ಅಕ್ರಮ ಬಾಂಗ್ಲಾವಾಸಿಗಳ ಬಂಧನ

ಮೈಸೂರು, ಫೆ 29 :    ಅಕ್ರಮವಾಗಿ ನಂಜನಗೂಡಿನ ಇಮ್ಮಾವು ಗ್ರಾಮದಲ್ಲಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ಇಬ್ಬರು ಯುವಕರನ್ನು ನಂಜನಗೂಡು ಪೊಲೀಸರು ಕಾರ್ಯಾಚರಣೆ‌ ನಡೆಸಿ ಬಂಧಿಸಿದ್ದಾರೆ.

ಬಾಂಗ್ಲಾದೇಶದ ಸಾತ್ಕಿರ ಜಿಲ್ಲೆಯ ಸಾಮ್ ನಗರದ ಶಿರ್ ಗುಲ್ ಘಾಟ್ ನಿವಾಸಿಗಳಾದ ಮೊಹಮದ್ ಅಬ್ದುಲ್ಲಾ(27) ಹಾಗೂ ಮೊಹಮದ್ ಹಬೀಬುಲ್ಲಾ(23) ಬಂಧಿತ ಆರೋಪಿಗಳು.

ಬಂಧಿತರು ನಂಜನಗೂಡಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿ ರಿಷಿ ಫ್ಯಾಬ್ರಿಕ್ಸ್ ನ ಬಂಧಿತರು ಉದ್ಯೋಗಿಗಳಾಗಿದ್ದರು ಎನ್ನಲಾಗಿದೆ.

ಕಳೆದ ಒಂದು ವರ್ಷದಿಂದ ಇಮ್ಮಾವು ಗ್ರಾಮದಲ್ಲಿ ವಾಸವಾಗಿದ್ದ ಬಂಧಿತರು ಶುಕ್ರವಾರ  ಪೊಲೀಸರು ನಡೆಸಿದ್ದ ಕಾರ್ಯಚರಣೆ ವೇಳೆ ಪಾಸ್ ಪೋರ್ಟ್, ವೀಸಾ ಒದಗಿಸುವಲ್ಲಿ ಯುವಕರು ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ ಪಾಸ್ ಪೋರ್ಟ್ ಕಾಯ್ದೆ 1976, ಭಾರತೀಯ ವಿದೇಶಿಯರ ಕಾಯ್ದೆ 1986ರ ಅನ್ವಯ ಬಂಧಿಸಿದ  ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.