ದೇವೇಗೌಡರ ಹುಟ್ಟುಹಬ್ಬ : ಮಹಾರುದ್ರಾಭಿಷೇಕ ವಿಶೇಷ ಪೂಜೆ

ದೇವೇಗೌಡರ ಹುಟ್ಟುಹಬ್ಬ : ಮಹಾರುದ್ರಾಭಿಷೇಕ ವಿಶೇಷ ಪೂಜೆ  Deve Gowda's birthday: Maharudrabhishek special puja

ಕೊಪ್ಪಳ 19:  ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡರ 94ನೇ  ಹುಟ್ಟು ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಹಾಮಹಿಮ ಶ್ರೀ ಗವಿಸಿದ್ದೇಶ್ವರಗೆ ಮಹಾರುದ್ರಭಿಷೇಕ  ವಿಶೇಷ ಪೂಜೆ ಸಲ್ಲಿಸಲಾಯಿತು.   ನಂತರ ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು 94ರ  ಈ ವಯಸ್ಸಿನಲ್ಲಿಯೂ ಜನಹಿತಕ್ಕಾಗಿ ಸಂಘರ್ಷದ ಹಾದಿಯನ್ನು ಸವೆಸುತ್ತಿದ್ದಾರೆ,ಅವರ ದಾರಿ ತಲೆತಲೆಮಾರಿಗೂ ಮಾದರಿ ಆ ಹಿರಿಯ ಜೀವಕ್ಕೆ ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಸುದೀರ್ಘ ಕಾಲ ರಾಷ್ಟ್ರಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು  ಪ್ರಾರ್ಥಿಸಿದರು.ನಂತರ ಬೊಲ್ಡೊಟಾ ಹಠಾವು ಕೊಪ್ಪಳ ಬಚಾವ್ 200ನೇ ದಿನದ ಹೋರಾಟದಲ್ಲಿ ಭಾಗವಹಿಸಿ ರೈತರಿಗೆ ಸಿಹಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಜಿ ತಾಲೂಕಾಧ್ಯಕ್ಷರಾದ ಅಯುಬ್ ಅಡ್ಡೆವಾಲೆ ಮುಖಂಡರಾದ ಮಂಜುನಾಥ್ ಸೊರಟೂರ್ ಬಸವರಾಜ್ ಕಲ್ಕೇರಿ ರಾಜು ಕೋರಿ ಪಕ್ಷದ  ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.