ಶ್ರೀ ಹನುಮಂತ ದೇವಸ್ಥಾನದಲ್ಲಿ ಅಪವಿತ್ರ ಕೃತ್ಯ; ಕಠಿಣ ಕ್ರಮಕ್ಕೆ ಅಜೀಂ ಪೀರ್ ಖಾದ್ರಿ ಆಗ್ರಹ

ಶ್ರೀ ಹನುಮಂತ ದೇವಸ್ಥಾನದಲ್ಲಿ ಅಪವಿತ್ರ ಕೃತ್ಯ; ಕಠಿಣ ಕ್ರಮಕ್ಕೆ ಅಜೀಂ ಪೀರ್ ಖಾದ್ರಿ ಆಗ್ರಹ Desecration at Sri Hanuman Temple; Azim Peer Qadri demands strict action

ಲೋಕದರ್ಶನ ವರದಿ

ಶಿಗ್ಗಾಂವಿ ೨೪:  ಪಟ್ಟಣದ ಪ್ರಸಿದ್ಧ ಶ್ರೀ ಹನುಮಂತ ದೇವಸ್ಥಾನದಲ್ಲಿ ನಡೆದಿರುವ ಅಪವಿತ್ರ ಹಾಗೂ ಹೇಯ ಕೃತ್ಯವನ್ನು ಎಐಸಿಸಿ ಅಧ್ಯಕ್ಷ ಅಜೀಂ ಪೀರ್ ಖಾದ್ರಿ ತೀವ್ರವಾಗಿ ಖಂಡಿಸಿದ್ದು, ಕೃತ್ಯ ಎಸಗಿದ ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ಕಠಿಣ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. 

ಪಟ್ಟಣದ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಅನೇಕ ಮಹಾತ್ಮರು ನೆಲೆಸಿದ್ದ ಪುಣ್ಯಭೂಮಿಯಾಗಿದ್ದು, ಶರಣರ ನಾಡು ಹಾಗೂ ಶಾಂತಿಯ ತೋಟವಾಗಿದೆ. ಇಲಿ  ಬಾಂಧವರು ಅಣ್ಣ-ತಮ್ಮಂದಿರAತೆ ಸೌಹಾರ್ದದಿಂದ ಬದುಕುತ್ತಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಹೊರಗಿನಿಂದ ಬಂದ ವ್ಯಕ್ತಿಯೊಬ್ಬ ಇಂತಹ ದುಷ್ಕöÈತ್ಯ ಎಸಗಿರುವುದು ಎಲ್ಲರಿಗೂ ತೀವ್ರ ನೋವು ಹಾಗೂ ಆಘಾತ ಉಂಟುಮಾಡಿದೆ ಎಂದರು. 

ಕೃತ್ಯ ಎಸಗಿದ ಆರೋಪಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವುದರ ಜೊತೆಗೆ, ತಪ್ಪಿತಸ್ಥನಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು. ಮುಂದೆ ಯಾರೂ ಇಂತಹ ಕೃತ್ಯಕ್ಕೆ ಕೈಹಾಕದಂತೆ ಪೊಲೀಸರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು. 

ದೇವಸ್ಥಾನದೊಂದಿಗೆ ವೈಯಕ್ತಿಕ ನಂಟು 

“ನಾನು ಈ ಆಂಜನೇಯ ದೇವಸ್ಥಾನದ ಪರಮ ಭಕ್ತ. ಪ್ರತಿವರ್ಷ ದೇವಸ್ಥಾನದ ಕಮಿಟಿಯವರು ಹಾಗೂ ಹಿಂದೂ ಬಾಂಧವರು ನನ್ನನ್ನು ಗೌರವದಿಂದ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ನಾನು ದೇವಸ್ಥಾನಕ್ಕೆ ಬಂದು ದರ್ಶನ ಪಡೆದು, ಪ್ರಸಾದ ಹಾಗೂ ಅನ್ನಸಂತರ್ಪಣೆಯಲ್ಲಿ ಭಾಗವಹಿಸುತ್ತೇನೆ. ಇಂತಹ ಪವಿತ್ರ ಸ್ಥಳಕ್ಕೆ ಅಪಚಾರವಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ,” ಎಂದು ಖಾದ್ರಿ ಹೇಳಿದರು. 

ಆರೋಪಿಗೆ ಪಟ್ಟಾ ನೀಡಿರುವ ಬಗ್ಗೆ ತನಿಖೆಗೆ ಆಗ್ರಹ 

ಆರೋಪಿಗೆ ಪಟ್ಟಾ ನೀಡಲಾಗಿದೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ತಾಲೂಕಿನಲ್ಲಿ ಅನೇಕ ಬಡವರು ಇದ್ದರೂ ಅವರಿಗೆ ನಿವೇಶನ ನೀಡದೆ ಆರೋಪಿಗೆ ಯಾರು, ಏಕೆ ಪಟ್ಟಾ ನೀಡಿದ್ದಾರೆ ಎಂಬುದರ ಕುರಿತು ಪುರಸಭೆಯ ಮುಖ್ಯ ಅಧಿಕಾರಿಗಳಿಂದ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು. 

ಬಂದ್ಗೆ ಕರೆ: ಶಾಂತಿ ಕಾಪಾಡುವಂತೆ ಮನವಿ 

ಈದ್ ಮಿಲಾದ್ ಅಂಗವಾಗಿ ಕರೆ ನೀಡಲಾಗಿದ್ದ ಬಂದ್ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಅಥವಾ ಬಂದ್ ನಡೆಸುವುದು ಸಂಬAಧಪಟ್ಟವರ ಹಕ್ಕು. ಆದರೆ ಶಾಂತಿಪ್ರಿಯ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜಯಂತಿ ಹಿನ್ನೆಲೆಯಲ್ಲಿ ಬಂದ್ ಹಿಂಪಡೆಯುವAತೆ ಅಂಜುಮನ್ ಸಂಸ್ಥೆಯವರು ಹಿಂದೂ ಬಾಂಧವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು. 

ಯಾವುದೇ ಧರ್ಮಕ್ಕೆ ನೋವುಂಟಾಗದAತೆ ಹಾಗೂ ರಾಜಕೀಯ ಬೆರೆಸದಂತೆ ಎಲ್ಲರೂ ಒಗ್ಗಟ್ಟಿನಿಂದ ದೇವಸ್ಥಾನದಲ್ಲಿ ನಡೆದ ಕೃತ್ಯವನ್ನು ಖಂಡಿಸಬೇಕು ಎಂದು ಅವರು ಮನವಿ ಮಾಡಿದರು. 

 ರಾಜಕೀಯ ಮಾಡಬಾರದು’ 

ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಖಾದ್ರಿ, “ಇದರಲ್ಲಿ  ಎಂಬ ರಾಜಕಾರಣ ಇಲ್ಲ. ಬೊಮ್ಮಾಯಿ ಅವರು ಶಾಸಕರಾಗಿ, ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರು ಯಾವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ,” ಎಂದರು. 

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದ ಜನರ ಪರವಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಸೇರಿದಂತೆ ಎಲ್ಲರೂ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.