ಬೆಂಗಳೂರು, ಫೆ. 4, ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಫಿನ್‌ಲ್ಯಾಂಡ್ ನ ರಾಜಕೀಯ ನಾಯಕರನ್ನು ಭೇಟಿಯಾಗಿದ್ದಾರೆ. ಫಿನ್ಲ್ಯಾಂಡ್ನ ಮಾಜಿ ಪ್ರಧಾನಿ ಹಾಗೂ ಯುರೋಪ್ ಸಂಸತ್ ಸದಸ್ಯೆ ಅನ್ನೇಲಿ ಜಾಟ್ಟೀನ್ಮಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ದೇವೇಗೌಡ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅನ್ನೇಲಿ ಜಾಟ್ಟೀನಕಿ ಜೊತೆ ಮಾತುಕತೆ ನಡೆಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಬುಧವಾರ ಸೋಲ್‌ನಲ್ಲಿ ನಡೆಯಲಿರುವ ಯೂನಿವರ್ಸಲ್ ಪೀಸ್ ಫೌಂಡೇಶನ್ ಹಮ್ಮಿಕೊಂಡಿರುವ ಜಾಗತಿಕ ಸಮಾವೇಶದಲ್ಲಿ ದೇವೇಗೌಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.