ಕಾರವಾರ: ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ನಾಗರಾಜ್

ಕಾರವಾರ 19: ಯುವಕರು ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಿ. ಯುದ್ಧದ ಉನ್ಮಾದದ ಭಕ್ತಿ ತುಂಬುವ ದೃಶ್ಯ ಮಾಧ್ಯಮಗಳ ವೀಕ್ಷಣೆಯ ಬಗ್ಗೆ ಎಚ್ಚರಿಕೆಯ, ಸೂಕ್ಷ್ಮ ಮನಸ್ಸಿನ ಗ್ರಹಿಕೆ ಹೊಂದಿರಬೇಕು ಎಂದು ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್  ಅಧ್ಯಕ್ಷ ನಾಗರಾಜ ಹರಪನಹಳ್ಳಿ ಅಭಿಪ್ರಾಯಪಟ್ಟರು. 

ಕಾರವಾರ ಕಡಲಜೀವ ಶಾಸ್ತ್ರ ಸ್ನಾತಕೋತ್ತರ ಕೇಂದ್ರದದ  ಎನ್ಎಸ್ಎಸ್ ಘಟಕದವರು ಚೆಂಡಿಯಾ ಗ್ರಾಮದಲ್ಲಿ ಈಚೆಗೆ ಏರ್ಪಡಿಸಿದ್ದ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಯುವಕರು ದೇಶಪ್ರೇಮ ಮತ್ತು ಮಾಧ್ಯಮಗಳ ಉನ್ಮಾದದ ಭಕ್ತಿಯ ತೆಳು ಗೆರೆಗಳನ್ನು ಗುರುತಿಸುವ ಸೂಕ್ಷ್ಮ ಮನಸ್ಸು ಬೆಳೆಸಿಕೊಳ್ಳಬೇಕು. ಕಿರು ಪರದೆಯಲ್ಲಿ ಕುಳಿತು ಅರಚುವವ ಸುಳ್ಳು ಹೇಳುತ್ತಿದ್ದಾನೋ, ಪ್ರಚೋದಿಸುತ್ತಿದ್ದಾನೋ ಎಂದು ಅರಿಯುವ ಸಂವೇದನೆ ಯುವಕರಿಗೆ ಬೇಕು. ಈ ಅರಿವು ಬರಬೇಕಾದರೆ ಸಮಾನತೆ ಮತ್ತು ಪ್ರೀತಿಯನ್ನು ಸಾರಿದ  ಬುದ್ಧ  ಕುವೆಂಪು, ಬಸವಣ್ಣ, ಅಂಬೇಡ್ಕರ್ ಅವರ ಬದುಕಿನ ವಿವರ ಮತ್ತು ಅವರ ಬರಹಗಳನ್ನು ಅಧ್ಯಯನ ಮಾಡಬೇಕು ಎಂದರು. 

ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಸೌಮ್ಯವಾದದ ಮನಸ್ಸಿನವರು ಮತ್ತು ತೀವ್ರವಾದದ ಮನಸ್ಸಿನವರ ಮಧ್ಯೆ ಸಂಘರ್ಷ ನಡೆಯುತ್ತಲೇ ಬಂದಿದೆ. ಸಂವಾದ ಮತ್ತು ಚಚರ್ೆಗಳು ಇರಬೇಕು. ಅವು ಮನುಷ್ಯರ ಜೀವ ತೆಗೆಯುವ ಹಂತಕ್ಕೆ ಹೋಗಬಾರದು. ಸ್ವಾತಂತ್ರ್ಯ ಪಡೆಯುವಲ್ಲೇ ವಿಭಿನ್ನ ಮನಸ್ಸುಗಳು ವಿಭಿನ್ನ ಹಾದಿ ತುಳಿದಿದ್ದವು. ಗಾಂಧಿಜೀಯದು ಮತ್ತು ಅಂಬೇಡ್ಕರ್ ಕಾಳಜಿ ಮತ್ತು ಹೋರಾಟದ ಕೇಂದ್ರ ವಿಷಯಗಳೇ ಭಿನ್ನವಾಗಿದ್ದವು. ಆದರೂ ಗಾಂಧಿಜೀ ಅವರ ಒತ್ತಾಸೆಗೆ ಅಂಬೇಡ್ಕರ್ ಮಣಿದು ತಮ್ಮ ಹಠವನ್ನು ಸಡಿಲಿಸಿದರು. ಆದರೆ ಭಾರತದಲ್ಲಿನ ಅಸ್ಪೃಶ್ಯತೆಯ ತೀವ್ರತೆಯನ್ನು ಗಾಂಧಿಜೀಗೆ ಮನವರಿಕೆ ಮಾಡಿಕೊಡುವಲ್ಲಿ ಅಂಬೇಡ್ಕರ್ ಗೆದ್ದಿದ್ದರು. ಅದರ ಪರಿಣಾಮವಾಗಿ ಗಾಂಧಿಜೀ ಅಸ್ಪೃಶ್ಯತೆ ಅಚರಣೆಯ ವಿರುದ್ಧ ಇಡೀ ದೇಶದಲ್ಲಿ ಸಂಚರಿಸಿ ಜಾತೀಯತೆಯ, ಅಸ್ಪೃಶ್ಯತೆಯ ಕರಾಳತೆಯ ವಿರುದ್ಧ ಜಾಗೃತಿ ಮೂಡಿಸಲು ಯತ್ನಿಸಿದರು. 

