ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ:ಡಾ.ಪ್ರಭುಗೌಡ
Develop the habit of reading books: Dr. Prabhugowda
ದೇವರಹಿಪ್ಪರಗಿ 23: ಮಾನವನ ಬದುಕನ್ನು ಬದಲಾವಣೆ ಮಾಡುವ ಶಕ್ತಿ ಪುಸ್ತಕಗಳಿಗೆ ಇದೆ. ಇದಲ್ಲದೆ ಪುಸ್ತಕಗಳನ್ನು ಓದುವುದರಿಂದ ಮೃಗದಂತಹ ಮನುಷ್ಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತವೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಬುಧವಾರ ಸಾಹಿತಿ ಸಂಗಮೇಶ ಭೀ.ಕೆರೆಪ್ಪಗೋಳ ಅವರು ರಚಿಸಿದ "ಸತ್ಯಕ್ಕೆ ಕೈ ಎತ್ತು" ಸಾಮಾಜಿಕ ನಾಟಕದ ಗ್ರಂಥ ಲೋಕಾರೆ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು,ಆಧುನಿಕ ಕಾಲದಲ್ಲಿ ಅಂತರ್ಜಾಲ, ಕಂ್ಯೂಟರಿ್್ನಂದ ಮಕ್ಕಳಲ್ಲಿ ಓದುವ ಹವ್ಯಾಸ ಕುಂಠಿತಗೊಂಡಿದೆ. ಹಿಂದಿನ ಜನರಿಗೆ ಸಾಕಷ್ಟು ಪುಸ್ತಕ ಓದುವ ಹವ್ಯಾಸ ಇತ್ತು. ಪ್ರತಿನಿತ್ಯ ಸಂಜೆ ಪುರಾಣ,ನಾಟಕ, ಕಥೆ, ಕಾದಂಬರಿ, ಪತ್ರಿಕೆ ಮಹಾಗ್ರಂಥಗಳನ್ನು ಮಕ್ಕಳಿಗೆ ಓದಿ ಹೇಳುವ ಸಂಪ್ರದಾಯ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು.
ಇಂದು ಈ ಸಮಯ ಟಿ.ವಿ. ವೀಕ್ಷಣೆಗೆ ಮೀಸಲಾಗಿದೆ. ಆದರೆ ಟಿ.ವಿ. ನೋಡಿದಷ್ಟೇ ಸಮಯದಲ್ಲಿ ಮನಸ್ಸಿನಲ್ಲಿರುತ್ತದೆ. ಪುಸ್ತಕ ಜ್ಞಾನ ವೃದ್ಧಿಸುತ್ತದೆ,ಬರಹಗಳ ಮೌಲ್ಯ ಕುಸಿದಿದೆ ಎಂಬ ಆರೋಪವಿದ್ದರೂ ಗಟ್ಟಿ ಕಾಳುಗಳು ನಿರಂತರವಾಗಿರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಹಿರಿಯ ಸಾಹಿತಿಗಳಾದ ಸಂಗಮೇಶ ಕೆರೆಪ್ಪಗೋಳ ಅವರು ವಿರಚಿತ 12ನೆಯ ಪುಸ್ತಕ ಇದು, ಸಾಹಿತಿ ಹಾಗೂ ಬರಹಗಾರರಿಗೆ ಸರ್ಕಾರದಿಂದ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ,ಉತ್ತಮ ಬರಹಗಳಿಗೆ ಓದುಗರ ಕೊರತೆ ಇಲ್ಲ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಯಾಳವಾರದ ವೇ.ಮೂ ಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.ವಿಜಯಪುರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರ.ದ.ಸಹಾಯಕರಾದ ದಸ್ತಗಿರಸಾಬ ಮಶಾಕಸಾಬ ಕರ್ನಾಳ ಅವರು ಗ್ರಂಥ ಮುದ್ರಣ ದಾಸೋಹವನ್ನು ನೆರವೇರಿಸಿದ್ದರು.ಇದೇ ಸಂದರ್ಭದಲ್ಲಿ ಸಾಹಿತಿ ಗುಂಡಪ್ಪ ಕುಂಬಾರ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆ ಐ.ಎಲ್.ಶಾಬಾದಿ.ಸಿ.ಕೆ.ಕಿರಣಗಿ ಸ್ವಾಗತಿಸಿದರು.ಎಸ್.ಕೆ.ಪಟೇದ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 