ಟಿ.ವಿಗಳ ಪ್ರಭಾವದಿಂದ ಪರಂಪರಾಗತ ಕಲೆ,ಸಂಸ್ಕೃತಿಗಳು ನಾಶದತ್ತ
ಹಾವೇರಿ: ಟಿವಿ ಮಾಧ್ಯಮಗಳ ಪ್ರಭಾವದಿಂದ ಭಾರತೀಯ ಪಾರಂಪರಿಕ ಕಲೆ, ಸಾಹಿತ್ಯ, ಸಂಸ್ಕೃತಿ ವಿನಾಶದತ್ತ ಸಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಸ್.ಜೆ.ಎಂ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಗುರುವಾರ ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಹಾಡು, ನೃತ್ಯ, ಭರತನಾಟ್ಯ ದಂತಹ ಕಲೆಗಳು ರಾಮಾಯಣ ಮಹಾಭಾರತದಂತಹ ಸಾಹಿತ್ಯಿಕ ಕೃತಿಗಳು ನಮ್ಮ ಪರಂಪರೆಯನ್ನು ಬಿಂಬಿಸುತ್ತವೆ. ಇಂತಹ ಅದ್ಭುತ ಕಲೆಗಳು, ಸಾಹಿತ್ಯಗಳು, ನಮ್ಮ ಜನರ ಮಾನಸಿಕ ನೆಮ್ಮದಿ ಹಾಗೂ ಸಂತೋಷಕ್ಕೆ ಕಾರಣವಾಗಿದ್ದವು. ಈ ಪರಂಪರೆಯನ್ನು ಬೆಳೆಸಲು ಯುವಸೌರಭ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಯುವಪೀಳಿಗೆ ಇಂತಹ ವೇದಿಕೆಯನ್ನು ಬಳಸಿಕೊಂಡು ನಮ್ಮ ಪರಂಪರೆ ಉಳಿಸಬೇಕು ಎಂದು ಕರೆನೀಡಿದರು.
ಹೊಸಮಠದ ಬಸವಶಾಂತಲಿಂಗ ಮಾಹಾಸ್ವಾಮಿಗಳು ಮಾತನಾಡಿ, ಭಾರತ ಕಲೆಗಳ ತವರೂರು. ಕಲೆಗೆ ಸೋಲದ ಮನಸುಗಳಿಲ್ಲ.ಎಂತ ಕಲ್ಲು ಮನಸ್ಸಿನ ವ್ಯಕ್ತಿಯೂ ಕೂಡ ತಲೆಬಾಗಲೇಬೇಕು.ವ್ಯಾಪಾರ ಕುಸಿತವಾದರೆ ಅಮೇರಿಕಾ ದೇಶ ನಾಶವಾಗುತ್ತದೆ ರಾಜಕೀಯ ಕುಸಿತವಾದರೆ ಯುರೋಪ್ ದೇಶ ನಾಶವಾಗುತ್ತದೆ ಹಾಗೂ ತಂತ್ರಜ್ಞಾನ ವ್ಯವಸ್ಥೆ ಹಾಳಾದರೆ ಜಪಾನ್ ನಾಶವಾಗುತ್ತದೆ. ಅದೇ ರೀತಿ ಕಲೆ ಸಂಸ್ಕೃತಿ ಸಂಸ್ಕಾರ ಕುಸಿದರೆ ಭಾರತ ದೇಶವೇ ನಾಶವಾಗುತ್ತದೆ. ಭಾರತ ದೇಶದ ಕಲೆ ಸಂಸ್ಕೃತಿ ಸಂಸ್ಕಾರದ ಉಳಿವಿಗೆ ಎಲ್ಲರ ಶ್ರದ್ಧೆ ಶ್ರಮ ಹಾಗೂ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕಿನ ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷರಾದ ಮಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಶಶಿಕಲಾ ಹುಡೇದ, ಹಾಗೂ ಎಸ್.ಜೆ.ಎಂ ಕಾಲೇಜಿನ ಪ್ರಾಚಾರ್ಯರಾದ ಪಿ.ಬಿ.ವಿಜಯಕುಮಾರ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗೀರಿಶ್ ಬಡಿಗೇರ್ ಹಾಗೂ ವಿಕ್ರಮ್ರಿಂದ ತಬಲಾ ಸೋಲೋ, ಗಾಯತ್ರಿ ಪತ್ರಿಮಠ ಹಾಗೂ ಗಾಯತ್ರಿ ಮಾಯಾಚಾರ್ ಅವರಿಂದ ಹಿಂದೂಸ್ತಾನಿ ಸಂಗೀತ, ದೊಂಡಾಸಾ ಕಲಬುಗರ್ಿ ಹಾಗೂ ವಾರಿಣಿ ವಿ ಮನ್ನಾರಿ ಅವರಿಂದ ಸುಗಮ ಸಂಗೀತ, ಹನುಮಂತಪ್ಪ ಕರಾವಳಿ ಅವರಿಂದ ಜಾನಪದ ಸಂಗೀತ, ವಿದ್ಯಾಶ್ರೀ ಚವ್ಹಾಣ ಅವರಿಂದ ಜೋಗಿಪದ, ಶರಣಪ್ಪ ಬಡ್ಡಿಯವರಿಂದ ಭರತನಾಟ್ಯ, ದಿವ್ಯಾ ನಾಯಕ್ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಶ್ರೀಕಾಂತ್ ಅವರಿಂದ ನಂದಿಕೋಲು, ಹಜರತ್ಸಾಬ್ ಯಲಿಗಾರ ಅವರಿಂದ ಹೆಜ್ಜೆಮೇಳ, ಬಿ.ಸಿ.ವೆಂಕಟಾಪುರುಮಠ ಅವರಿಂದ ಕಥಾಕೀರ್ತನ ಹಾಗೂ ಜಮುರ ಕಲಾತಂಡದಿಂದ ಸಾಯೋ ಆಟ ನಾಟಕ ಪ್ರದರ್ಶನಗಳು ಜರುಗಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 