಜಗಿ ಹಾಗೂ ಬಳಗಾನೂರ ಗ್ರಾಮದ ರೈತರು, ಗಣ್ಯರು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 