ರಾಷ್ಟ್ರೀಯ ಸ್ವಯಂ ಸೇವಕ ಸಂಘ 'ಸಂಚಲನ' ನಿರ್ಣಯ..!

ನವದೆಹಲಿ, ಏ ೬,ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)  ಸಂಚಲನ ನಿರ್ಧಾರ ಕೈಗೊಂಡಿದೆ. ೧೯೨೫ ರಲ್ಲಿ  ಸಂಘಟನೆ  ಸ್ಥಾಪನೆಗೊಂಡಾಗಿನಿಂದ .. .. ೧೯೨೯ ರಿಂದ ಪ್ರತಿವರ್ಷ 'ಸಂಘ ಶಿಕ್ಷಣ ವರ್ಗ’ ಹೆಸರಿನಲ್ಲಿ  ತರಬೇತಿ ಶಿಬಿರ ನಡೆಸಿಕೊಂಡು ಬರುತ್ತಿದೆ.  ಆದರೆ, ಈ ಹಿಂದೆ ಸಂಘಟನೆಯ ಮೇಲೆ ಸರ್ಕಾರ  ನಿಷೇಧ ವಿಧಿಸಿದ್ದಾಗ ಮಾತ್ರ  ಈ ಶಿಕ್ಷಣ ತರಬೇತಿ  ಶಿಬಿರ ನಡೆದಿರಲಿಲ್ಲ.     ಇದೇ ಮೊದಲ ಬಾರಿಗೆ   ಈ ವರ್ಷ  ಸಂಘ ಶಿಕ್ಷಣ ತರಬೇತಿಗಳನ್ನು ರದ್ದುಗೊಳಿಸಿದೆ  ಎಂದು  ಆರ್‌ಎಸ್‌ಎಸ್ ರಾಷ್ಟ್ರೀಯ  ಜಂಟಿ  ಕಾರ್ಯದರ್ಶಿ ಮನಮೋಹನ್ ವೈದ್ಯ ತಿಳಿಸಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ನಿಂದ ಮೇ ಮತ್ತು ಜೂನ್  ತಿಂಗಳ ನಡುವೆ  ಶಿಕ್ಷಣ ತರಬೇತಿ ನಡೆಸಿಕೊಂಡು ಬರುತ್ತಿದೆ.  ಸಂಘದ  ಮೇಲೆ  ನಿಷೇಧ ಹಿಂಪಡೆದ ನಂತರ  ’ಸಂಘ ಶಿಕ್ಷಣ ವರ್ಗ’  ತರಬೇತಿ ರದ್ದುಪಡಿಸುತ್ತಿರುವುದು ಇದೆ ಮೊದಲು  ಎಂದು ವೈದ್ಯ ತಿಳಿಸಿದ್ದಾರೆ.   ಪೂರ್ವ ನಿಗದಿಯಂತೆ .. ಏಪ್ರಿಲ್ ನಿಂದ ಜೂನ್ ವರೆಗೆ  ಸಂಘದ ಶಿಕ್ಷಣ ವರ್ಗ ಶಿಬಿರ   ನಡೆಸಬೇಕಾಗಿತ್ತು. ಪ್ರಸ್ತುತ ರಾಷ್ಟ್ರವ್ಯಾಪಿ ಜಾರಿಗೊಳಿಸಿರುವ ಲಾಕ್‌ಡೌನ್   ಅಂತ್ಯಗೊಳ್ಳುವ ಸಾಧ್ಯತೆಗಳಿದ್ದರೂ, ತರಬೇತಿ ಶಿಬಿರಗಳನ್ನು ಮೇ ಮತ್ತು ಜೂನ್‌ನಲ್ಲಿ ನಡೆಸಲು  ಅವಕಾಶಗಳಿದ್ದರೂ, ಆರ್ ಎಸ್ ಎಸ್  ಈ ವರ್ಷ ತರಬೇತಿ ಶಿಬಿರ ರದ್ದು ಪಡಿಸಲು   ನಿರ್ಣಯ ಕೈಗೊಂಡಿದೆ ಎಂದರು.
೨೦೧೭-೧೮ರಲ್ಲಿ ಸಂಘ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ೨೭,೮೦೦  ಶಿಬಿರಾರ್ಥಿಗಳು  ಭಾಗವಹಿಸಿದ್ದರು. ೨೦೧೮-೧೯ರಲ್ಲಿ ೨೯,೫೦೦ ಕ್ಕೂ ಹೆಚ್ಚು ಶಿಬಿರಾರ್ಥಿಗಳು  ಹಾಜರಾಗಿದ್ದರು ಎಂದು ವೈದ್ಯ ತಿಳಿಸಿದ್ದಾರೆ. ಏತನ್ಮಧ್ಯೆ, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು  ಆರ್ ಎಸ್ ಎಸ್   ಅಂಗಸಂಸ್ಥೆಗಳು  ಜನರಿಗೆ ವಿವಿಧ ರೀತಿಯಲ್ಲಿ  ಸಹಾಯ   ಚಟುವಟಿಕೆಗಳನ್ನು ಕೈಗೊಂಡಿವೆ.  ದೇಶಾದ್ಯಂತ  ಈವರೆಗೆ ೨೬,೦೦೦ ಸ್ಥಳಗಳಲ್ಲಿ ೨೫ ಲಕ್ಷ ಕುಟುಂಬಗಳಿಗೆ ಸೇವೆ ಸಲ್ಲಿಸಿವೆ  ಎಂದು ಮನಮೋಹನ್ ವೈದ್ಯ ವಿವರಿಸಿದರು.