ವಿವೇಚನೆಯಿಲ್ಲದ ತೀವ್ರವಾದದಿಂದಾಗಿ ಭಾರತದಲ್ಲಿ ಗಾಂಧಿಜೀ ಹತ್ಯೆಯಾಯಿತು. ಈಚಿನ ವರ್ಷಗಳಲ್ಲಿ ಮಹಾರಾಷ್ಟ್ರದ ಪನ್ಸಾರೆ, ದಾಬೋಲ್ಕರ್, ಕನರ್ಾಟಕದ ಡಾ.ಎಂ.ಎಂ.ಕಲಬುಗರ್ಿ, ಗೌರಿ ಲಂಕೇಶರ ಹತ್ಯೆಗಳು ನಡೆದುಹೋದವು. ಈ ಹತ್ಯೆಗಳಿಗೆ ಹೊಣೆಯಾದವರ ಆಯಾಮಗಳನ್ನು ಶೋಧಿಸಿದರೆ ಯುವಕರಿಗೆ ದಿಗ್ಭ್ರಮೆಯಾಗದೇ ಇರದು.  ವಿವೇಚನೆಯುಕ್ತ ಸಂವೇದನಾಶೀಲ ಮನಸ್ಸನ್ನು ವಿದ್ಯಾಥರ್ಿ ಯುವ ಜನಾಂಗ ಹೊಂದಬೇಕಿದೆ. ಅದು ಇವತ್ತಿನ ಅತ್ಯಂತ ತುತರ್ು ಅಗತ್ಯ ಎಂದರು. ಗ್ರಾಮ ಮತ್ತು ರೈತರನ್ನು ಅರ್ಥ ಮಾಡಿಕೊಳ್ಳಲು ಎನ್ ಎಸ್ ಎಸ್ ಶಿಬಿರಗಳು ಸಹಾಯ ಮಾಡುತ್ತವೆ. ಗ್ರಾಮದ ಸೇವೆ ಮಾಡಿದರೆ ಅದು ನಿಜವಾದ ದೇಶಪ್ರೇಮ. ಓದಿನ ಜೊತೆ ಬದುಕಿನ ನಿಜ ಸ್ಪರ್ಶವಾಗುವುದೇ ಇತರರ ಜೊತೆ ಬೆರೆತು, ಅವರ ಕಷ್ಟಗಳಿಗೆ ನೆರವಾದಾಗ ಎಂಬ ಸರಳ ತತ್ವ ಅರಿಯಿರಿ ಎಂದರು. 

ಫಂಡ್ ಮ್ಯಾನೇಜರ್ ಪವನ್ ಕಾಮತ್, ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ, ಎನ್ಎಸ್ಎಸ್ ಅಧಿಕಾರಿ, ವಿದ್ಯಾಥರ್ಿ ಮುಖಂಡರು ವೇದಿಕೆಯಲ್ಲಿದ್ದರು.